ಅಲೆವೂರು : ಮನೆಗೆ ನುಗ್ಗಿ 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು – Vishwanews24
ಅಲೆವೂರು : ಮನೆಗೆ ನುಗ್ಗಿ 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಅಲೆವೂರು: ಶಿವಳ್ಳಿ ಗ್ರಾಮದ ನೆಹರು ನಗರದ ನಗರ ಮೂಡು ಅಲೆವೂರಿನಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಉಡುಪಿಯ ಶಿವಳ್ಳಿ ಗ್ರಾಮದ ನೆಹರು ನಗರದ ಮೂಡು ಅಲೆವೂರಿನ ದಿವಾಕರ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಫೆ.18 ರ ಬೆಳಿಗ್ಗೆಯಿಂದ ಮರುದಿನ ಬೆಳಿಗ್ಗೆಯ ಮಧ್ಯಾವಧಿಯಲ್ಲಿ ಮನೆಗೆ ನುಗ್ಗಿದ ಕಳ್ಳರು ಮನೆಯ ಕೋಣೆಯಲ್ಲಿ ಇದ್ದ 2,40,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ದಿವಾಕರ ಪೂಜಾರಿ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.7ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ – ಡಿ.ಕೆ ಶಿವಕುಮಾರ್ – Vishwanews24
