ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ : ಎರಡು ತಿಂಗಳ ಬಳಿಕ ಜೈಲಿನಿಂದ ಹೊರ ಬಂದ ರಾಜ್ ಕುಂದ್ರಾ -Vishwanews24
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ : ಎರಡು ತಿಂಗಳ ಬಳಿಕ ಜೈಲಿನಿಂದ ಹೊರ ಬಂದ ರಾಜ್ ಕುಂದ್ರಾ -Vishwanews24
ಮುಂಬೈ, : ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಸುಮಾರು 60 ದಿನಗಳ ಬಳಿಕ ಸೆ.21ರ ಮಂಗಳವಾರ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದರು.
ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಹೊರ ಬಂದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೆ ತಮ್ಮ ಕಾರಿನಲ್ಲಿ ಹೊರಟು ಹೋದರು. ಕಳೆದ ಜುಲೈ ತಿಂಗಳಿನಲ್ಲಿ ಮುಂಬೈ ಅಪರಾಧ ಇಲಾಖೆಯ ಪೊಲೀಸರು ಬಂಧಿಸಿದ್ದು ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಮುಂಬೈ ನ್ಯಾಯಾಲಯಕ್ಕೆ ಕುಂದ್ರಾ ವಿರುದ್ಧ ಇತ್ತೀಚಿಗಷ್ಟೆ 1500 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಕುಂದ್ರಾ ಅವರು 60 ದಿನಗಳ ಜೈಲಿನಲ್ಲಿ ಕಳೆದ ನಂತರ 50,000 ರೂ.ಗಳ ಶ್ಯೂರಿಟಿ ಮೇರೆಗೆ ಜಾಮೀನು ಪಡೆದರು. ಮುಂಬೈ ಸೆಷನ್ಸ್ ನ್ಯಾಯಾಲಯವು ಕುಂದ್ರಾ ಮತ್ತು ಆತನ ಸಹ -ಆರೋಪಿ ರಯಾನ್ ಥಾರ್ಪೆಗೆ ಜಾಮೀನು ಮಂಜೂರು ಮಾಡಿತು. ಇವರಿಬ್ಬರೂ ಜುಲೈ 19 ರಂದು ಬಂಧನಕ್ಕೊಳಗಾಗಿದ್ದರು. ಕುಂದ್ರಾ ಅವರು ತಮ್ಮ ಬಂಧನದ ದಿನದಿಂದ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದರು.
