ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ -vishwanews24

Featured, ರಾಜ್ಯ ನ್ಯೂಸ್

ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ

ಬೆಂಗಳೂರುಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ. ಕೊಡದೆ ಎಲ್ಲಿ ಹೋಗುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ತೀಕ್ಷ್ಣವಾಗಿ ಹೇಳಿದರು.

ಸೋಮವಾರ ಸುದ್ದಿಗಾರರು ಆರೆಸ್ಸೆಸ್‌ನಿಂದ ಉತ್ತರ ಬಂತಾ ಎಂದು ಕೇಳಿದಾಗ, ನೂರು ವರ್ಷದ ಸಂಸ್ಥೆ, ಎಲ್ಲಿಯೋ ಇಟ್ಟಿರುತ್ತಾರೆ ಕಾಗದಗಳು, ಹುಡುಕಲು ಸಮಯ ಬೇಕಾಗುತ್ತದೆ. ಹೇಗೆ ನಾವು ನೀವು ಎಲ್ಲರೂ ಸೇರಿ ಅವರ ನೂರು ವರ್ಷಗಳ ಸಾಧನೆಗಳನ್ನು ಹುಡುಕುತ್ತಿರುವಂತೆಯೇ ಅವರೂ (ಆರೆಸ್ಸೆಸ್‌ನವರೂ) ಕಾಗದಗಳನ್ನು ಹುಡುಕುತ್ತಿರಬೇಕು ಎಂದು ಕಾಲೆಳೆದರು.

ದಾಖಲೆಗಳು ನಾಗ್ಪುರದಲ್ಲಿ ಇದೆಯೋ, ಕೇಶವ ಕೃಪದಲ್ಲಿ ಇದೆಯೋ ಅಥವಾ ಯಾರಾದರೂ ಕರಸಂಘ ಚಾಲಕನ ಮನೆಯಲ್ಲಿ ಇದೆಯೋ ಗೊತ್ತಿಲ್ಲ ಎಂದರು. ಪೊಲೀಸ್‌ ಅಧಿಕಾರಿಗಳಿಗೆ ಮೊದಲ ಪಾಠವೇ ತಾಳ್ಮೆ ಸಮಾಧಾನ. ನಾನು ಆ ಇಲಾಖೆ ಮಂತ್ರಿ ಆಗಿದ್ದೇನೆ. ಹಾಗಾಗಿ, ಸಮಾಧಾನದಿಂದ ಕಾಯೋಣ ಎಂದರು.

Leave a Reply