ಆರ್‌ಸಿಬಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಗೆಲುವಿನ ‘ಶ್ರೇಯ’ ಎಬಿ ಡಿ ಗೆ ಸಲ್ಲುತ್ತದೆ : ವಿರಾಟ್ ಕೊಹ್ಲಿ – Vishwanews24

Featured, ರಾಷ್ಟ್ರ ನ್ಯೂಸ್

ಆರ್‌ಸಿಬಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಗೆಲುವಿನ ‘ಶ್ರೇಯ’ ಎಬಿ ಡಿ ಗೆ ಸಲ್ಲುತ್ತದೆ : ವಿರಾಟ್ ಕೊಹ್ಲಿ – Vishwanews24

ಮುಂಬೈ: ಮುಂಬರುವ ಋತುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಗೆಲುವಿನ ‘ಶ್ರೇಯ’ ಎಬಿ ಡಿವಿಲಿಯರ್ಸ್‌ಗೆ ಸಲ್ಲುತ್ತದೆ ಎಂದು ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆರ್‌ಸಿಬಿ ಬೋಲ್ಡ್‌ ಡೈರಿಸ್‌ನಲ್ಲಿ ಮಾತನಾಡಿರುವ ಕೊಹ್ಲಿ ‘ಮುಂಬರುವ ಋತುಗಳಲ್ಲಿ ನಾವು (ಆರ್‌ಸಿಬಿ) ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರೆ, ಆ ಶ್ರೇಯ ಡಿವಿಲಿಯರ್ಸ್‌ಗೂ ಸಲ್ಲುತ್ತದೆ. ಗೆಲುವಿನ ಬಳಿಕ ಮೊದಲು ಮನಸ್ಸಿನಲ್ಲಿ ಸುಳಿಯುವುದೂ ಅವರೇ..’ ಎಂದು ಹೇಳಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ದಂತ ಕಥೆ ಡಿವಿಲಿಯರ್ಸ್ ಕಳೆದ ವರ್ಷ ನವೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2011ರಿಂದ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಆರಂಭಿಸಿದ್ದ ಅವರು, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಇತರೆ ಆಟಗಾರರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.

ಇಷ್ಟು ವರ್ಷಗಳ ಕಠಿಣ ಪರಿಶ್ರಮದ ನಂತರ ನಾನು ಆಟವನ್ನು ಅನುಭವಿಸುವುದರ ಜತೆಗೆ, ಡಿವಿಲಿಯರ್ಸ್ ಬಗ್ಗೆಯೂ ಯೋಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಡಿವಿಲಿಯರ್ಸ್ ಮನೆಯಿಂದ ಐಪಿಎಲ್‌ ವೀಕ್ಷಿಸುತ್ತಿದ್ದರೂ ಸಹ ಅದು ಅವರಿಗೆ ಬಹಳಷ್ಟು ಅರ್ಥವನ್ನು ನೀಡುತ್ತದೆ. ಅವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ವಿಶೇಷ ವ್ಯಕ್ತಿಯಾಗಿದ್ದರು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ : ಹಿಜಾಬ್‌ ಕಾನೂನು ಹೋರಾಟ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು – Vishwanews24

 

Leave a Reply