ಆಸ್ಕರ್ ಪ್ರಶಸ್ತಿಯಿಂದ ಭಾರತವು ಹೆಮ್ಮೆಪಡುತ್ತದೆ ; RRR ತಂಡವನ್ನು ಅಭಿನಂದಿಸಿದ ಪ್ರಧಾನಿ – Vishwanews24
ನಾಟು ನಾಟು’ ಎಂದೆಂದಿಗೂ ನೆನಪಿನಲ್ಲಿ ಉಳಿಯುವ ಹಾಡು; RRR ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ
ನವದೆಹಲಿ: 95ನೇ ಅಕಾಡೆಮಿ ಅವಾರ್ಡ್ಸ್ನಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿರುವ ‘ನಾಟು ನಾಟು’ ವೈರಲ್ ಗೀತೆಗಾಗಿ ಸಂಗೀತ ಸಂಯೋಜಕ ಎಂಎಂ ಕೀರವಾಣಿ, ಗೀತರಚನೆಕಾರ ಚಂದ್ರಬೋಸ್ ಮತ್ತು ಜಾಗತಿಕ ಹಿಟ್ ಚಿತ್ರ ಆರ್ಆರ್ಆರ್ನ ಇಡೀ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅಭಿನಂದಿಸಿದ್ದಾರೆ.
ಇದು ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಿರ್ಮಾಣವಾಗಿದೆ. ಗೆಲುವನ್ನು ‘ಅಸಾಧಾರಣ’ ಎಂದು ಕರೆದ ಪ್ರಧಾನಿ, ‘ನಾಟು ನಾಟು’ ಜನಪ್ರಿಯತೆ ಜಾಗತಿಕವಾಗಿದೆ ಮತ್ತು ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು ಎಂದು ಹೇಳಿದರು.
Exceptional!
The popularity of ‘Naatu Naatu’ is global. It will be a song that will be remembered for years to come. Congratulations to @mmkeeravaani, @boselyricist and the entire team for this prestigious honour.
India is elated and proud. #Oscars https://t.co/cANG5wHROt
— Narendra Modi (@narendramodi) March 13, 2023
ಆಸ್ಕರ್ ಪ್ರಶಸ್ತಿಯಿಂದ ಭಾರತವು ಉತ್ಸುಕವಾಗಿದೆ ಮತ್ತು ಹೆಮ್ಮೆಪಡುತ್ತದೆ. ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
