Featured

ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ – Vishwanews24

ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ – Vishwanews24

ಬೆಂಗಳೂರು: ಹೊಸ ವರ್ಷ ಆಚರಣೆ ಮತ್ತು ಓಮೈಕ್ರಾನ್  ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ  ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದೆ. ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಜನರನ್ನು ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ನೈಟ್ ಕರ್ಫ್ಯೂ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು‌ 10 ಗಂಟೆಗೆ ಎಲ್ಲಾ ಡಿಸಿಪಿಗಳನ್ನು‌ ಆಹ್ವಾನಿಸಿದ್ದು, ಸಭೆ ನಡೆಸಲಿದ್ದಾರೆ. ಯಾವೆಲ್ಲ ಬಂದೋಬಸ್ತ್ ಮಾಡಿಕೊಂಡಿದ್ದೀರಿ, ಎಲ್ಲೆಲ್ಲಿ ಬ್ಯಾರಿಗೇಟ್ ಹಾಕಬೇಕು ಅನ್ನೋದರ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಬಾರ್, ಪಬ್ , ರೆಸ್ಟೋರೆಂಟ್ ಗಳ ಮೇಲೆ ತೀವ್ರ ನಿಗಾ ಇರಿಸಬೇಕು. ಯಾವುದೇ ಕಾರಣಕ್ಕೂ ರಾತ್ರಿ 10 ಗಂಟೆ ಬಳಿಕ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಇರದಂತೆ ನೋಡಬೇಕು. 9 ಗಂಟೆಯಿಂದಲೇ ಮೈಕ್ ಮೂಲಕ ಅನೌನ್ಸ್ ಮಾಡುತ್ತಿರಬೇಕು. ಜೊತೆಗೆ ಹೊಯ್ಸಳಗಳು ಸದಾ ಗಸ್ತಿನಲ್ಲಿ ಇರುವಂತೆ ಪೊಲೀಸ್ ಕಮೀಷನರ್ ಈಗಾಗಲೇ ಸೂಚನೆ ನೀಡಿದ್ದಾರೆ.

ನೈಟ್ ಕರ್ಪ್ಯೂ ವೇಳೆಯಲ್ಲಿ ಎನಿರುತ್ತೆ ಎನಿರಲ್ಲ.?

ನೈಟ್ ಕರ್ಪ್ಯೂ ವೇಳೆಯಲ್ಲಿ ರೋಗಿಗಳು ಮತ್ತು ಅವರ ಸಹಾಯಕರು ಓಡಾಡಬಹುದು. ತುರ್ತು ಸೇವೆಗಳು ಓಪನ್ ಇರಲಿದೆ

ಕಂಪನಿ ನೌಕರರು,‌ ಕಾರ್ಖಾನೆಯ ಕಾರ್ಮಿಕರು ಐಡಿ ಕಾರ್ಡ್ ತೋರಿಸಿ ಓಡಾಡಬಹುದು.

ಗೂಡ್ಸ್ ಸೇವೆ ಇರಲಿದೆಬಸ್ , ರೈಲು, ವಿಮಾನ ಸೇವೆ ಇರಲಿದೆ

ಬಸ್ ಟಿಕೆಟ್ ತೋರಿಸಿ ಓಡಾಟ ನಡೆಸಬಹುದು

ಎಲ್ಲಾ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ

ಅಗತ್ಯ ಸೇವೆ ಒದಗಿಸುವ ವಾಹನಕ್ಕೆ ಅನುಮತಿ

ಫುಡ್​ ಹೋಂ ಡೆಲಿವರಿಗೆ ಅನುಮತಿ

ಇ-ಕಾಮರ್ಸ್, ಖಾಲಿ ವಾಹನ ಸಂಚಾರಕ್ಕೆ ಅವಕಾಶ

ದೂರ ಪ್ರಯಾಣದ ಬಸ್​ಗಳಿಗೆ ಅನುಮತಿ

ಆಟೋ, ಕ್ಯಾಬ್​ಗೆ ಅವಕಾಶ

ನೈಟ್​ಕರ್ಪ್ಯೂ ವೇಳೆ ಬಾರ್, ಪಬ್ ಬಂದ್

ಲೇಟ್​ನೈಟ್ ಪಾರ್ಟಿ, ಸಮಾರಂಭಗಳಿಗೆ ಬ್ರೇಕ್

ಎಲ್ಲಾ ಫುಡ್ ಸ್ಟ್ರೀಟ್​​ಗಳು ಬಂದ್

ಪಬ್,ಬಾರ್, ಕ್ಲಬ್​​, ಹೋಟೆಲ್​ಗಳ್ಲಿ ಡಿಸೆಂಬರ್ 28ರಿಂದ 10 ದಿನ ಶೇ.50ರಷ್ಟು ಮಾತ್ರ ಅವಕಾಶ

ಸಿನೆಮಾ ಥಿಯೇಟರ್ ಬಂದ್

ರಾಜ್ಯದಲ್ಲಿ ಹೊಸವರ್ಷಕ್ಕೆ ಹೊಸ ನಿಯಮ ಜಾರಿಯಾಗಲಿದೆ. ರಾಜ್ಯಾದ್ಯಂತ ಡಿ.28ರಿಂದ 10 ದಿನ ನೈಟ್ ಕರ್ಫ್ಯೂ ಇರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಹೊಸ ವರ್ಷಾಚರಣೆ ನಿಷೇಧ ಮಾಡಲಾಗಿದೆ. ಪಬ್, ಬಾರ್, ಕ್ಲಬ್​​, ಹೋಟೆಲ್​ಗಳ್ಲಿ ಡಿಸೆಂಬರ್ 28ರಿಂದ 10 ದಿನ ಶೇ.50ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಸಿನಿಮಾಗೆ 50% ಅನ್ವಯ ಆಗಲ್ಲ. ನೈಟ್ ಕರ್ಪ್ಯೂ ವೇಳೆ ಸಿನಿಮಾ ಬಂದ್ ಇರಲಿದೆ. ಆಮೇಲೆ ಪರಿಸ್ಥಿತಿ ‌ನೋಡಿಕೊಂಡು ಸಿಎಂ ತೀರ್ಮಾನ ಮಾಡ್ತಾರೆ ಎಂದು ಆರೋಗ್ಯ ಸುಧಾಕರ್ ಹೇಳಿದ್ದಾರೆ.

Vishwa News 24

Recent Posts

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಜಿಲ್ಲೆ…

2 hours ago

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು – vishwanews24

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…

7 hours ago

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ – vishwanews24

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…

9 hours ago

ಮಂಗಳೂರು: ಯುವತಿ ನಾಪತ್ತೆ ; ಪೋಲಿಸರಿಂದ ಪತ್ತೆಗೆ ಮನವಿ – vishwanews24

ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…

10 hours ago

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ – vishwanews24

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…

10 hours ago

ಮುಂಬೈ : ಭಾರೀ ಮಳೆ – ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು – vishwanews24

ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…

10 hours ago