ಇಂದಿನ ರಾಜಕಾರಣದ ಬಗ್ಗೆ ಮಾತನಾಡಲು ಅಸಹ್ಯವಾಗುತ್ತಿದೆ : ರೇಣುಕಾಚಾರ್ಯ -Vishwanews24

Featured, ರಾಜ್ಯ ನ್ಯೂಸ್

ಇಂದಿನ ರಾಜಕಾರಣದ ಬಗ್ಗೆ ಮಾತನಾಡಲು ಅಸಹ್ಯವಾಗುತ್ತಿದೆ : ರೇಣುಕಾಚಾರ್ಯ -Vishwanews24

ಬೆಂಗಳೂರು: ಇಂದಿನ ರಾಜಕಾರಣದ ಬಗ್ಗೆ ಮಾತನಾಡಲು ಅಸಹ್ಯವಾಗುತ್ತಿದೆ. ಈ ರಾಜಕಾರಣವೇ ಬೇಡ ಎನಿಸಿದೆ. ಅಷ್ಟು ಮನಸ್ಸಿಗೆ ನೋವಾಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದಗೌಡರನ್ನು ಕ್ಯಾಬಿನೆಟ್‌ನಿಂದ ಕೈ ಬಿಟ್ಟ ಕಾರಣ ಅವರು ರಾಜ್ಯ ರಾಜಕಾರಣದತ್ತ ಬರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, “ನಾನು ರಾಷ್ಟ್ರಮಟ್ಟದ ರಾಜಕಾರಣದ ಬಗ್ಗೆ ಮಾತನ್ನಾಡುವವಷ್ಟು ದೊಡ್ಡವನು ಅಲ್ಲ. ನನ್ನ ಕ್ಷೇತ್ರದ ಬಗ್ಗೆ ಕೇಳಿ ಪ್ರತಿಕ್ರಿಯೆ ನೀಡುತ್ತೇನೆ. ಕೋವಿಡ್-19 ಬಗ್ಗೆ ಕೇಳಿ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ದೆಹಲಿಗೆ ಬಿಜೆಪಿ ಶಾಸಕರ ನಿಯೋಗ ಕೊಂಡ್ಯೊಯ್ಯುವ ವಿಚಾರವಾಗಿ ಮಾತನಾಡಿದ ಅವರು, “ಪಕ್ಷದ ಬಗ್ಗೆ, ನಾಯಕರ ಬಗ್ಗೆ ಅವರ ವಿರುದ್ಧ ಮಾತನ್ನಾಡುವವರನ್ನು ಕೇಂದ್ರದ ನಾಯಕರು ಗಮನಿಸುತ್ತಾರೆ. ಯಾರೆಲ್ಲಾ ಮಾತನ್ನಾಡುತ್ತಾರೆಯೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಕೇಂದ್ರದ ಬಳಿ ನಿಯೋಗ ಕೊಂಡ್ಯೊಯ್ಯಬೇಕೇ, ಬೇಡವೇ ಎಂಬುದನ್ನು ಚರ್ಚಿಸುತ್ತೇವೆ ಎಂದರು.