ನವದೆಹಲಿ: ದೇಶದ 9.34 ಕೋಟಿಗೂ ಅಧಿಕ ರೈತರಿಗೆ ಇಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣ ವರ್ಗಾವಣೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಇಂದು ಬೆಳಗ್ಗೆ 10 ಗಂಟೆಗೆ ಗುಜರಾತ್‌ನ ಬನಸ್ಕಾಂಠ ಜಿಲ್ಲೆಯ ಭಿಲ್ಡಿಯಲ್ಲಿ ಹಣ ಬಿಡುಗಡೆಯಾಗಲಿದೆ. ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂಪಾಯಿ ನೇರ ಜಮೆಯಾಗಲಿದೆ.
ಇದನ್ನೂ ಓದಿ:
ಒಟ್ಟು 18,690 ಕೋಟಿ ರೂಪಾಯಿಗೂ ಅಧಿಕ ಮೊತ್ತ ವರ್ಗಾವಣೆ ಆಗಲಿದೆ. ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ 6,000 ರೂಪಾಯಿ ಆರ್ಥಿಕ ನೆರವು ಸಿಗಲಿದೆ.
ಮೂರು ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಹಣ ಪಾವತಿ ಮಾಡಲಾಗುವುದು. ಈ ಹಿಂದೆ ಜೂನ್ 20ರಂದು 23ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಇ-ಕೆವೈಸಿ, ಆಧಾರ್ ಜೋಡಣೆ ಹಾಗೂ ಭೂ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿದ ಅರ್ಹ ರೈತರಿಗೆ ಮಾತ್ರ ಹಣ ಲಭ್ಯವಾಗಲಿದೆ.
ಇದನ್ನೂ ಓದಿ:
ಕಾಂಗ್ರೆಸ್ ಬ್ಯಾಂಕ್ ಗಳನ್ನು ನಿರ್ಮಿಸಿತು, ಬಿಜೆಪಿ ಅವುಗಳನ್ನು ಮಾರಾಟ ಮಾಡುತ್ತಿದೆ : : IDBI ಬ್ಯಾಂಕ್ ಖಾಸಗೀಕರಣದ ವಿರುದ್ಧ ರಾಹುಲ್…
ನ. 15ರೊಳಗೆ ಉಡುಪಿ ಜಿಲ್ಲಾಸ್ಪತ್ರೆ ಲೋಕಾರ್ಪಣೆ ದಿನಾಂಕ ಘೋಷಿಸಿ: ಆರೋಗ್ಯ ಸಚಿವರಿಗೆ ಯಶ್ಪಾಲ್ ಸುವರ್ಣ ಒತ್ತಾಯ ಉಡುಪಿ: ಉಡುಪಿ ಜಿಲ್ಲೆಯ…
ಸೌಜನ್ಯ ಪ್ರಕರಣ: ಶಶಿಕುಮಾರ್ ಬದಲಿಗೆ ಚೇತನ್ ಸಿಂಗ್ ರಾಥೋಡ್ ಅವರನ್ನು ಎಸ್‌ಐಟಿ ಮುಖ್ಯಸ್ಥರಾಗಿ ನೇಮಕ ಮಂಗಳೂರು : ಸೌಜನ್ಯ ಅತ್ಯಾಚಾರ…
ಉಡುಪಿ: ನವೆಂಬರ್ ಮೂರನೇ ವಾರದಲ್ಲಿ ಮಂಗಳೂರಿಗೆ ವಂದೇ ಭಾರತ್ ರೈಲು ಆಗಮನ; ರೈಲ್ವೆ ಸಚಿವರಿಂದ ಭರವಸೆ : ಸಂಸದ ಕೋಟ…
ಉಡುಪಿ: ಸ್ವಯಂಪ್ರೇರಿತ ರಕ್ತದಾನ, ದಿವ್ಯಾಂಗರಿಗೆ ಪೌಷ್ಟಿಕ ಆಹಾರ ವಿತರಿಸಿ ರಮೇಶ್ ಕಾಂಚನ್ ಹುಟ್ಟುಹಬ್ಬ ಆಚರಣೆ ರಮೇಶ್ ಕಾಂಚನ್ ಅವರು ಸಮಾಜಮುಖಿ…
ಉಡುಪಿ: ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ, ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಪ್ರಕರಣ; ಆರೋಪಿ ಬಂಧನ ಉಡುಪಿ: ಬಾಡಿಗೆ…