Featured

ಕಾಂಗ್ರೆಸ್ ಬ್ಯಾಂಕ್‌ ಗಳನ್ನು ನಿರ್ಮಿಸಿತು, ಬಿಜೆಪಿ ಅವುಗಳನ್ನು ಮಾರಾಟ ಮಾಡುತ್ತಿದೆ : ರಾಹುಲ್ ಗಾಂಧಿ ವಾಗ್ದಾಳಿ – vishwanews24

ಕಾಂಗ್ರೆಸ್ ಬ್ಯಾಂಕ್‌ ಗಳನ್ನು ನಿರ್ಮಿಸಿತು, ಬಿಜೆಪಿ ಅವುಗಳನ್ನು ಮಾರಾಟ ಮಾಡುತ್ತಿದೆ : : IDBI ಬ್ಯಾಂಕ್ ಖಾಸಗೀಕರಣದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಲ್ಲಿ: ‘ಕಾಂಗ್ರೆಸ್ ಬ್ಯಾಂಕ್‌ ಗಳನ್ನು ನಿರ್ಮಿಸಿತು, ಬಿಜೆಪಿ ಅವುಗಳನ್ನು ಮಾರಾಟ ಮಾಡುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

IDBI ಬ್ಯಾಂಕ್‌ ನ ಹೆಚ್ಚಿನ ಷೇರುಗಳನ್ನು ಕೆನಡಾದ ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್‌ಗೆ  ಮಾರಾಟ ಮಾಡಲು ಕೇಂದ್ರ ಸರಕಾರ ನಿರ್ಧರಿಸಿರುವುದಕ್ಕೆ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಮಾರಾಟದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಉದ್ಯೋಗಿಗಳಿಗೆ ಅವರು ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ :

ತೆರಿಗೆದಾರರ ಹಣದಿಂದ ನಿರ್ಮಾಣವಾಗಿ, ಉದ್ಯೋಗಿಗಳ ಪರಿಶ್ರಮದಿಂದ ಲಾಭದಾಯಕವಾಗಿರುವ ಸಾರ್ವಜನಿಕ ಬ್ಯಾಂಕ್ ಅನ್ನು ಮಾರಾಟ ಮಾಡುವ ಅಗತ್ಯವೇನಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ, ಈ ನಿರ್ಧಾರದಿಂದ ಉದ್ಯೋಗಿಗಳು ಮತ್ತು ಠೇವಣಿದಾರರ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ, ಖಾಸಗೀಕರಣದಿಂದ ಮೀಸಲಾತಿ ನೀತಿಯ ಮೇಲೂ ಪರಿಣಾಮ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, IDBI ಬ್ಯಾಂಕ್ ಮಾರಾಟದ ಮೌಲ್ಯಮಾಪನ ಪ್ರಕ್ರಿಯೆಯೂ ಚರ್ಚೆಗೆ ಗ್ರಾಸವಾಗಿದೆ. ‘ಬಿಸಿನೆಸ್‌ವರ್ಲ್ಡ್’ ನಡೆಸಿದ ತನಿಖೆಯು, ಮೌಲ್ಯಮಾಪನ ಪ್ರಕ್ರಿಯೆಯನ್ನು ಪರಿಷ್ಕರಿಸಿದ ಸಮಯ ಹಾಗೂ ಅದರಲ್ಲಿ ಅನುಸರಿಸಿದ ವಿಧಾನದಲ್ಲಿನ ಬದಲಾವಣೆಗಳ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದೆ.

ಇದನ್ನೂ ಓದಿ :

ಕಳೆದ ವರ್ಷ ಮಾರ್ಚ್‌ ನಲ್ಲಿ ಸಂಸತ್ ಭವನದಲ್ಲಿ IDBI ಬ್ಯಾಂಕ್ ಉದ್ಯೋಗಿಗಳ ಗುಂಪೊಂದನ್ನು ಭೇಟಿಯಾಗಿದ್ದ ಸಂದರ್ಭವನ್ನು ರಾಹುಲ್ ಗಾಂಧಿ ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ. ತಮ್ಮ ಪರಿಶ್ರಮದಿಂದ ಬ್ಯಾಂಕ್ ಅನ್ನು ಲಾಭದಾಯಕವಾಗಿಸಿದರೂ ಸರಕಾರ ಅದನ್ನು ಏಕೆ ಮಾರಾಟ ಮಾಡುತ್ತಿದೆ ಎಂಬುದು ಉದ್ಯೋಗಿಗಳ ಪ್ರಶ್ನೆಯಾಗಿತ್ತು ಎಂದು ತಿಳಿಸಿದ್ದಾರೆ.

“ನಾನು ಈ ಪ್ರಶ್ನೆಯನ್ನು ಲೋಕಸಭೆಯಲ್ಲಿಯೂ ಎತ್ತಿದ್ದೆ. ಲಾಭದಾಯಕ ಸಾರ್ವಜನಿಕ ಬ್ಯಾಂಕ್ ಅನ್ನು ಏಕೆ ಮಾರಾಟ ಮಾಡಲಾಗುತ್ತಿದೆ? ಅದರ ಉದ್ಯೋಗಿಗಳು ಮತ್ತು ಠೇವಣಿದಾರರ ಹಿತಾಸಕ್ತಿಗಳನ್ನು ಹೇಗೆ ರಕ್ಷಿಸಲಾಗುತ್ತದೆ? ಎಂದು ಪ್ರಶ್ನಿಸಿದ್ದೆ. ಆದರೆ, ಸರಕಾರ ಯಾವುದೇ ಕಾರಣ ನೀಡಲಿಲ್ಲ. ಇದೀಗ IDBI ಬ್ಯಾಂಕ್ ಅನ್ನು ಕೆನಡಾದ ಫೇರ್‌ಫ್ಯಾಕ್ಸ್ ಕಂಪೆನಿಗೆ ಮಾರಾಟ ಮಾಡಲು ನಿರ್ಧರಿಸಿದೆ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

Vishwa News 24

Recent Posts

ಮಂಗಳೂರು: ಕಂಬಳದಲ್ಲಿ ಗೆದ್ದ ಚಿನ್ನದ ಪದಕ ಅನಾರೋಗ್ಯಪೀಡಿತ ಮಾಜಿ ಕಾರ್ಮಿಕನಿಗೆ ಉಡುಗೊರೆ: ಪದವು ಕಾನಡ್ಕ ತಂಡದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ – vishwanews24

ಮಂಗಳೂರು: ಕಂಬಳದಲ್ಲಿ ಗೆದ್ದ ಚಿನ್ನದ ಪದಕ ಅನಾರೋಗ್ಯಪೀಡಿತ ಮಾಜಿ ಕಾರ್ಮಿಕನಿಗೆ ಉಡುಗೊರೆ: ಪದವು ಕಾನಡ್ಕ ತಂಡದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ…

11 minutes ago

ಪೋಕ್ಸೊ ಪ್ರಕರಣ: ಮಂಗಳೂರಿನ ಚರ್ಚ್ ಫಾದರ್ ಸಿಪ್ರಿಯನ್ ಪಿಂಟೊಗೆ ಷರತ್ತುಬದ್ಧ ಜಾಮೀನು ಮಂಜೂರು – vishwanews24

ಪೋಕ್ಸೊ ಪ್ರಕರಣ: ಮಂಗಳೂರಿನ ಚರ್ಚ್ ಫಾದರ್ ಸಿಪ್ರಿಯನ್ ಪಿಂಟೊಗೆ ಷರತ್ತುಬದ್ಧ ಜಾಮೀನು ಮಂಜೂರು ಮಂಗಳೂರು: ನಗರದ ವೆಲೆನ್ಸಿಯಾದ ಸೇಂಟ್ ವಿನ್ಸೆಂಟ್…

33 minutes ago

ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ: ಕೆ.ಎಸ್. ನವೀನ್ ವಾಗ್ದಾಳಿ – vishwanews24

ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ: ಕೆ.ಎಸ್. ನವೀನ್ ವಾಗ್ದಾಳಿ ಉಡುಪಿ: ಸಂವಿಧಾನವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್‌ಗೆ…

39 minutes ago

ಗೋಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು : ಗುಜರಾತ್‌ನಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ – vishwanews24

ಗೋಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು : ಗುಜರಾತ್‌ನಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ ಗಾಂಧಿನಗರ: ಗೋಹತ್ಯೆ ಪ್ರಕರಣದಲ್ಲಿ ಮೂವರು…

47 minutes ago

ಉಡುಪಿ ಜಿಲ್ಲಾ ಆಸ್ಪತ್ರೆ ಲೋಕಾರ್ಪಣೆಗೆ ಶಾಸಕ ಯಶ್ಪಾಲ್ ಸುವರ್ಣ ಒತ್ತಾಯ: ನ. 15ರೊಳಗೆ ಆರೋಗ್ಯ ಸಚಿವರಿಂದ ಪರಿಶೀಲನೆಗೆ ಆಗ್ರಹ – vishwanews24

ನ. 15ರೊಳಗೆ ಉಡುಪಿ ಜಿಲ್ಲಾಸ್ಪತ್ರೆ ಲೋಕಾರ್ಪಣೆ ದಿನಾಂಕ ಘೋಷಿಸಿ: ಆರೋಗ್ಯ ಸಚಿವರಿಗೆ ಯಶ್ಪಾಲ್ ಸುವರ್ಣ ಒತ್ತಾಯ ಉಡುಪಿ: ಉಡುಪಿ ಜಿಲ್ಲೆಯ…

2 hours ago

ಸೌಜನ್ಯಾ ಪ್ರಕರಣ ತನಿಖೆ: ಎಸ್‌ಐಟಿ ಮುಖ್ಯಸ್ಥರ ಬದಲಾವಣೆ ; ಶಶಿಕುಮಾರ್ ಬದಲಿಗೆ ಚೇತನ್ ಸಿಂಗ್ ರಾಥೋಡ್ ನೇಮಕ – vishwanews24

ಸೌಜನ್ಯ ಪ್ರಕರಣ: ಶಶಿಕುಮಾರ್ ಬದಲಿಗೆ ಚೇತನ್ ಸಿಂಗ್ ರಾಥೋಡ್ ಅವರನ್ನು ಎಸ್‌ಐಟಿ ಮುಖ್ಯಸ್ಥರಾಗಿ ನೇಮಕ ಮಂಗಳೂರು : ಸೌಜನ್ಯ ಅತ್ಯಾಚಾರ…

2 hours ago