Featured

ಉಡುಪಿ: ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ, ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನ ಪ್ರಕರಣ; ಆರೋಪಿ ಬಂಧನ – vishwanews24

ಉಡುಪಿ: ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ, ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಪ್ರಕರಣ; ಆರೋಪಿ ಬಂಧನ

ಉಡುಪಿ: ಬಾಡಿಗೆ ಮನೆಯ ಮುಂಗಡ ಹಣದ ವಿಚಾರದಲ್ಲಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರ ಮೇಲೆ ಆಸಿಡ್ ಎರಚಿ, ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕುಂಜಿಬೆಟ್ಟುವಿನ ಸುರೇಶ್ ಆಚಾರ್ಯ (48) ಎಂದು ಗುರುತಿಸಲಾಗಿದೆ. ಆಸಿಡ್ ದಾಳಿಯಿಂದ ಗಾಯಗೊಂಡ ಅಂಗಡಿ ಮಾಲೀಕ ನವೀನ್ ಕುಮಾರ್ (58) ಅವರು ಕೆ.ಎಂ.ಸಿ. ಆಸ್ಪತ್ರೆಯ ಬರ್ನ್ಸ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನವೀನ್ ಕುಮಾರ್ ಅವರು ಕಲ್ಕೂರು ಬಿಲ್ಡಿಂಗ್‌ನ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಬಾಬು ವಿಷ್ಣು ಮೂರ್ತಿ ನಗರದ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ವಾಸವಿದ್ದ ಸುರೇಶ್ ಆಚಾರ್ಯ ಮನೆ ಖಾಲಿ ಮಾಡುವಾಗ ಗೋಡೆ ಹಾಗೂ ಟ್ಯಾಪ್‌ಗಳಿಗೆ ಹಾನಿಯಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಗಡವಾಗಿ ನೀಡಿದ್ದ 720 ಸಾವಿರದಲ್ಲಿ ಎರಡು ತಿಂಗಳ ಬಾಡಿಗೆ ಮತ್ತು ದುರಸ್ತಿ ವೆಚ್ಚವನ್ನು ಕಡಿತಗೊಳಿಸುವುದಾಗಿ ನವೀನ್ ಕುಮಾರ್ ತಿಳಿಸಿದ್ದರು. ಇದಕ್ಕೆ ಒಪ್ಪದ ಸುರೇಶ್ ಆಚಾರ್ಯ, ಪೂರ್ಣ ಹಣ ನೀಡುವಂತೆ ಒತ್ತಾಯಿಸಿ ಅ.23ರಂದು ಅಂಗಡಿಗೆ ಬಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

28ರಂದು ಸಂಜೆ 3.30ರ ಸುಮಾರಿಗೆ ಅಂಗಡಿಗೆ ಬಂದ ಸುರೇಶ್ ಆಚಾರ್ಯ, ಬಾಡಿಗೆ ಮುಂಗಡ ಹಣದ ವಿಚಾರವಾಗಿ ಜಗಳವಾಡಿದ್ದಾನೆ. ಬಳಿಕ ಸ್ಕೂಟರ್‌ನಿಂದ ಬಾಟಲಿ ಹಾಗೂ ಕತ್ತಿಯನ್ನು ತಂದು, ಆಸಿಡ್ ಎರಚಿ ಸುಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿ ನವೀನ್ ಕುಮಾರ್ ಅವರ ಮೇಲೆ ಆಸಿಡ್ ಎರಚಿದ್ದಾನೆ. ನಂತರ ಕತ್ತಿಯಿಂದ ಕಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಸಿಡ್ ದಾಳಿಯಿಂದ ನವೀನ್ ಕುಮಾರ್ ಅವರ ಬಲಗೈ, ಎಡಗೆ, ಸೊಂಟ, ಹೊಟ್ಟೆ, ಪಾದ ಹಾಗೂ ಮುಖದ ಭಾಗ ಸುಟ್ಟ ಗಾಯಗಳಾಗಿವೆ.
ಪುಕರಣ ದಾಖಲಿಸಿಕೊಂಡ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಶಿವಳ್ಳಿ ಗ್ರಾಮದ ಎಂ.ಜಿ.ಎಂ. ಕಾಲೇಜು ಮೈದಾನದ ಸಮೀಪ ಆರೋಪಿಯನ್ನು ವಶಕ್ಕೆ ಪಡೆದಿದೆ. ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಆಕ್ಟಿವಾ ಸ್ಕೂಟರ್ (KA-20-EK-6450) ಹಾಗೂ ಕತ್ತಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Vishwa News 24

Recent Posts

ಇಂದು ಪಿಎಂ ಕಿಸಾನ್ ಯೋಜನೆಯ 24ನೇ ಕಂತು ಬಿಡುಗಡೆ – vishwanews24

ಇಂದು ಪಿಎಂ ಕಿಸಾನ್ ಯೋಜನೆಯ 24ನೇ ಕಂತು ಬಿಡುಗಡೆ ನವದೆಹಲಿ: ದೇಶದ 9.34 ಕೋಟಿಗೂ ಅಧಿಕ ರೈತರಿಗೆ ಇಂದು ಪಿಎಂ…

23 minutes ago

ಉಡುಪಿ: ಸ್ವಯಂಪ್ರೇರಿತ ರಕ್ತದಾನ, ದಿವ್ಯಾಂಗರಿಗೆ ಪೌಷ್ಟಿಕ ಆಹಾರ ವಿತರಿಸಿ ಹುಟ್ಟುಹಬ್ಬ ಆಚರಿಸಿದ ರಮೇಶ್ ಕಾಂಚನ್ – vishwanews24

ಉಡುಪಿ: ಸ್ವಯಂಪ್ರೇರಿತ ರಕ್ತದಾನ, ದಿವ್ಯಾಂಗರಿಗೆ ಪೌಷ್ಟಿಕ ಆಹಾರ ವಿತರಿಸಿ ರಮೇಶ್ ಕಾಂಚನ್ ಹುಟ್ಟುಹಬ್ಬ ಆಚರಣೆ ರಮೇಶ್ ಕಾಂಚನ್ ಅವರು ಸಮಾಜಮುಖಿ…

32 minutes ago

ಭಾರತೀಯ ವಾಯುಸೇನೆಯ ರಫೇಲ್ ಯುದ್ಧ ವಿಮಾನದ ಕಾರ್ಯಾಚರಣಾ ಪೈಲಟ್ ಆಗಿ ಮಂಗಳೂರಿನ ಪ್ರಜ್ವಲ್ ಆರ್. ಶೆಟ್ಟಿ ಆಯ್ಕೆ  – vishwanews24

ಭಾರತೀಯ ವಾಯುಸೇನೆಯ ರಫೇಲ್ ಯುದ್ಧ ವಿಮಾನದ ಕಾರ್ಯಾಚರಣಾ ಪೈಲಟ್ ಆಗಿ ಮಂಗಳೂರಿನ ಪ್ರಜ್ವಲ್ ಆರ್. ಶೆಟ್ಟಿ ಆಯ್ಕೆ  ಮಂಗಳೂರು: ದಕ್ಷಿಣ…

1 hour ago

ಕಾಪು: ನವೆಂಬರ್ 1ರಂದು ಉಚಿತ ಮೂಳೆ ಸಾಂದ್ರತಾ, ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ – vishwanews24

ಕಾಪು: ನವೆಂಬರ್ 1ರಂದು ಉಚಿತ ಮೂಳೆ ಸಾಂದ್ರತಾ, ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಾಪು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ…

1 hour ago

ಕೋಲಾರ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ; ಅಂಗಾಂಗ ದಾನದ ಮೂಲಕ ಇಬ್ಬರಿಗೆ ಹೊಸ ಬದುಕು – vishwanews24

ಕೋಲಾರ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ; ಅಂಗಾಂಗ ದಾನದ ಮೂಲಕ ಇಬ್ಬರಿಗೆ ಹೊಸ ಬದುಕು ಕೋಲಾರ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ…

2 hours ago

ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಆರೋಗ್ಯ ಇಲಾಖೆಯಿಂದ ವಿಶೇಷ ತಪಾಸಣೆ – vishwanews24

ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ದಾಳಿ: 24 ಘಟಕಗಳಿಗೆ ನೋಟಿಸ್ ಮಂಗಳೂರು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ…

2 hours ago