ಮಂಗಳೂರು : ಪ್ರಮುಖ ತೈಲ ಸಂಸ್ಕರಣಾಗಾರವಾಗಿರುವ ಎಂಆರ್ಪಿಎಲ್ ಹಾಗೂ ಕಚ್ಛಾತೈಲ ಸಂಗ್ರಹಣಾ ಘಟಕ ಐಎಸ್ಪಿಆರೆಲ್ ಇವುಗಳನ್ನು ಹೊಂದಿರುವ ಮಂಗಳೂರು ದೇಶದ ಇಂಧನ ಕ್ಷೇತ್ರದಲ್ಲಿ ಬಹಳ ಪ್ರಾಧಾನ್ಯತೆ ಪಡೆದಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಯ್ ಸುಧೀರ್ ಹೇಳಿದ್ದಾರೆ.
ಐಎಸ್ಪಿಆರೆಲ್ ಘಟಕಕ್ಕೆ ಅಬು ಧಾಬಿ ರಾಷ್ಟ್ರೀಯ ತೈಲ ಕಂಪೆನಿಯಿಂದ ಇದೇ ಮೊದಲ ಬಾರಿಗೆ ಸರಬರಾಜಾದ ಕಚ್ಛಾ ತೈಲ ಆಗಮಿಸಿದ ಸಂದರ್ಭ ಆಯೋಜಿಸಲಾದ ಸಮಾರಂಭದಲ್ಲಿಅವರು ಮಾತನಾಡುತ್ತಿದ್ದರು. ಎಂಆರ್ಪಿಎಲ್ ಹಾಗೂ ಐಎಸ್ಪಿಆರೆಲ್ ಇವುಗಳಿಂದ ಕರ್ನಾಟಕಕ್ಕೆ ಮಾತ್ರವಲ್ಲದೆ ನೆರೆಯ ರಾಜ್ಯಗಳಿಗೂ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.
ಐಎಸ್ಪಿಆರೆಲ್ ಆಡಳಿತ ನಿರ್ದೇಶಕ ಹಾಗೂ ಸಿಇಒ ಎಚ್ ಪಿ ಎಸ್ ಅಹುಜಾ ಮಾತನಾಡುತ್ತಾ, ಯೋಜನೆಯಂಗವಾಗಿ ಮಂಗಳೂರು ತಾಲೂಕಿನ ಪೆರ್ಮುದೆ, ಉಡುಪಿಯ ಪಾದೂರು ಹಾಗೂ ವಿಶಾಖಪಟ್ಟಣದಲ್ಲಿ ನಿರ್ಮಾಣವಾಗಿರುವ ಸಂಗ್ರಹಾಗಾರಗಳು ಇಂಜಿನಿಯರಿಂಗ್ ವಿಸ್ಮಯಗಳಾಗಿವೆ ಎಂದು ಬಣ್ಣಿಸಿದ್ದಾರೆ.
ಪೆರ್ಮುದೆಯ ಸಂಗ್ರಹಾಗಾರದಲ್ಲಿ 15 ಲಕ್ಷ ಟನ್ ತೈಲ ಸಂಗ್ರಹಿಸಬಹುದಾದರೆ, ಪಾದೂರಿನ ಘಟಕದಲ್ಲಿ 25 ಲಕ್ಷ ಟನ್ ತೈಲ ಸಂಗ್ರಹಿಸಬಹುದಾಗಿದೆ. ಈ ಸಂಗ್ರಹಾಗಾರಗಳನ್ನು ನಿರ್ಮಿಸಲು 30 ಕಿಮೀ ಉದ್ದದ ಸುರಂಗವನ್ನು ನಿರ್ಮಿಸಲಾಗಿದ್ದು ಹತ್ತು ಮಹಡಿಯ ಕಟ್ಟಡಗಳಷ್ಟು ಎತ್ತರವಾಗಿರುವ ಈ ಸಂಗ್ರಹಾಗಾರ ಭೂಮಿಯ ಮೇಲ್ಮೈಗಿಂತ 60ರಿಂದ 70 ಮೀಟರ್ ಆಳದಲ್ಲಿದೆ.
ಮಂಗಳೂರಿನ ಸಂಗ್ರಹಾಗಾರದಲ್ಲಿ ಎರಡು ವಿಭಾಗಗಳಿದ್ದು ಒಂದು ವಿಭಾಗದಲ್ಲಿ ಈಗಾಗಲೇ ಕೇಂದ್ರದ ನಿಧಿಯಿಂದ ಪೂರೈಕೆಯಾದ ಕಚ್ಛಾತೈಲವನ್ನು ತುಂಬಲಾಗಿದ್ದರೆ, ಇನ್ನೊಂದರಲ್ಲಿ ಈಗ ಅಬುಧಾಬಿ ರಾಷ್ಟ್ರೀಯ ತೈಲ ಕಂಪೆನಿಯಿಂದ ಸರಬರಾಜಾಗಿರುವ ಕಚ್ಛಾ ತೈಲವನ್ನು ತುಂಬಿಸಲಾಗುವುದು.
ಕಾಪು ಹಳೇ ಮಾರಿಯಮ್ಮ ದೇವಿಗೆ ಲಕ್ಷಪುಷ್ಪಾರ್ಚನೆ 135 ಕೆಜಿ ಕೆಂಪು ಕೇಪುಳ ಹೂ, 1,200ಕ್ಕೂ ಅಧಿಕ ಚೆಂಡು ಮಲ್ಲಿಗೆ ಸಮರ್ಪಣೆ…
ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ ಮಂಗಳೂರು: ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ…
ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…
ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…
ಉಡುಪಿ: ಸ್ಪೀಡ್ ರಾಡಾರ್ ಕೆಮರಾ ಕಣ್ಣು ; ಒಂದು ವಾರದಲ್ಲಿ 47,709 ವಾಹನಗಳು ಸಂಚಾರ ನಿಯಮ ಉಲ್ಲಂಘನೆ ಉಡುಪಿ :…
CMRL ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಈಡಿ ದಾಳಿ ತಿರುವನಂತಪುರಂ: ಕೊಚ್ಚಿನ್…