ಇನ್ಮುಂದೆ ಮೆಟ್ರೋ ನಿಲ್ದಾಣದಲ್ಲಿ ಸಿಗಲಿದೆ ಪ್ರಿಪೇಯ್ಡ್ ಆಟೋ ಸೇವೆ – Vishwanews24
ಇನ್ಮುಂದೆ ಮೆಟ್ರೋ ನಿಲ್ದಾಣದಲ್ಲಿ ಸಿಗಲಿದೆ ಪ್ರಿಪೇಯ್ಡ್ ಆಟೋ ಸೇವೆ
ಬೆಂಗಳೂರು: ಮೆಟ್ರೋ ಪ್ರಯಾಣಿಕರು ಸಂಚಾರ ಮುಗಿಸಿ ನಿಲ್ದಾಣದಿಂದ ಆಚೆ ಬಂದ್ರೆ ಹತ್ತಾರು ಆಟೋಗಳು ಕಾಣುತ್ತವೆ. ಆದರೆ ಕೆಲ ಆಟೋಗಳು ಕರೆದ ಕಡೆ ಬರಲ್ಲ, ಇನ್ನೂ ಕೆಲವರು ಕೇಳಿದ ರೇಟ್ ನೀಡೋಕೆ ಆಗಲ್ಲ. ಈ ಎಲ್ಲಾ ಸಮಸ್ಯೆಗೆ ಕೊನೆ ಕಾಣಿಸಲೇಬೇಕೆಂದು ನಮ್ಮ ಮೆಟ್ರೋ ನಿರ್ಧಾರ ಮಾಡಿದೆ..
ಹೀಗಾಗಿ ಮೆಟ್ರೋ ನಿಲ್ದಾಣದಲ್ಲೇ ಪ್ರಿಪೇಯ್ಡ್ ಆಟೋ ಸೇವೆ ಒದಗಿಸಲು ಮುಂದಾಗಿದೆ. ಟ್ರಾಫಿಕ್ ಪೊಲೀಸರ ಈ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಈ ಬಗ್ಗೆ ಇತ್ತೀಚಿನ ಸಭೆಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ ಅಧಿಕಾರಿಗಳು ಸಹ ಚರ್ಚೆ ನಡೆಸಿದರು. ಈ ವಿಚಾರವಾಗಿ ನಗರದ ಕೆಲ ನಿಲ್ದಾಣಗಳನ್ನು ಗುರುತು ಮಾಡಲಾಗಿದೆ. ಈ ಬಗ್ಗೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಕೂಡ ಬೆಂಗಳೂರು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡರಿಗೆ ಪತ್ರ ಬರೆದಿದ್ದಾರೆ.
ಸದ್ಯ ಪೊಲೀಸ್ ಇಲಾಖೆ ಕೂಡ ಈ ಯೋಜನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಎನ್ನಲಾಗ್ತಿದೆ. ಎಲ್ಲಾವು ಸರಿ ಆದರೆ ಮುಂದಿನ ತಿಂಗಳೊಳಗೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಬಳಿ ಪ್ರಿಪೇಯ್ಡ್ ಆಟೋ ಸೇವೆ ಆರಂಭಗೊಳ್ಳಲಿದೆ.
