ರಾಜ್ಯ ನ್ಯೂಸ್

ಈ ಕ್ಷಣ ಚುನಾವಣೆ ನಡೆದರೆ ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ??

ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ ಮುಕ್ತಾಯ ಕಂಡಿದ್ದು ಈಗ ದೇಶದ ಗಮನ 2019 ರ ಲೋಕಸಭಾ ಚುನಾವಣೆಯತ್ತ ನೆಟ್ಟಿದೆ. 2014ರಲ್ಲಿ ಎಲ್ಲಾ ಸಮೀಕ್ಷೆಗಳನ್ನೆಲ್ಲಾ ಧೂಳಿಪಟ ಮಾಡಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ನರೇಂದ್ರ ಮೋದಿಯವರು ಅಧಿಕಾರಕ್ಕೆ ಏರಿದ್ದರು. ಉತ್ತಮ ಆಡಳಿತ ನೀಡಿ ದೇಶದ ಜನರ ಮೆಚ್ಚುಗೆ ಪಡೆದಿರುವಂತಹ ಮೋದಿ ಸರಕಾರ ತನ್ನ ಆಡಳಿತದ ನಾಲ್ಕನೇ ವರ್ಷ ಪೂರ್ಣಗೊಳಿಸುತ್ತಿರುವ ಈ ಸಂದರ್ಭದಲ್ಲಿಯೇ ಎನ್.ಡಿ.ಎ ಮೈತ್ರಿಕೂಟಕ್ಕೆ ಸಂತಸದ ಸುದ್ದಿಯೊಂದು ಲಭಿಸಿದೆ.

2019 ರ ಲೋಕಸಭಾ ಚುನಾವಣೆಯನ್ನು ಇಂದು ನಡೆಸಿದರೆ ಯಾವ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದರ ಬಗ್ಗೆ ರಾಷ್ಟ್ರೀಯ ವಾಹಿನಿಯಾದ ಎಬಿಪಿ – ಸಿ.ಎಸ್.ಡಿ.ಎಸ್ ಸಂಸ್ಥೆ “ಮೂಡ್ ಆಫ್ ದ ನೇಷನ್ ” ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆ ಬಿಜೆಪಿ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದು. 2019 ರಲ್ಲಿ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದೆ.

ದೇಶದ 19 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿರುವ ಎ.ಬಿ.ಪಿ – ಸಿ.ಎನ್.ಡಿ.ಎಸ್ ಸಂಸ್ಥೆ 15859 ಜನರನ್ನು ಸಂದರ್ಶಿಸಿ ಈ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿದ್ದು ದೇಶದಲ್ಲಿ ಇನ್ನೂ ಮೋದಿ ಅಲೆ ಇದೆ ಎನ್ನುವುದು ಈ ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ದೇಶದ 543 ಲೋಕಸಭಾ ಸ್ಥಾನಗಳ ಪೈಕಿ ಎನ್. ಡಿ.ಎ ಕೂಟ 274 ಸ್ಥಾನಗಳನ್ನು ಪಡೆಯುವ ಸರಳ ಬಹುಮತ ಪಡೆಯಲಿದೆ ಎಂದು ಈ ಸಮೀಕ್ಷೆ ತಿಳಿಸಿದೆ. ಲೋಕಸಭೆಯಲ್ಲಿ ಸರಳ ಬಹುಮತಕ್ಕೆ 272 ಸ್ಥಾನಗಳ ಮ್ಯಾಜಿಕ್ ನಂಬರ್ ಅಗತ್ಯವಿದ್ದು ಅದನ್ನು ಬಿಜೆಪಿ ಮೈತ್ರಿಕೂಟ ದಾಟಲಿದೆ ಎಂದು ಸಮೀಕ್ಷೆ ಹೇಳಿರುವುದು ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿದೆ.

 2014 ರ ಲೋಕಸಭಾ ಚುನಾವಣೆಯಲ್ಲಿ ಧೂಳಿಪಟವಾಗಿದ್ದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಮೈತ್ರಿಕೂಟ ಈ ಬಾರಿ ತನ್ನ ಸ್ಥಿತಿ ಉತ್ತಮಪಡಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದ್ದು ಈ ಬಾರಿ 164 ಸ್ಥಾನ ಪಡೆಯಲಿದೆ ಎಂದು ಎಬಿಪಿ ಸಮೀಕ್ಷೆ ತಿಳಿಸಿದೆ.

ಇನ್ನು ಇತರ ಪಕ್ಷಗಳು ಭಾರಿ ಹೊಡೆತ ತಿಂದು 105 ಸ್ಥಾನಗಳಿಗಷ್ಟೆ ಸಮಾಧಾನ ಪಡಲಿವೆ ಎಂದು ಎ.ಬಿ.ಪಿ – ಸಿ.ಎನ್.ಡಿ.ಎಸ್ ಸಮೀಕ್ಷೆ ತಿಳಿಸಿದೆ. ದೇಶದಲ್ಲಿ ಮೋದಿ ಅಲೆ ಈ ಹಿಂದಿಗಿಂತಲೂ ಹೆಚ್ಚಳವಾಗಿರುವುದಕ್ಕೆ 23 ರಾಜ್ಯದಲ್ಲಿ ಬಿಜೆಪಿ ತೋರಿದ ಸಾಧನೆಯಿಂದ ಸ್ಪಷ್ಟವಾಗುತ್ತಿದೆ. 2013 ರಲ್ಲಿನ ಸಮೀಕ್ಷೆಗಳು ಬಿಜೆಪಿಗೆ ಸಿಗುವ ಕಡಿಮೆ ಸ್ಥಾನ ನೀಡಿದ್ದವು ಆದರೆ ಚುನಾವಣಾ ಸಮಯದಲ್ಲಿ ಅದೆಲ್ಲಾ ಧೂಳಿಪಟವಾಗಿ ಯಾರೂ ಎಣಿಸದ ರೀತಿಯಲ್ಲಿ ಎನ್.ಡಿ.ಎ ಮೈತ್ರಿಕೂಟ 336 ಸ್ಥಾನಗಳನ್ನು ಪಡೆದಿತ್ತು. ಈ ಬಾರಿಯೂ ಮೋದಿ ಸರಕಾರ ನೀಡಿದ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತದ ಪರಿಣಾಮ ಬಿಜೆಪಿಯು ಈ ಬಾರಿ ಕಳೆದ ಬಾರಿಯ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಬಿಜೆಪಿ ಕಾರ್ಯಕರ್ತರು. ಆದರೂ ಮತದಾರರ ಅಂತಿಮ ತೀರ್ಪು ಏನು ಅನ್ನುವುದಕ್ಕೆ 2019 ರವರೆಗೆ ಕಾಯಲೇಬೇಕಿದೆ.

Vishwa News 24

Recent Posts

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

5 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

10 hours ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

10 hours ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

10 hours ago

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

11 hours ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

11 hours ago