ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

Featured, ರಾಜ್ಯ ನ್ಯೂಸ್

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಸಂಭ್ರಮ ಮನೆ ಮಾಡಿದೆ. ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಜನರು ಕಾಯುತ್ತಿದ್ದಾರೆ. ಈ ಭಾರಿ ಅಂಬಾರಿ ಹೊರುವ ಆನೆ ಯಾವುದಾಗಬಹುದು ಎನ್ನುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ.

54 ವರ್ಷದ ಪ್ರಶಾಂತ ಈ ಭಾರಿ ಅಂಬಾರಿ ಹೊತ್ತು ಸಾಗಲಿದ್ದಾನೆ. ಈ ಕುರಿತಾಗಿ ಮೈಸೂರು ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಆ ಮೂಲಕ ದುಬಾರೆ ವೀರ ಪ್ರಶಾಂತ​ ಆನೆ ಮೊದಲ ಬಾರಿಗೆ 750 ಕೆ.ಜೆ ಚಿನ್ನದ ಅಂಬಾರಿ ಹೊತ್ತು ಸಹಸ್ರಾರು ಜನಗಳ ಮಧ್ಯೆ ಹೆಜ್ಜೆ ಹಾಕಲಿದ್ದಾನೆ.

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಪ್ರಶಾಂತ ಕೊಡಗು ಜಿಲ್ಲೆಯ ಕುಶಾಲನಗರ ಬಳಿಯ ದುಬಾರೆ ಶಿಬಿರದ ಆನೆ. 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಪ್ರಶಾಂತ ಆನೆಯ ಎತ್ತರ 2.61 ಮೀಟರ್, ಉದ್ದ 3.46 ಮೀಟರ್‌. ಅತ್ಯಂತ ಬಲಿಷ್ಠವಾಗಿರುವ ಪ್ರಶಾಂತ ಅಂದಾಜು 5100 ತೂಕ ಹೊಂದಿದ್ದಾನೆ.

ಜೆ.ಎ.ಚಿನ್ನಪ್ಪ ಪ್ರಶಾಂತ ಆನೆಯ ಮಾವುತ, ಚಂದ್ರ ಎನ್ನುವವರು ಕಾವಾಡಿಗರಾಗಿದ್ದಾರೆ. ದುಬಾರೆಯ ಈ ಪ್ರಶಾಂತ ಆನೆ ಕಳೆದ 18 ವರ್ಷಗಳಿಂದಲೂ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ. ಅದರಂತೆ ಈ ಭಾರಿ ಕೂಡ ಭಾಗಿಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಅದೃಷ್ಟ ಪ್ರಶಾಂತನಿಗೆ ಒಲಿದು ಬಂದಿದೆ.

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

 

ಇತ್ತೀಚೆಗೆ ಚಿನ್ನದ ಅಂಬಾರಿ ಹೊರುವ ಕಾಯಕದಿಂದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ನಿವೃತ್ತಿ ನೀಡಲಾಗಿತ್ತು. ಆ ಬಳಿಕ ದಸರಾ ಜಂಬೂಸವಾರಿಯ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಿತ್ತು.

Leave a Reply