ಉಚ್ಚಿಲ‌ ಶ್ರೀಮಹಾಲಕ್ಷ್ಮಿ‌ಯ ದರ್ಶನ ಪಡೆದ ಬಿಎಸ್ ವೈ , ಜೀರ್ಣೋದ್ಧಾರ ಕಾರ್ಯಗಳಿಗೆ ಸಹಕರಿಸಲು‌ ಮನವಿ -Vishwanews24

Featured, ಉಡುಪಿ

ಉಚ್ಚಿಲ‌ ಶ್ರೀಮಹಾಲಕ್ಷ್ಮಿ‌ಯ ದರ್ಶನ ಪಡೆದ ಬಿಎಸ್ ವೈ , ದೇವಸ್ಥಾನದ ಜೀರ್ಣೋದ್ಧಾರಕ್ಕೆಹೆಚ್ಚುವರಿ 10 ಕೋಟಿ ರೂಪಾಯಿ ಬಿಡುಗಡೆಗೆ ಮನವಿ -Vishwanews24

ಉಡುಪಿ: ಎರಡೂವರೆ ವರ್ಷಗಳ ಆಡಳಿತ ಯಾವುದೇ ಅಡ್ಡಿ, ಆತಂಕವಿಲ್ಲದೆ ನಡೆಸಲು ಅನುಗ್ರಹಿಸುವಂತೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲ‌ ಶ್ರೀಮಹಾಲಕ್ಷ್ಮಿ‌ ದೇವರ ಬಳಿ ಭಕ್ತಿ, ತನ್ಮಯತೆಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಪ್ರಾರ್ಥನೆ, ಪೂಜೆ ಸಲ್ಲಿಸಿದರು.

ದೇವಳದ ಜೀರ್ಣೋದ್ಧಾರಕ್ಕೆ ಐದು ಕೋಟಿ ರೂ.ಬಿಡುಗಡೆ, ಹತ್ತು ಕೋಟಿ ರೂ. ಮಂಜೂರಾತಿಗಾಗಿ ದೇವಳದ ಅರ್ಚಕ ರಾಘವೇಂದ್ರರವರು ಬಿಎಸ್ ವೈ ಅವರಿಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಇನ್ನಷ್ಟು ಕೊಡುಗೆ ಶ್ರೀಮಹಾಲಕ್ಷ್ಮಿಗೆ ಸಲ್ಲಲಿ. ಉದ್ಘಾಟನೆಗೂ ನೀವೇ ಬರಬೇಕು ಎಂದರು. ಬ್ರಾಹ್ಮಣರ ಅಭಿವೃದ್ಧಿಗೆ ಅನುದಾನ ಸ್ವಾಗತಾರ್ಹ ಇನ್ನೂ ಹತ್ತು ವರ್ಷ ಆಡಳಿತ ನಡೆಸಲು ಮಹಾಲಕ್ಷ್ಮಿ ಅನುಗ್ರಹಿಸಲಿ ಎಂದರು.

http://ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ವೈ ಭೇಟಿ

ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳಲಿರುವ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ ಈಗಾಗಲೇ 5 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ್ದು, ಹೆಚ್ಚುವರಿ 10 ಕೋಟಿ ರೂಪಾಯಿ ಬಿಡುಗಡೆಗೆ ಮನವಿ ಮಾಡಲಾಯಿತು.

ಸಂಸದೆ ಶೋಭಾ‌ ಕರಂದ್ಲಾಜೆ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್. ಮೆಂಡನ್, ರಘುಪತಿ ಭಟ್, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯೆ ಶಿಲ್ಪಾ‌ ಜಿ. ಸುವರ್ಣ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್‌ನ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಸುರೇಶ್ ನಾಯಕ್, ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಕುತ್ಯಾರು ನವೀನ್‌ ಶೆಟ್ಟಿ ಹಾಗೂ ಮೊಗವೀರ ಸಮಾಜದ ವಿವಿಧ ಮುಖಂಡರು, ಕ್ಷೇತ್ರಾಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ ಸಹಿತ ವಿವಿಧ ಉಪ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದಕ ಮೊಗವೀರ ಮಹಾಜನ ಸಂಘದ ವತಿಯಿಂದ ಮನವಿ ಸ್ವೀಕರಿಸಿದ ಸಿಎಂ ಯಡಿಯೂರಪ್ಪ ಅವರನ್ನು ಬೆಳ್ಳು ಗಣಪತಿ ನೀಡಿ ಸನ್ಮಾನಿಸಲಾಯಿತು.

ಮಂಗಳೂರು: ಎಸ್‌ ಡಿಪಿಐ ಮುಖಂಡ ಸಿದ್ಧಿಕ್‌ ಉಳ್ಳಾಲ್‌ ಮೇಲೆ ಅತ್ಯಾಚಾರ ಮತ್ತು ಪೋಕ್ಸೋ ಕೇಸ್‌ ದಾಖಲು -Vishwanews24