Featured

ಉಜ್ವಲ ಯೋಜನೆ ಭರ್ಜರಿ ಸಕ್ಸಸ್ .., ಅವಧಿಗೆ ಮುನ್ನವೇ ಗೆದ್ದು ಬೀಗಿದ ಮೋದಿ ಸರಕಾರ..

ರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ `ಪ್ರಧಾನಮಂತ್ರಿ ಉಜ್ವಲ’ ಯೋಜನೆ ಮಹಿಳೆಯರ ಪಾಲಿಗೆ ನಿಜಕ್ಕೂ ವರದಾನವಾಗಿದೆ. ಹೊಗೆ ಗೂಡುಗಳಲ್ಲಿ ಬೇಯುತ್ತಿದ್ದ ಗ್ರಾಮೀಣ ಮಹಿಳೆಯರಿಗೆ ಮುಕ್ತಿ ಸಿಗುವ ರೀತಿ ಮಾಡಿದ್ದು ಮೋದಿ ಸರಕಾರ.. ಇದೀಗ ಪ್ರಧಾನಿ ನರೇಂದ್ರ ಮೋದೀಜಿಯವರ ಉಜ್ವಲ ಯೋಜನೆಯನ್ನು ಇಡೀ ದೇಶವೇ ಹಾಡಿಹೊಗಳುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಬಡವರ ಏಳಿಗೆಗಾಗಿ ಈಗಾಗಲೇ ಹತ್ತು ಹಲವಾರು ಯೋಜನೆಗಳನ್ನು ಹೊರತಂದಿದ್ದು, ಬಡ ಕುಟುಂಬದ ಮಹಿಳೆಯರಿಗಾಗಿ ಉಪಯುಕ್ತವಾಗಲಿ ಎಂದು `ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಜಾರಿ ಮಾಡುವುದರ ಮೂಲಕ ಕೋಟ್ಯಾಂತರ ಜನರಿಗೆ ಉಪಯೋಗಕಾರಿಯಾಗಿದ್ದಾರೆ.. ಈ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಎಲ್.ಪಿ.ಜಿ ಸೌಲಭ್ಯ ಕಲ್ಪಿಸಲಾಗಿದ್ದು ಇದೀಗ ಮೋದೀಜೀ ಆಡಳಿತದ ನಾಲ್ಕು ವರ್ಷದಲ್ಲಿ ಅದೆಷ್ಟೋ ಕೋಟಿ ಹೊಸ ಗ್ರಾಹಕರಿಗೆ ಎಲ್‍ಪಿಜಿ ಸೌಲಭ್ಯ ದೊರಕಿಸಿಕೊಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.

5 ಕೋಟಿ ಎಲ್.ಪಿ.ಜಿ ವಿತರಣೆ! ಅವಧಿಗೂ ಮುನ್ನವೇ ಟಾರ್ಗೆಟ್ ತಲುಪಿದ ಕೇಂದ್ರ..

5 ಕೋಟಿ ಮನೆಗಳಿಗೆ ಉಚಿತ ಎಲ್‍ಪಿಜಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಟಾರ್ಗೆಟ್‍ನ್ನು ಅವಧಿಗೂ ಮುನ್ನವೇ ಸರ್ಕಾರ ಪೂರ್ಣಗೊಳಿಸಿದೆ.. ನಿನ್ನೆ ಸಂಸತ್ತಿನಲ್ಲಿ ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಂದ 5 ಕೋಟಿ ಎಲ್‍ಪಿಜಿಯನ್ನು ಫಲಾನುಭವಿಗೆ ಹಸ್ತಾಂತರ ಮಾಡುವ ಮೂಲಕ ಈ ಮಹತ್ವದ ಮೈಲಿಗಲ್ಲನ್ನು ಸರ್ಕಾರ ಸಂಭ್ರಮಿಸಿದೆ. 5 ಕೋಟಿಯ ಟಾರ್ಗೆಟನ್ನು ಸರ್ಕಾರ 8 ತಿಂಗಳು ಮುಂಚಿತವಾಗಿಯೇ ತಲುಪಿದ್ದು ಶ್ಲಾಘನೀಯ ಕಾರ್ಯವಾಗಿದೆ. ಸರ್ಕಾರ ಅಧಿಕಾರಿಗಳ ಶ್ರಮ ಇಲ್ಲಿ ಮಹತ್ವದ ಪಾತ್ರವಹಿಸಿದೆ.. ಬಡ ಕುಟುಂಬಗಳಿಗೆ ಕಟ್ಟಿಗೆ ಹೊಗೆಯಿಂದ ಮುಕ್ತಿ ನೀಡುವ ಉದ್ಧೇಶದೊಂದಿಗೆ ಆರಂಭಗೊಂಡ ಅತ್ಯಂತ ಮಹತ್ವದ ಯೋಜನೆ ಇದಾಗಿದೆ.

ಉರುವಲು ಆಧಾರಿತ ಒಲೆಗಳು ಮಹಿಳೆಯರ ಆಯುಷ್ಯವನ್ನೇ ಮುಕ್ಕುತ್ತಿತ್ತು. ಅವರ ಜೀವನ ಮಟ್ಟವನ್ನೇ ಶಿಥಿಲಗೊಳಿಸುತ್ತಿತ್ತು. ಉಜ್ವಲ ಯೋಜನೆ ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿಯಾದರೆ ಇದೊಂದು ದೊಡ್ಡ ಆರೋಗ್ಯ ರಕ್ಷೆ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಕೇವಲ ಹೆಣ್ಣು ಮಕ್ಕಳಷ್ಟೇ ಅಲ್ಲ, ಇಡೀ ಕುಟುಂಬದ ಜೀವನ ಮಟ್ಟ ಸುಧಾರಣೆಯಲ್ಲೂ ಗಣನೀಯ ಕೊಡುಗೆ ನೀಡಬಲ್ಲದು. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಪೂರೈಕೆಯ ಉದ್ಯೋಗ ಕೂಡ ಉಂಟಾಗುತ್ತದೆ.

ಗ್ಯಾಸ್ ಸಂಪರ್ಕ ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವ ಭಾವನೆ ಹಿಂದೆ ಇತ್ತು. ಆದರೆ, ಇದೀಗ ಕಾಲ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಡವರಿಗೆ, ಮಹಿಳೆಯರಿಗೆ ಗೌರವ ದೊರಕುತ್ತಿದೆ. ಇದೀಗಾಗಲೇ ದೇಶದ 4 ಕೋಟಿಗಿಂತಲೂ ಹೆಚ್ಚಿನ ಬಡ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ಕಲ್ಪಿಸಿ ಅದನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯಲಾಗಿದ್ದು ಮೋದಿ ಅವರ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿದ್ದಂತೂ  ನಿಜ..

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

3 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

3 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

3 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

3 days ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

3 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

3 days ago