ಉಡುಪಿಯಲ್ಲೊಂದು ಅದ್ಬುತ ಹೊಸ ಗೇಮ್ ! ನಿಮ್ಮ ಹಳೆಯ ಫೋನ್ ಎಸೆದು ಹೊಸ ಸ್ಮಾರ್ಟ್ ಪೋನ್ ಪಡೆಯಿರಿ..
ಉಡುಪಿ: ಹಳೇಯ ಮೊಬೈಲ್ ಫೋನ್ ಬದಲಾಯಿಸಿ ಹೊಸ ಸ್ಮಾರ್ಟ್ ಫೋನ್ ಅನ್ನು ಉಚಿತವಾಗಿ ಪಡೆಯಲು ಇಲ್ಲಿದೆ ನಿಮಗೊಂದು ಸುವರ್ಣವಕಾಶ, ಇ-ವೇಸ್ಟ್ ವಿಲೇವಾರಿ ಮಾಡಲು ಉಡುಪಿ ಜಿಲ್ಲೆಯ ಹಾಲಾಡಿ ಬಳಿಯ ಗೋಳಿಯಂಗಡಿಯ ರೂಪೇಶ್ ಕುಮಾರ್ ಈ ಆಫರ್ ಏರ್ಪಡಿಸಿದ್ದಾರೆ.
ಹಳೇಯ ಮೊಬೈಲ್ ಅನ್ನು ಯಾರು ಅತಿ ದೂರಕ್ಕೆ ಎಸೆಯುತ್ತಾರೋ ಅವರಿಗೆ ಹೊಸ ಬ್ರಾಂಡ್ ಸ್ಮಾರ್ಟ್ ಫೋನ್ ಬಹುಮಾನವಾಗಿ ಸಿಗಲಿದೆ, ತಮಗೆ ಎಷ್ಟು ಸಾಧ್ಯವೋ ಅಷ್ಟು ದೂರ ಎಸೆಯಬೇಕು, ಯಾರು ಅತ್ಯಂತ ದೂರ ಎಸೆಯುತ್ತಾರೋ ಅವರಿಗೆ ಬಹುಮಾನ ಸಿಗಲಿದೆ..

ಅಕ್ಟೋಬರ್ 7ರಂದು ಸರಕಾರಿ ಪದವಿ ಪೂರ್ವ ಕಾಲೇಜು ಗೋಳಿಯಂಡಗಿ ಇಲ್ಲಿನ ಮೈದಾನದಲ್ಲಿ ನಡೆಯಲಿದೆ. ಸ್ಪರ್ಧೆಗೆ ಯಾವುದೇ ಸ್ಕ್ರಾಪ್ ಹಳೆಯ ಮೊಬೈಲ್ ತಂದು ಎಸೆಯಬಹುದಾಗಿದೆ.. ಸ್ಪರ್ಧೆಯಲ್ಲಿ ಬಹುದೂರ ಎಸೆಯುವವರಿಗೆ ಬಹುಮಾನ ನೀಡಲಾಗುತ್ತದೆ. ಇನ್ನೂ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 4ಜಿ ಸ್ಮಾರ್ಟ್ ಪೋನ್ ಹಾಗೂ ದ್ವಿತೀಯ ಬಹುಮಾನವಾಗಿ ಆ್ಯಂಡ್ರಾಯಡ್ ಮೊಬೈಲ್ ನೀಡಲಾಗುತ್ತದೆ. ಸ್ಪರ್ಧೆಗೆ ಭಾಗವಹಿಸಲು ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ…
ಒಬ್ಬ ವ್ಯಕ್ತಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಮೊಬೈಲ್ ಗಳನ್ನು ಎಸೆಯಬೇಕು, ಆದರೆ ಒಂದು ಕಂಡಿಷನ್ ಎಂದರೇ ಒಮ್ಮೆ ಒಂದು ಬಾರಿ ಫೋನ್ ಎಸೆದರೇ ಅದು ಮತ್ತೆ ವಾಪಸ್ ಸಿಗುವುದಿಲ್ಲ ..

