Featured

ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಆರೋಗ್ಯ ಇಲಾಖೆಯಿಂದ ವಿಶೇಷ ತಪಾಸಣೆ – vishwanews24

ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ದಾಳಿ: 24 ಘಟಕಗಳಿಗೆ ನೋಟಿಸ್

ಮಂಗಳೂರು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವಿಭಾಗವು ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ವಿಶೇಷ ತಪಾಸಣೆ ನಡೆಸಿದೆ.

ರಾಜ್ಯದ ಒಟ್ಟು 45 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳಲ್ಲಿ ತಪಾಸಣೆ ನಡೆಸಲಾಗಿದ್ದು, 32 ನೀರಿನ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ತಪಾಸಣೆ ವೇಳೆ ಹಲವು ಘಟಕಗಳಲ್ಲಿ ಸ್ವಚ್ಛತೆಯ ಕೊರತೆ, ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿರುವುದು, ಲೇಬಲ್‌ಗಳಲ್ಲಿನ ತಪ್ಪುಗಳು ಹಾಗೂ ಕೀಟ ನಿಯಂತ್ರಣ ಪ್ರಮಾಣಪತ್ರದ ಕೊರತೆ ಸೇರಿದಂತೆ ವಿವಿಧ ಲೋಪಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ 24 ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮೈಸೂರು ಮತ್ತು ದಾವಣಗೆರೆಯ ಮೂರು ಘಟಕಗಳಲ್ಲಿ ತಪ್ಪು ಲೇಬಲ್ ಹೊಂದಿದ್ದ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಅಸ್ವಚ್ಛ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂದು ನೀರಿನ ಘಟಕವನ್ನು ಮುಚ್ಚಿಸಲಾಗಿದೆ.

ಕುಡಿಯುವ ನೀರಿನ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಜನರ ಆರೋಗ್ಯದೊಂದಿಗೆ ಆಟವಾಡುವವರ ವಿರುದ್ಧ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ವಿಶೇಷ ತಪಾಸಣೆಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಲಿವೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಸಾರ್ವಜನಿಕರು ಪ್ಯಾಕೇಜ್ಡ್ ಕುಡಿಯುವ ನೀರನ್ನು ಖರೀದಿಸುವಾಗ ಬಾಟಲಿಯ ಮೇಲಿರುವ FSSAI ಪರವಾನಗಿ ಸಂಖ್ಯೆ, ISI ಗುರುತು, ತಯಾರಿಕಾ ದಿನಾಂಕ ಹಾಗೂ ಬಾಟಲಿಯ ಸೀಲ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನೀರಿನ ಗುಣಮಟ್ಟದ ಬಗ್ಗೆ ಸಂಶಯವಿದ್ದಲ್ಲಿ ಆಹಾರ ಸುರಕ್ಷತೆ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Vishwa News 24

Recent Posts

ಕೋಲಾರ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ; ಅಂಗಾಂಗ ದಾನದ ಮೂಲಕ ಇಬ್ಬರಿಗೆ ಹೊಸ ಬದುಕು – vishwanews24

ಕೋಲಾರ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ; ಅಂಗಾಂಗ ದಾನದ ಮೂಲಕ ಇಬ್ಬರಿಗೆ ಹೊಸ ಬದುಕು ಕೋಲಾರ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ…

48 seconds ago

ಪುತ್ತೂರು: ಅಸೌಖ್ಯದಿಂದ ಎರಡು ವರ್ಷದ ಮಗು ಮೃತ್ಯು – vishwanews24

ಪುತ್ತೂರು: ಅಸೌಖ್ಯದಿಂದ ಎರಡು ವರ್ಷದ ಮಗು ಮೃತ್ಯು ಪುತ್ತೂರು:  ಅಸ್ವಸ್ಥತೆಯಿಂದ ಬಳಲುತ್ತಿದ್ದ ಆಸ್ಟಿನ್ ಎಂಬ ಮಗು ಅಕ್ಟೋಬರ್ 29ರಂದು ಮೃತಪಟ್ಟಿದ್ದು,…

18 minutes ago

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ನಾಪತ್ತೆ – vishwanews24

ಮೀನುಗಾರಿಕೆಗೆ ತೆರಳಿದ್ದ ಇಬ್ಬರು ನಾಪತ್ತೆ ಉಡುಪಿ: ಕೊಡವೂರು ಗ್ರಾಮದ ಮಲ್ಪೆ ಬಂದರಿನಲ್ಲಿ ಶ್ರೀವೀರಾಂಜನೇಯ ಪರ್ಸಿಯನ್ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ದ್ವಾರಿಕಾ…

31 minutes ago

SSLC, ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ – vishwanews24

SSLC, ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು…

18 hours ago

ಪ್ರತಿ ಲೀಟರ್‌ ಹಾಲಿನ ದರ 8 ರೂ. ಹೆಚ್ಚಳ : ನ.1 ರಿಂದಲೇ ಜಾರಿಗೆ – vishwanews24

ಪ್ರತಿ ಲೀಟರ್‌ ಹಾಲಿನ ದರ 8 ರೂ. ಹೆಚ್ಚಳ : ನ.1 ರಿಂದಲೇ ಜಾರಿಗೆ ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ…

18 hours ago

ವರ್ಷದ ನಂತರ ಭಕ್ತರಿಗೆ ದರ್ಶನ ಕರುಣಿಸಿದ ಹಾಸನಾಂಬೆ – vishwanews24

ವರ್ಷದ ನಂತರ ಭಕ್ತರಿಗೆ ದರ್ಶನ ಕರುಣಿಸಿದ ಹಾಸನಾಂಬೆ : ಜಯಘೋಷದ ನಡುವೆ ತೆರೆದ ಗರ್ಭಗುಡಿ ಬಾಗಿಲು ಹಾಸನ: ವರ್ಷಕ್ಕೊಮ್ಮೆ ಮಾತ್ರ…

19 hours ago