ಉಡುಪಿ : ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ – Vishwanews24
ಉಡುಪಿ : ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
ಉಡುಪಿ : ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ ೬೪ನೇ ವಾರ್ಷಿಕ ಮಹಾಸಭೆ ಕೆ. ಅಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ ೨೨, ೨೦೨೨ರಂದು ಜರಗಿತು. ಜಯ ಕೆ. ಗತಸಭೆ ವರದಿ ಮಂಡಿಸಿದರು. ಎ. ನಟರಾಜ ಉಪಾಧ್ಯರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಿಎ ಗಣೇಶ್ ಹೆಬ್ಬಾರ್ರನ್ನು ಲೆಕ್ಕಪರಿಶೋಧಕರಾಗಿ ನಿಯುಕ್ತಿಗೊಳಿಸಲಾಯಿತು.
೨೦೨೨-೨೩ನೇ ಸಾಲಿಗೆ ಈ ಕೆಳಗಿನ ಆಡಳಿತ ಮಂಡಳಿಯನ್ನು ಆರಿಸಲಾಯಿತು.
ಅಧ್ಯಕ್ಷ : ಕೆ. ಅಜಿತ್ ಕುಮಾರ್, ಉಪಾಧ್ಯಕ್ಷ : ಕೆ. ಜೆ. ಗಣೇಶ್, ಕಾರ್ಯದರ್ಶಿ : ಸುನಿಲ್ ಕುಮಾರ್, ಜತೆಕಾರ್ಯದರ್ಶಿ : ಜಯ ಕೆ., ಕೋಶಾಧಿಕಾರಿ : ಎ. ನಟರಾಜ ಉಪಾಧ್ಯ,
ಸದಸ್ಯರು : ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ಪ್ರವೀಣ್ ಉಪಾಧ್ಯ, ಕೆ. ಜೆ. ಕೃಷ್ಣ, ಪ್ರಕಾಶ್ ಹೆಬ್ಬಾರ್, ಡಾ. ಗಣಪತಿ ಭಟ್, ಮಂಜುನಾಥ ತೆಂಕಿಲ್ಲಾಯ, ರಮೇಶ ಸಾಲಿಯಾನ್, ಕೆ. ಜೆ. ಸುಧೀಂದ್ರ, ವಸಂತ ಪಾಲನ್, ನಚಿಕೇತ
ಸಲಹಾ ಸಮಿತಿ : ಎಸ್. ವಿ. ಭಟ್, ಶ್ರೀರಮಣ ಆಚಾರ್ಯ, ವಿಜಯ್ ಕುಮಾರ್, ವಿಠಲ ಗಾಣಿಗ, ವಿದ್ಯಾಪ್ರಸಾದ್, ಅರವಿಂದ ಆಚಾರ್ಯ, ಪ್ರಶಾಂತ್ ಕೆ. ಎಸ್., ಎ. ಸತ್ಯಜಿತ್ ಉಪಾಧ್ಯ
ಗೌರವ ಸಲಹೆಗಾರ : ಎ. ರಾಘವೇಂದ್ರ ಉಪಾಧ್ಯ. ಕಾರ್ಯದರ್ಶಿ ಸುನಿಲ್ ಕುಮಾರ್ ಧನ್ಯವಾದ ಸಮರ್ಪಿಸಿದರು.
