ಉಡುಪಿ ಅಕ್ಕಪಡೆ ತ್ವರಿತ ಕಾರ್ಯಾಚರಣೆ : ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ – vishwanews24

Featured, ಉಡುಪಿ

ಉಡುಪಿ ಅಕ್ಕಪಡೆ ತ್ವರಿತ ಕಾರ್ಯಾಚರಣೆ : ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ

ಉಡುಪಿ :ಜಿಲ್ಲೆಯಲ್ಲಿ ಕಾಣೆಯಾಗಿದ್ದ ಎಂಟನೇ ತರಗತಿ ವಿದ್ಯಾರ್ಥಿಯನ್ನು ಅಕ್ಕಪಡೆ ಸಿಬ್ಬಂದಿ ಸಮಯೋಚಿತ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಪತ್ತೆ ಹಚ್ಚಿದ್ದಾರೆ.

ಜುಲೈ 19ರಂದು ಉಡುಪಿ ಜಿಲ್ಲಾ ಕಂಟ್ರೋಲ್ ರೂಮ್‌ಗೆ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಮಾಹಿತಿ ದೊರಕುತ್ತಿದ್ದಂತೆ ಅಕ್ಕಪಡೆ ಸಿಬ್ಬಂದಿ ತಕ್ಷಣವೇ ಹುಡುಕಾಟ ಆರಂಭಿಸಿದರು.

ಧರ್ಮೇಂದ್ರ ಪ್ರಧಾನ್ ವಜಾಗೊಳಿಸುವವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ : ರಾಹುಲ್ ಗಾಂಧಿ – vishwanews24

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪರಿಶೀಲನೆ ನಡೆಸಿದ ವೇಳೆ, ಬಾಲಕ ಮುದ್ದೇಬಿಹಾಳಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಇರುವುದನ್ನು ಸಿಬ್ಬಂದಿ ಗುರುತಿಸಿದರು.

ತಕ್ಷಣವೇ ಬಸ್‌ನ್ನು ನಿಲ್ಲಿಸಿ ಬಾಲಕನನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು, ಬಳಿಕ ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು.

ಅಕ್ಕಪಡೆ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಬಾಲಕ ಸುರಕ್ಷಿತವಾಗಿ ಪತ್ತೆಯಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24

ವಿಶೇಷ ಸೂಚನೆ: ಸಾರ್ವಜನಿಕರು ಅಥವಾ ಮಕ್ಕಳು, ಮಹಿಳೆಯರು ಅಪಾಯದಲ್ಲಿದ್ದಾಗ ಅಥವಾ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಉಚಿತ ತುರ್ತು ಸಹಾಯವಾಣಿ 112 ಅಥವಾ ಮಹಿಳಾ ಸಹಾಯವಾಣಿ 181 ಗೆ ಸಂಪರ್ಕಿಸಬಹುದು.

Leave a Reply