ಉಡುಪಿ: ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಮಣಿಪಾಲದ ರಶ್ಮಿ ಸಮಂತ್ -Vishwanews24
ಉಡುಪಿ: ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಮಣಿಪಾಲದ ರಶ್ಮಿ ಸಮಂತ್ -Vishwanews24
ಉಡುಪಿ: ಮಣಿಪಾಲ ಮೂಲದ ಮಣಿಪಾಲ ಎಂಐಟಿಯ ಹಳೆ ವಿದ್ಯಾರ್ಥಿ ರಶ್ಮಿ ಸಮಂತ್ ಅವರು ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಫೆಬ್ರವರಿ 11 ರಂದು ರಶ್ಮಿ ಅವರು ಯೂನಿಯನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಭಾರತೀಯ ಯುವತಿಯೊಬ್ಬರಿಗೆ ಈ ಗೌರವ ಪ್ರಾಪ್ತವಾಗುತ್ತಿರುವುದು ಇದೇ ಮೊದಲು.
ರಶ್ನಿ ಇತರ ಮೂರು ಮಂದಿ ಸ್ಪರ್ಧಾಳುಗಳಿಗಿಂತ ಇವರಿಗೆ ಹೆಚ್ಚು ಮತಗಳು ಲಭಿಸಿದ್ದು, ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸಾಮಂತ್ ಈ ಹುದ್ದೆಗಾಗಿ ಸ್ಪರ್ಧಿಸಿದ್ದ ಇತರ ಮೂವರು ಪ್ರತಿಸ್ಪರ್ಧಿಗಳ ಒಟ್ಟು ಮತಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದಾರೆ.
ಚುನಾವಣೆಯಲ್ಲಿ 4,881 ವಿದ್ಯಾರ್ಥಿಗಳು 36,405 ಮತಗಳನ್ನು ಚಲಾಯಿಸಿದ್ದಾರೆ, ಇದು ಎಸ್ಯು ದಾಖಲೆಯಾಗಿದ್ದು, ಇದು ಅತಿ ಹೆಚ್ಚು ಮತದಾನವಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ 3,708 ಮತಗಳಲ್ಲಿ 1,966 ಮತಗಳನ್ನು ಸಾಮಂತ್ ಪಡೆದರು, ಇತರ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭರ್ಜರಿ ಜಯಗಳಿಸಿದರು.
