ಉಡುಪಿ :  ಇಂಡಿಯನ್ ಐಡಲ್ ನಿಹಾಲ್ ತಾವ್ರೊ ರವರಿಗೆ ಅಭಿನಂದನಾ ಸಮಾರಂಭ -Vishwanews24

Featured, ಉಡುಪಿ

ಉಡುಪಿ :  ಇಂಡಿಯನ್ ಐಡಲ್ ನಿಹಾಲ್ ತಾವ್ರೊ ರವರಿಗೆ ಅಭಿನಂದನಾ ಸಮಾರಂಭ -Vishwanews24

ಆ. 29, ಆದಿತ್ಯವಾರ

ಸಂಜೆ ಗಂಟೆ 4.30ಕ್ಕೆ

ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಸಭಾಭವನದಲ್ಲಿ ಅಭಿನಂದನಾ ಸಮಾರಂಭ..

ಉಡುಪಿ :  ಸೋನಿ ವಾಹಿನಿಯ ಪ್ರತಿಷ್ಠಿತ ಇಂಡಿಯನ್ ಐಡಲ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿ 5ನೇ ಸ್ಥಾನ ಗಳಿಸಿದ ಕರ್ನಾಟಕದ ಏಕೈಕ ಸ್ಪರ್ಧಿ, ವಿಶ್ವದಾದ್ಯಂತ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ಕರ್ನಾಟಕ ನವತಾರೆ, ಮೂಡುಬಿದ್ರೆ ಅಲಂಗಾರಿನ *ನಿಹಾಲ್ ತಾವ್ರೊ* ಇವರನ್ನು, ನಿರಂತರ್ ಉದ್ಯಾವರ ಇವರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಹಾಗೂ ಐಸಿವೈಎಂ ಉದ್ಯಾವರ ಇವರ ಸಹಕಾರದೊಂದಿಗೆ *ಅಗಸ್ಟ್ 29, ಆದಿತ್ಯವಾರ ಸಂಜೆ ಗಂಟೆ 4.30ಕ್ಕೆ(ಸರಿಯಾಗಿ) ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಸಭಾಭವನದಲ್ಲಿ ‘ಅಭಿನಂದನಾ ಸಮಾರಂಭ’* ಏರ್ಪಡಿಸಲಾಗಿದೆ.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ. ಜೆರಾಲ್ಡ್ ಐಸಾಕ್ ಲೋಬೊ, ಧರ್ಮಪ್ರಾಂತ್ಯದ ಕುಲಪತಿ ಅ. ವಂ. ಸ್ಟ್ಯಾನಿ ಬಿ ಲೋಬೊ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಘುಪತಿ ಭಟ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಶ್ರೀಯಾನ್, ಐಸಿವೈಎಂ ಉಡುಪಿ ಧರ್ಮಪ್ರಾಂತ್ಯದ ನಿರ್ದೆಶಕರಾದ ವಂ. ಚಾರ್ಲ್ಸ್ ಮಿನೇಜಸ್, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷೆ ಮೇರಿ ಡಿಸೋಜ, ‘ಬಲೆ ತೆಲಿಪಾಲೆ’ ಹಾಸ್ಯ ಕಲಾವಿದ ಮರ್ವಿನ್ ಶಿರ್ವ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.