ಉಡುಪಿ: ಇಂದು ಜಿಲ್ಲೆಯ 111 ಜನರಿಗೆ ಕೊರೊನಾ ದೃಢ ; ಮೂವರು ಬಲಿ -Vishwanews24
ಉಡುಪಿ: ಇಂದು ಜಿಲ್ಲೆಯ 111 ಜನರಿಗೆ ಕೊರೊನಾ ದೃಢ ; ಮೂವರು ಬಲಿ -Vishwanews24
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಮತ್ತೆ ಶತಕದ ಗಡಿ ದಾಟಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಇಂದು 111 ಜನರಿಗೆ ಕೊರೊನಾ ದೃಢಪಟ್ಟಿದ್ದು, 134 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 74,101ಕ್ಕೆ ಏರಿಕೆಯಾಗಿದೆ. ಒಟ್ಟು ಡಿಸ್ಚಾರ್ಚ್ ಆದವರ ಸಂಖ್ಯೆ 72,048ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಇಂದು ಒಬ್ಬರು ಸಾವನ್ನಪ್ಪಿದ್ದು, ಈವರೆಗೂ ಒಟ್ಟು ಸಾವಿನ ಸಂಖ್ಯೆ 463ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ 1,590 ಸಕ್ರಿಯ ಪ್ರಕರಣಗಳಿವೆ.
