ಉಡುಪಿ : ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ನಾಯಕತ್ವದ ಕೊರತೆ ಇದೆ : ಪ್ರಮೋದ್ ಮಧ್ವರಾಜ್ – Vishwanews24
ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ನಾಯಕತ್ವದ ಕೊರತೆ ಇದೆ : ಪ್ರಮೋದ್ ಮಧ್ವರಾಜ್
ಉಡುಪಿ: ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ನಾಯಕತ್ವದ ಕೊರತೆ ಇದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಗುಜರಾತಿನಲ್ಲಿ 27 ವರ್ಷ ನಿರಂತರ ಬಿಜೆಪಿ ಆಡಳಿತ ನಡೆಸಿದ್ದು ಅಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದೆ. ಬಿಜೆಪಿಗೆ ಇನ್ನೂ ಐದು ವರ್ಷ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಗುಜರಾತ್‌ನ ಮತದಾರರು ಸಂಪೂರ್ಣ ವಿಶ್ವಾಸ ಇಟ್ಟಿದ್ದಾರೆ. ಪ್ರಜಾಪ್ರಭುತ್ವ ಇತಿಹಾಸದಲ್ಲೇ ಗುಜರಾತ್ ಚುನಾವಣೆ ಒಂದು ದಾಖಲೆ ” ಎಂದಿದ್ದಾರೆ.
ದೇಶದ ಯಾವ ರಾಜ್ಯದಲ್ಲೂ ಕೂಡ ಚುನಾವಣೆಯಲ್ಲಿ ಈ ರೀತಿಯ ಸಾಧನೆಯನ್ನು ಮಾಡಿಲ್ಲ, ಆದರೆ ಬಿಜೆಪಿ ಸರಕಾರ ಮಾತ್ರ 182 ರಲ್ಲಿ 157 ಸ್ಥಾನ ಪಡೆದಿದೆ . ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದೆ ಆದರೆ ಇನ್ನೊಂದು ವರ್ಷದೊಳಗೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರಕಾರ ರಚನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರು : ಬಸ್ ಟೈಮಿಂಗ್ಸ್ ವಿಚಾರಕ್ಕೆ ಗಲಾಟೆ – ಖಾಸಗಿ ಬಸ್ ಸಿಬ್ಬಂದಿಗಳು ಪೊಲೀಸ್ ವಶಕ್ಕೆ :- Vishwanews24
ಆಮ್ ಆದ್ಮಿ ಯಾವ ರಾಜ್ಯದಲ್ಲಿ ಗೆದ್ದರೂ ಕಾಂಗ್ರೆಸ್‌ಗೆ ಮಾತ್ರ ಅದರಿಂದ ಅನಾನುಕೂಲವಾಗುವುದೇ ಹೊರತು ಬಿಜೆಪಿಗೆ ಅದರಿಂಡ ಸಹಾಯವಾಗಲಿದೆ ಎಂದಿದ್ದಾರೆ.
