ಉಡುಪಿ : ಕಾಂತಾರ ಖ್ಯಾತಿಯ ನಟಿ, ಪ್ರಸಿದ್ಧ ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ಗೆ ಸನ್ಮಾನ – Vishwanews24
ಉಡುಪಿ : ಕಾಂತಾರ ಖ್ಯಾತಿಯ ನಟಿ, ಪ್ರಸಿದ್ಧ ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ಗೆ ಸನ್ಮಾನ
ಉಡುಪಿ : ಕಾಂತಾರ ಖ್ಯಾತಿಯ ಚಲನಚಿತ್ರ ನಟಿ, ಪ್ರಸಿದ್ಧ ಭರತನಾಟ್ಯ ಕಲಾವಿದೆ ಮತ್ತು ಗಾಯಕಿ ಮಾನಸಿ ಸುಧೀರ್ ಅವರನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ನಲ್ಲಿ ಸನ್ಮಾನಿಸಲಾಯಿತು.
14 ಚಲನಚಿತ್ರಗಳಲ್ಲಿ ನಟಿಸಿರುವ ಮಾನಸಿ ಸುಧೀರ್ ಅವರ ವಿಶಿಷ್ಟ ಪಾತ್ರ ನಿರ್ವಹಣೆ ‘ಕಾಂತಾರ’ದಲ್ಲಿ ಜನಮೆಚ್ಚುಗೆ ಗಳಿಸಿದೆ. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಕಲಾವಿದೆ,ನಾವು ಮಾಡುವ ಕೆಲಸವನ್ನು ಆನಂದಿಸಬೇಕು, ಯಶಸ್ಸಿಗಾಗಿ ಕಷ್ಟಪಡಬೇಕು ಎಂದರು.
ಉಡುಪಿ: ಮಲ್ಪೆ ಬೀಚ್‌ನಲ್ಲಿ ಶೌಚಾಲಯ ಬಳಕೆಗೆ 10 ರೂ. – ರಶೀದಿ ಪೊಟೋ ವೈರಲ್ – Vishwanews24
ಜಿಸಿಪಿಎಎಸ್ ಮುಖ್ಯಸ್ಥ ವರದೇಶ್ ಹಿರೇಗಂಗೆ ಮಾತನಾಡಿ, ಕಲಾವಿದೆ ಮಾನಸಿ ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲು ಹತ್ತಿದವರು. ಮಹಿಳಾ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಾವು ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಿದ್ದೇವೆ ಆದರೆ ಇನ್ನೂ ಕ್ರಮಿಸುವ ದೂರ ಬಹಳವಿದೆ ಎಂದರು.
ಪ್ರೊ.ಫಣಿರಾಜ್ ಮಾತನಾಡಿ ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಉತ್ತಮ ಪಾತ್ರಗಳು ಸಿಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಜೆಂಡರ್ ಕ್ಲಬ್-ಲಾ ಸ್ಪೆಕ್ಟರ್ ಅನ್ನು ಮಾನಸಿ ಸುಧೀರ್ ಉದ್ಘಾಟಿಸಿದರು. ಹಾಗೆಯೇ ಶಿಕ್ಷಕೇತರ ಮಹಿಳಾ ನೌಕರರನ್ನು ಸನ್ಮಾನಿಸಲಾಯಿತು. ಶ್ರಾವ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು. ಎಸ್ಥೆಟಿಕ್ಸ್, ಇಕೋಸಫಿ, ಪೀಸ್ ಮತ್ತು ಆರ್ಟ್ ಜರ್ನಲಿಸಂ ನ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದರು.
ಮಂಗಳೂರು: ಕಸಾಯಿ ಖಾನೆಗೆ ಕೊಂಡೊಯ್ಯುವಾಗ ಎಮ್ಮೆ ತಿವಿದು ಯುವಕ ಮೃತ್ಯು – Vishwanews24
