ಉಡುಪಿ: ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು – Vishwanews24
ಉಡುಪಿ: ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಉಡುಪಿ : ಮಲ್ಪೆ ಬಂದರಿನ ಕಣ್ಣಿ ಪಾರ್ಟಿಯಲ್ಲಿ ಕೆಲಸ ಮಾಡುತಿದ್ದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ವಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಹನುಮ ನಿಧಿ ಕಣ್ಣಿ ಪಾರ್ಟಿಯಲ್ಲಿ ಕೆಲಸ ಮಾಡುತಿದ್ದ ಪುರಂದರ ಎಂದು ಗುರುತಿಸಲಾಗಿದೆ.
ಪುರಂದರ ಅವರು ಭಾನುವಾರ ರಾತ್ರಿ 10:45 ರ ಸುಮಾರಿಗೆ ಬೋಟ್ ನಿಂದ ಮೀನು ಖಾಲಿ ಮಾಡುವ ಸಂಧರ್ಭ ಕಾಲು ಜಾರಿ ಸಮುದ್ರಕ್ಕೆಬಿದ್ದಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದ ಮುಳುಗು ತಜ್ಷರಾದ ಈಶ್ವರ್ ಮಲ್ಪೆ ಅವರು ದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು ಆದರೆ ಪುರಂದರ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.
ತೊಟ್ಟಂ ಮೂಲದವರಾಗಿದ್ದ ಪುರಂದರ ಅವರು ಕಳೆದ ಸುಮಾರು 10 ವರ್ಷಗಳಿಂದ ಕಣ್ಣಿ ಪಾರ್ಟಿ ಯಲ್ಲಿ ಕೆಲಸ ಮಾಡುತಿದ್ದರು ಎನ್ನಲಾಗಿದೆ.
