ಉಡುಪಿ : ಕೃಷ್ಣಮಠದಲ್ಲಿ ನಿತ್ಯಪೂಜೆ ಹೊರತು ಭಕ್ತರ ಸೇವೆ ಸ್ವೀಕಾರ ಇಲ್ಲ -Vishwanews24
ಉಡುಪಿ:ಕೊರೊನಾ ಸೋಂಕು ಹರಡುವಿಕೆಯ ತಡೆಗೆ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಭಕ್ತರಿಂದ ಸೇವೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಕೋರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಯವರ ಆದೇಶದ ಮೇರೆಗೆ ಉಡುಪಿ ಜಿಲ್ಲೆಯ ಎಲ್ಲ ದೇವಸ್ಥಾನಗಳ್ಳಲ್ಲಿ ನಿತ್ಯ ಪೂಜೆ ಹೊರತು ಇನ್ನಿತರ ಪೂಜೆ ಗಳನ್ನೂ ಉತ್ಸವ,ಜಾತ್ರೆಗಳನ್ನು ನಿಲ್ಲಿಸಲಾಗಿದೆ , ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಶುಚಿತ್ವವನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿರುವುದರಿಂದ ಮುಂದಿನ ನಿರ್ದೇಶನ ಪರ್ಯಂತ ಇವುಗಳು ಜಾರಿಯಲ್ಲಿರುವುದರಿಂದ ಭಜಕ ಮಹಾಜನರು ಸಹಕರಿಸುವಂತೆ ವಿನಂತಿ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದ್ದಾರೆ .
ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಸಾರ್ವಜನಿಕರ ದೃಷ್ಟಿಯಿಂದ ಸರ್ಕಾರದ ಸೂಚನೆಯನ್ನು ಎಲ್ಲರೂ ಪಾಲಿಸೋಣ. ಭಾನುವಾರ ಮನೆಯಲ್ಲಿದ್ದುಕೊಂಡು ಸೋಂಕು ವ್ಯಾಪಿಸದಂತೆ ತಡೆಯೋಣ ಎಂದು ಸ್ವಾಮೀಜಿ ಕರೆ ನೀಡಿದರು.
ಕೃಷ್ಣಮಠದಲ್ಲಿ ಎಂದಿನಂತೆ ಪೂಜೆಗಳು ನಡೆಯುತ್ತವೆ. ಆದರೆ, ಭಕ್ತರು ಮನೆಯಲ್ಲಿದ್ದುಕೊಂಡೇ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ಕೃಷ್ಣನ ಜಪ ಮಾಡುವ ಮೂಲಕ ರೋಗವನ್ನು ದೂರವಿಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.
