ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ನಿರ್ವಹಣೆ, ಸ್ಥಿರಾಸ್ತಿ ಮತ್ತು ಚರಾಸ್ತಿಯ ಪರಿಶೀಲನೆಯ ಸಂದರ್ಭದಲ್ಲಿ ಉಪಸ್ಥಿತಿಯಿರಲು ದೇವಸ್ಥಾನ ಮಹಾಸಂಘಕ್ಕೂ ಅವಕಾಶ ನೀಡಬೇಕು : ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ ಆಗ್ರಹ  -Vishwanews24

Featured, ಉಡುಪಿ

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ನಿರ್ವಹಣೆ, ಸ್ಥಿರಾಸ್ತಿ ಮತ್ತು ಚರಾಸ್ತಿಯ ಪರಿಶೀಲನೆಯ ಸಂದರ್ಭದಲ್ಲಿ ಉಪಸ್ಥಿತಿಯಿರಲು ದೇವಸ್ಥಾನ ಮಹಾಸಂಘಕ್ಕೂ ಅವಕಾಶ ನೀಡಬೇಕು : ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ ಆಗ್ರಹ  -Vishwanews24

ಉಡುಪಿ: ಸರಕಾರವು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅವ್ಯವಹಾರಗಳ ಬಗ್ಗೆ ಕೂಡಲೇ ತನಿಖೆ ಮಾಡಲು ನೀಡಿದ ಆದೇಶಕ್ಕೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಅಭಿನಂದನೆಗಳನ್ನು ವ್ಯಕ್ತಪಡಿಸುತ್ತದೆ. ಆದರೆ ಕೇವಲ ಒಂದು ದಿನದ ತನಿಖೆಯಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಅವ್ಯವಹಾರಗಳ ಪೂರ್ಣ ತನಿಖೆ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಮಾನ್ಯ ಸಚಿವರು ಕೂಡಲೇ ಸಕಾರಾತ್ಮಕ ಕೃತಿ ಮಾಡಿದ್ದು ನಿಜವಾಗಿ ಸ್ತುತ್ಯಾರ್ಹವಾಗಿದ್ದು, ಈ ಬಗ್ಗೆ ಮಾನ್ಯ ಧಾರ್ಮಿಕ ದತ್ತಿ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರಿಗೂ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ ಎಂದು ದವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರರಾದ ಶ್ರೀ ಗುರುಪ್ರಸಾದ ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ : ರಾಜ್ಯದಲ್ಲಿ ಡ್ರಗ್ಸ್‌ ವಿರೋಧಿ ನೀತಿ ಶೀಘ್ರ ಜಾರಿಗೆ ತರಲಾಗುವುದು : ಗೃಹ ಸಚಿವ ಬಸವರಾಜ ಬೊಮ್ಮಾಯಿ -Vishwanews24

ಶ್ರೀ ಗೌಡ ಅವರು ಮುಂದೆ ಮಾತನಾಡುತ್ತಾ, ದೇವಸ್ತಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಈಗಾಗಲೇ ಈ ಪ್ರಕರಣದ ಸಂಬಂಧ ಮಾನ್ಯ ದತ್ತಿ ಇಲಾಖೆಯ ಆಯುಕ್ತರು ಬೆಂಗಳೂರು ಮತ್ತು ಮಾನ್ಯ ಧಾರ್ಮಿಕ ದತ್ತಿ ಇಲಾಖೆಯ ಸಚಿವರಲ್ಲ ದೂರನ್ನು ದಾಖಲಿಸಲಾಗಿದ್ದು. ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಕೂಡ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಭಾಗಿಯಾಗುವಂತೆ ಅವಕಾಶ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ. ತನಿಖೆಯು ಪಾರದರ್ಶಕವಾಗಿರಬೇಕು ಮತ್ತು ಅವ್ಯವಹಾರ ಮಾಡಿದ ಭ್ರಷ್ಟ ಅಧಿಕಾರಿಗಳು ಒಂದೇ ದಿನದಲ್ಲಿ ಈ ಪ್ರಕರಣದಿಂದ ಕ್ಲೀನ್ ಚೀಟ್ ಆಗಿ ಹೊರಬರುವುದನ್ನು ತಡೆಯಲು, ಈ
ತನಿಖೆಯಲ್ಲಿ ಭಕ್ತರ ಸಹಭಾಗವು ಅಷ್ಟೇ ಮಹತ್ವದ್ದಿದೆ. ಹಾಗಾಗಿ ಎಲ್ಲಾ ಆಯಾಮಗಳಿಂದ ತನಿಖೆಯಾಗಲು ಭಕ್ತರು ಸಹಭಾಗ ಮಾಡಬೇಕು ಎಂದು ಅವರು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಇದನ್ನೂ ಓದಿ : ದೇಶದಲ್ಲಿ ಗೋ ಮಾಂಸ ನಿಷೇಧ ಮಾಡಿ ಗೋ ಮಾಂಸ ರಫ್ತು ನಿಲ್ಲಿಸಿ : ಯು.ಟಿ. ಖಾದರ್ -Vishwanews24

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕದ ಸದಸ್ಯರಾದ ಶ್ರೀ. ಮಧುಸೂದನ ಅಯಾರ್ ಶ್ರೀ, ದಿನೇಶ ಎಂ. ಪಿ, ಶ್ರೀ ಶ್ರೀನಿವಾಸ. ಶ್ರೀ. ಚಂದ್ರ ಮೊಗೇರ, ಶ್ರೀ ವಿಜಯ ಕುಮಾರ, ಸಮನ್ವಯಕರು,ಹಿಂದೂ ಜನಜಾಗೃತಿ ಸಮಿತಿ, ಉಡುಪಿ, ಉಪಸ್ಥಿತರಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್

ಇದನ್ನೂ ಓದಿ : ಉಡುಪಿ : ಮಾರ್ಚ್‌ 22 ರಿಂದ 28 ರವರೆಗೆ ಸುಮನಸಾ ಕೊಡವೂರು ನಾಟಕೋತ್ಸವ “ರಂಗಹಬ್ಬ-9″ -Vishwanews24