Featured

ಉಡುಪಿ : ಕೋಳ್ಯೂರು ವೈಭವ ಸಮಾಪನ ಸಮಾರಂಭ – Vishwanews24

ಉಡುಪಿ : ಕೋಳ್ಯೂರು ವೈಭವ ಸಮಾಪನ ಸಮಾರಂಭ – Vishwanews24

ಉಡುಪಿ : ಯಕ್ಷಗಾನದ ಶ್ರೇಷ್ಠ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರಿಗೆ ನವತ್ಯಬ್ದ ಸಮಾರಂಭ ಅಕ್ಟೋಬರ್ ೧೪, ೨೦೨೧ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆಗೊ0ಡಿದ್ದು ಸಮಾಪನ ಸಮಾರಂಭವು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ನವೆಂಬರ್ ೧೪, ೨೦೨೧ ಭಾನುವಾರದಂದು ಸ0ಪನ್ನಗೊಳ್ಳಲಿದೆ.

ಅ0ದು ಪೂರ್ವಾಹ್ನ ೯.೦೦ ಗಂಟೆಗೆ ಐಶ್ವರ್ಯಾ ಮಣಿಕರ್ಣಿಕಾ ಇವರಿಂದ ವೀಣಾವಾದನ. ಬೆಳಗ್ಗೆ ೧೦ ಗಂಟೆಗೆ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ. ಅಭ್ಯಾಗತರಾಗಿ ಪೆರವೋಡಿ ನಾರಾಯಣ ಹಾಸ್ಯಗಾರ, ಡಾ. ಪಿ. ಎಸ್. ಎಡಪಡಿತ್ತಾಯ, ಡಾ. ಎಚ್. ಎಸ್. ಬಲ್ಲಾಳ್ ಪಾಲ್ಗೊಳ್ಳಲಿರುವರು. ೧೧ ಗಂಟೆಗೆ ಆಚಾರ್ಯ ಡಾ. ಪಪ್ಪು ವೇಣುಗೋಪಾಲ ರಾವ್ ಅವರಿಂದ ವಿದ್ವತ್
ಗೋಷ್ಠಿ. ೧೨ ಗಂಟೆಗೆ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸೂರ್ಯನಾರಾಯಣ ಭಟ್ ಪಿ. ಎಸ್., ಭೋಜರಾಜ ವಾಮಂಜೂರು, ಕೃಷ್ಣಪ್ರಕಾಶ ಉಳಿತ್ತಾಯ, ಶಶಿಕಾಂತ ಶೆಟ್ಟಿ, ಅಮ್ಮುಂಜೆ ಮೋಹನ ಕುಮಾರ್ ಮತ್ತು ಪಟ್ಲ ಸತೀಶ್ ಶೆಟ್ಟಿ ಇವರಿಂದ ಕೋಳ್ಯೂರರಿಗೆ ನುಡಿ ಗೌರವ. ಅಪರಾಹ್ನ ೨ ಗಂಟೆಗೆ ರಾಜೇ0ದ್ರ ಕಾರಂತ ಹಾಗೂ ಮಂಜುಳಾ ಸುಬ್ರಹ್ಮಣ್ಯ ಇವರಿಂದ ಆತ್ಮಕಥನ ವಾಚನ. ೨.೩೦ ರಿಂದ ಉಭಯ ತಿಟ್ಟುಗಳ ೯೦ ಕ್ಕೂ ಮೇಲ್ಪಟ್ಟು ಸ್ತಿçà ವೇಷಧಾರಿಗಳಿಗೆ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ಸಂಮಾನ. ಅಪರಾಹ್ನ ೪.೦೦ ಗಂಟೆಗೆ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಡಾ. ಕೋಳ್ಯೂರು ರಾಮಚಂದ್ರ ರಾಯರಿಗೆ ಅಭಿನಂದನೆ. ಡಾ. ಪದ್ಮಾ ಸುಬ್ರಹ್ಮಣ್ಯಮ್ ಮತ್ತು ಡಾ. ಕಲಾಮಂಡಲ ಗೋಪಿ
ಇವರು ಆನ್‌ಲೈನ್ ನಲ್ಲಿ ಶುಭಾಶಂಸನೆ ಗೈಯ್ಯಲಿರುವರು.

ಎ. ಪಿ. ಮಾಲತಿ, ಅರುವ ಕೊರಗಪ್ಪ ಶೆಟ್ಟಿ, ಮಂಟಪ ಪ್ರಭಾಕರ ಉಪಾಧ್ಯ, ಲಕ್ಷ್ಮೀಶ ತೋಳ್ಪಾಡಿ ಯವರು ಅಭಿನಂದನಾ ಮಾತುಗಳನ್ನಾಡಲಿರುವರು. ಸಂಜೆ ೬.೩೦ ರಿಂದ ಕೇರಳದ ಕಲಾಮಂಡಲಮ್ ತಂಡದಿ0ದ ಕಥಕಳಿ ಕಲಾ ಪ್ರದರ್ಶನ ಗೌರವ ಆಖ್ಯಾನ : ಕೃಷ್ಣ ಕುಚೇಲ ವೃತ್ತಮ್. ಈ ಎಲ್ಲಾ ಕಾರ್ಯಕ್ರಮಗಳಿಗೆ, ಕಲಾಸಕ್ತರಿಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಕೋಳ್ಯೂರು ಕುಟುಂಬದ ಪರವಾಗಿ ಅವರ ಪುತ್ರ ಕೆ. ಶ್ರೀಧರ ರಾವ್ ಆದರದ ಸ್ವಾಗತ ಕೋರಿದ್ದಾರೆ.

Vishwa News 24

Recent Posts

ಮೇ 30-31 ರಂದು ದ.ಕ. ಜಿಲ್ಲೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭೇಟಿ – vishwanews24

ಮೇ 30-31 ರಂದು ದ.ಕ. ಜಿಲ್ಲೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭೇಟಿ ಮಂಗಳೂರು: ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು…

7 minutes ago

ಬೇಕರಿ ತಿನಿಸು, ಚಿಪ್ಸ್‌ಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣಗಳ ಬಳಕೆ: ಆಹಾರ ಸುರಕ್ಷತಾ ಇಲಾಖೆ ವರದಿ ಪ್ರಕಟ – vishwanews24

ಬೇಕರಿ ತಿನಿಸು, ಚಿಪ್ಸ್‌ಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣಗಳ ಬಳಕೆ: ಆಹಾರ ಸುರಕ್ಷತಾ ಇಲಾಖೆ ವರದಿ ಪ್ರಕಟ ಬೆಂಗಳೂರು: ಬೇಕರಿಯ…

16 minutes ago

ಮಂಗಳೂರು: ಬಕ್ರೀದ್ ಹಿನ್ನೆಲೆ ಅಕ್ರಮ ದನಕರುಗಳ ಹತ್ಯೆ ಸಾಗಾಟಕ್ಕೆ ಅವಕಾಶವಿಲ್ಲ : ದ.ಕ. ಡಿಸಿ ಸೂಚನೆ – vishwanews24

ಮಂಗಳೂರು: ಬಕ್ರೀದ್ ಹಿನ್ನೆಲೆ ಅಕ್ರಮ ದನಕರುಗಳ ಹತ್ಯೆ  ಸಾಗಾಟಕ್ಕೆ ಅವಕಾಶವಿಲ್ಲ : ದ.ಕ. ಡಿಸಿ ಸೂಚನೆ ಮಂಗಳೂರು: ಮುಂಬರುವ ಬಕ್ರೀದ್…

28 minutes ago

ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ..! vishwanews24

ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ..! ಬೆಂಗಳೂರು : ಮೂರು ವರ್ಷಗಳಿಂದ ರಾಜ್ಯವನ್ನು ಆಳಿದ ಸಿದ್ದರಾಮಯ್ಯ ಆಳ್ವಿಕೆ…

36 minutes ago

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

18 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

22 hours ago