ಉಡುಪಿ : ಕ್ರೂರ ಮನಸ್ಥಿತಿಗಳಿಗೆ ಯಾವ ರೀತಿ ಉತ್ತರ ಕೊಡಬೇಕು ಎನ್ನುವುದು ಗೊತ್ತಿದೆ : ಯಶ್ಪಾಲ್ ಸುವರ್ಣ – Vishwanews24
ಕ್ರೂರ ಮನಸ್ಥಿತಿಗಳಿಗೆ ಯಾವ ರೀತಿ ಉತ್ತರ ಕೊಡಬೇಕು ಎನ್ನುವುದು ಗೊತ್ತಿದೆ..
ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಕೊಟ್ಟೆ ಕೊಡುತ್ತೇವೆ..
ನಾವು ಅವರದೇ ರೀತಿಯಲ್ಲಿ ಪ್ರತ್ಯುತ್ತರ ಕೊಟ್ಟರೆ ಮಾತ್ರ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬಹುದು..
ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಗುಡುಗು..
ಉಡುಪಿ: ಜಿಹಾದಿಗಳ ಮಾನಸಿಕತೆ ಏನೆಂಬುವುದನ್ನು ಇಡೀ ದೇಶದ ಜನ ತಿಳಿದುಕೊಂಡಿದ್ದಾರೆ. ರಾಜಸ್ಥಾನದಲ್ಲಿ ಬಡ ಟೈಲರ್ ಕನ್ಹಯ್ಯ ಲಾಲ್ ನನ್ನು ಹತ್ಯೆ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ದುಷ್ಟ ಕೃತ್ಯವನ್ನು ಸಾಬೀತು ಮಾಡಿದ್ದಾರೆ. ಜಿಹಾದಿಗಳು ಮಾಡಿದ ಇಂತಹ ಕ್ರೂರ ಕೃತ್ಯವನ್ನು ಖಂಡಿಸುವುದಲ್ಲ. ಇಂತಹ ಕೃತ್ಯವೆಸಗಿದ ಕ್ರೂರ ಮನಸ್ಥಿತಿಗಳಿಗೆ ಯಾವ ರೀತಿ ಉತ್ತರ ಕೊಡಬೇಕು ಎನ್ನುವುದು ಗೊತ್ತಿದೆ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಕೊಟ್ಟೆ ಕೊಡುತ್ತೇವೆ ಎಂದು ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಗುಡುಗಿದ್ದಾರೆ.
ಗುರುವಾರ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮವರ ತಲೆ ತೆಗೆದರೆ ಅದಕ್ಕೆ ನಾವು ಅವರದೇ ರೀತಿಯಲ್ಲಿ ಪ್ರತ್ಯುತ್ತರ ಕೊಟ್ಟರೆ ಮಾತ್ರ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬಹುದು. ಕನ್ಯಯ್ಯ ಲಾಲ್ ಹತ್ಯೆಕೋರರಿಗೆ ಮಾತ್ರ ಗಲ್ಲುಶಿಕ್ಷೆ ಅಲ್ಲ. ಅವರ ಕುಟುಂಬವೂ ಸೇರಿದಂತೆ ಕೃತ್ಯಕ್ಕೆ ಸಹಕರಿಸಿದೆಲ್ಲರನ್ನೂ ಈ ದೇಶದಿಂದಲೇ ಒದ್ದೋಡಿಸಬೇಕು. ಆದಷ್ಟು ಬೇಗ ಹಿಂದೂ ಸಮುದಾಯದವರೆಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಿ ಎಚ್ಚರಿಕೆ ನೀಡುತ್ತೇವೆ ಎಂದರು.
ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ಎನ್ಐಎ ತಂಡದಿಂದ 18 ಕಡೆ ದಾಳಿ , ಕಾರ್ಯಾಚರಣೆ – Vishwanews24
