ಉಡುಪಿ ಜಿಲ್ಲಾ ರಜತ ಮಹೋತ್ಸವ ; ಸಾರ್ವಜನಿಕರಿಂದ ಲಾಂಛನ ವಿನ್ಯಾಸಕ್ಕಾಗಿ  ಕರೆ – Vishwanews24

Featured, ಉಡುಪಿ

ಉಡುಪಿ ಜಿಲ್ಲಾ ರಜತ ಮಹೋತ್ಸವ  ಲಾಂಛನ ವಿನ್ಯಾಸಕ್ಕಾಗಿ  ಕರೆ 

ಉಡುಪಿ ಜಿಲ್ಲೆ ಆರಂಭಗೊಂಡು 25 ವಸಂತಗಳ ಹಿನ್ನಲೆಯಲ್ಲಿ , ರಜತ ಮಹೋತ್ಸವ  ಕಾರ್ಯಕ್ರಮವು ಆಗಸ್ಟ್‌ 25 ರಿಂದ ವಿವಿಧ ಹಂತಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಡಯಲಿದ್ದು,  ರಜತ ಮಹೋತ್ಸವ ಕಾರ್ಯಕ್ರಮದ ಅಂದವಾದ ಲಾಂಛನವನ್ನು , ಟ್ಯಾಗ್ಲೈನ್‌ ನೊಂದಿಗೆ  ರಚಿಸಿ,  ಜಿಲ್ಲಾಡಳಿತಕ್ಕೆ  ನೀಡಲು     ಸಾರ್ವಜನಿಕರಿಂದ   ಲಾಂಛನ  ವಿನ್ಯಾಸಗಳನ್ನು ಆಹ್ವಾನಿಸಲಾಗಿದೆ.

ಸಾರ್ವಜನಿಕರು ರಚಿಸಿದ ಅತ್ಯುತ್ತಮ ಒಂದು ಲಾಂಛನವನ್ನು ಆಯ್ಕೆ   ಮಾಡಿಕೊಳ್ಳಲಾಗುವುದು , ಆಯ್ಕೆಯಾದ ಲಾಂಛನಕ್ಕೆ ರೂ.10000 (ರೂಪಾಯಿ ಹತ್ತು ಸಾವಿರಗಳು) ಗಳ ಬಹುಮಾನ ನೀಡಲಾಗುವುದು.  ಲಾಂಛನವನ್ನು ಜಿಲ್ಲಾಧಿಕಾರಿ ಕಛೇರಿಯ ಈಮೇಲ್‌ ವಿಳಾಸ  dcudu-rd-ka@nic.in  ಕ್ಕೆ ಆಗಸ್ಟ್‌ 16 ರೊಳಗೆ ನೀಡಲು ಕೋರಲಾಗಿದೆ.

Leave a Reply