ಉಡುಪಿ : ಜಿಲ್ಲೆಯಲ್ಲಿ ಇಂದು 258 ಕೋವಿಡ್ ಪ್ರಕರಣ – Vishwanews24
ಉಡುಪಿ : ಜಿಲ್ಲೆಯಲ್ಲಿ ಇಂದು 258 ಕೋವಿಡ್ ಪ್ರಕರಣ – Vishwanews24
ಉಡುಪಿ : ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಅಲ್ಲದೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 258 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.ಈ ಪೈಕಿ ಉಡುಪಿಯಲ್ಲಿ 133, ಕುಂದಾಪುರ 75, ಕಾರ್ಕಳ 47 ಹಾಗೂ ಹೊರ ಜಿಲ್ಲೆಯ ಮೂವರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 3348 ಕೋವಿಡ್ ಸಕ್ರಿಯ ಪ್ರಕರಣ ಗಳಿವೆ. ಇಂದು ಜಿಲ್ಲೆಯಲ್ಲಿ ಉಡುಪಿಯ 68 ವರ್ಷದ ಓರ್ವ ಮಹಿಳೆ ಹಾಗೂ ಕುಂದಾಪುರದ 43 ವರ್ಷದ ಓರ್ವ ಮಹಿಳೆ ಸೋಂಕಿ ನಿಂದ ಮೃತಪಟ್ಟಿದ್ದಾರೆ.
