ಉಡುಪಿ :ಜುಲೈ 13 ರಂದು ಮಿನಿ ಉದ್ಯೋಗ ಮೇಳ – Vishwanews24

Featured, ಉಡುಪಿ

ಉಡುಪಿ :ಜುಲೈ 13 ರಂದು ಮಿನಿ ಉದ್ಯೋಗ ಮೇಳ – Vishwanews24

ಉಡುಪಿ,  : ಬಜಾಜ್ ಅಲಿಯಾನ್ಸ್ ಇನ್ಸೂರೆನ್ಸ್ ಪ್ರೆ.ಲಿ, ಇಂಪುಲ್ಸ್ ಕಂಪನಿ ಪ್ರೆ.ಲಿ, ಬಜ್‌ವರ್ಕ್ಸ್ ಅಡ್ವಾನ್ಸಿಂಗ್ ಹ್ಯೂಮನ್ ಕ್ಯಾಪಿಟಲ್ ಪ್ರೆ.ಲಿ, ಶ್ರೀ ಸಾಯಿ ಎಂಟರ್ ಪ್ರೆಸ್ ಪ್ರೆ.ಲಿ ಮತ್ತು ಅಮೆಜಾನ್ ಕಂಪನಿಗಳ ವತಿಯಿಂದ ಜುಲೈ 13 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ರ ವರೆಗೆ ನಗರದ ರಜತಾದ್ರಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ, ಬಿ.ಸಿ.ಎ, ಬಿ.ಸಿ.ಎಸ್, ಬಿ.ಕಾಂ, ಬಿ.ಎಸ್ಸಿ, ಎಮ್.ಎಸ್ಸಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಡಿಪ್ಲೋಮಾ ಇನ್ ಮೆಕ್ಯಾನಿಕಲ್, ಬಿ.ಇ ಇಂಜಿನಿಯರಿ0ಗ್, ಡಿ.ಫಾರ್ಮ ಬಿ.ಫಾರ್ಮ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ಮೊ.ನಂ:8197440155, 8105618291, 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ  ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು 10 ದಿನದ ಒಳಗೆ ಸರಿಪಡಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ – Vishwanews24

Leave a Reply