ಉಡುಪಿ: ಜೂ. 14ರ ನಂತರ ಅನ್ ಲಾಕ್ ಮಾಡದಿದ್ದರೆ ಕೊರೊನಾಗಿಂತ ಗಂಭೀರ ಪರಿಸ್ಥಿತಿ : ರಘುಪತಿ ಭಟ್ – Vishwanews24

Featured, ಉಡುಪಿ

ಉಡುಪಿ: ಜೂ. 14ರ ನಂತರ ಅನ್ ಲಾಕ್ ಮಾಡದಿದ್ದರೆ ಕೊರೊನಾಗಿಂತ ಗಂಭೀರ ಪರಿಸ್ಥಿತಿ : ರಘುಪತಿ ಭಟ್

ಆರ್ಥಿಕ ಪ್ಯಾಕೇಜು ಕೊಟ್ಟು ಪೂರೈಸುವುದಿಲ್ಲ…

ಉಡುಪಿ: ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಾ ಬಂದಿದ್ದು, ಮುಂದೆ ಸಂಪೂರ್ಣ ಲಾಕ್ ಡೌನ್ ಮಾಡುವುದು ಬೇಡ. ಕೆಲವು ನಿಬಂಧನೆಗಳೊಂದಿಗೆ ಜನಜೀವನ ಪ್ರಾರಂಭಿಸುವುದು ಒಳ್ಳೆಯದು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಮತ್ತು ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳು ಬೇಡ.

ಕನಿಷ್ಠ ಮೂರು ತಿಂಗಳು ಈ ಚಟುವಟಿಕೆ ಬಂದ್ ಮಾಡಬೇಕು. ಜನಜೀವನಕ್ಕೆ ಅನುಕೂಲ ಮಾಡಿಕೊಡಬೇಕು.

ಗೂಡಂಗಡಿ, ಹೋಟೆಲ್ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅವಕಾಶ ಕೊಡಬೇಕು. ಜೂನ್ 14 ನಂತರ ಲಾಕ್ ಡೌನ್ ಮುಂದುವರೆದರೆ ಆರ್ಥಿಕ ಸಂಕಷ್ಟವಾಗುತ್ತದೆ.

ಆರ್ಥಿಕ ಪ್ಯಾಕೇಜು ಕೊಟ್ಟು ಪೂರೈಸುವುದಿಲ್ಲ. ಜೂ.14ರ ನಂತರ ಲಾಕ್ ಡೌನ್ ವಾಪಸ್ ಪಡೆಯಲು ಸಿಎಂಗೆ ಮನವಿ ಮಾಡಿದ್ದೇನೆ. ಪಾಸಿಟಿವಿಟಿ ರೇಟ್ ಶೇ. 10 -15 ಕಡಿಮೆಯಾದ ಜಿಲ್ಲೆ ಗೆ ಲಾಕ್ ಡೌನ್ ಬೇಡ ಎಂದಿದ್ದಾರೆ.

ರಾಜ್ಯದಲ್ಲಿ ಪಾಸಿಟಿವ್ ಕೇಸ್ 50 ಸಾವಿರದಿಂದ 12 ಸಾವಿರಕ್ಕೆ ಇಳಿದಿದೆ ಎಂದ ಅವರು, ಅನ್ ಲಾಕ್ ಮಾಡದಿದ್ದರೆ ಕೋವಿಡ್ ಗಿಂತ ಗಂಭೀರ ಪರಿಸ್ಥಿತಿ ಉಂಟಾಗುತ್ತದೆ ಎಂದರು.