ಉಡುಪಿ:  ತಾಯಿಯ ಮೃತದೇಹದ ಎದುರು ಕಣ್ಣೀರಿಟ್ಟ ರವಿ ಪೂಜಾರಿ  – vishwanews24

Featured, ಉಡುಪಿ

ಉಡುಪಿ:  ತಾಯಿಯ ಮೃತದೇಹದ ಎದುರು ಕಣ್ಣೀರಿಟ್ಟ ರವಿ ಪೂಜಾರಿ 

ಉಡುಪಿ: ಭೂಗತ ಪಾತಕಿ ರವಿ ಪೂಜಾರಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಉಡುಪಿಗೆ ಬಂದಿದ್ದು, ತಾಯಿಯ ಮೃತದೇಹ ನೋಡುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

ತಾಯಿ ಅಂತ್ಯಕ್ರಿಯೆ: ಉಡುಪಿ ಮೂಲದ ಭೂಗತ ಪಾತಕಿ ರವಿ ಪೂಜಾರಿಯ ತಾಯಿ ಸುಶೀಲಾ ಗುರುವಾರ ರಾತ್ರಿ ನಿಧನರಾಗಿದ್ದರು, ಈ ಹಿನ್ನೆಲೆಯಲ್ಲಿ ರವಿ ಪೂಜಾರಿ ತಾಯಿಯ ಅಂತ್ಯಕ್ರಿಯಲ್ಲಿ ಭಾಗವಹಿಸಲು ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ. ಮಲ್ಪೆ ಸಮೀಪದ ನೆರ್ಗಿಯ ಹಿರಿಯರ ಮನೆಯಲ್ಲಿ ಬೆಳಗ್ಗೆ 10 ಗಂಟೆಗೆ ತಾಯಿಯ ಅಂತ್ಯಕ್ರಿಯೆಯಲ್ಲಿ ರವಿ ಪೂಜಾರಿ ಭಾಗವಹಿಸಿದ್ದು, ಬೆಂಗಳೂರಿಂದ ಬಿಗಿ ಪೊಲೀಸ್ ಬಂದೋಬಸ್ತ್​ನಲ್ಲಿ ಕರೆತರಲಾಗಿದೆ.

ಕಾಪು: ಗೃಹಲಕ್ಷ್ಮಿ ಕೆವೈಸಿ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಜನರ ಆಹ್ವಾನ : ಬಿಜೆಪಿ ಆರೋಪ – vishwanews24

ತಾನು ಹುಟ್ಟಿದ ಮನೆಗೆ ಬಂದ ಕೂಡಲೇ ತಾಯಿಯ ಮೃತದೇಹದ ಮುಂದೆ ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರವಿ ಪೂಜಾರಿ, ಬಿಕ್ಕಿ ಬಿಕ್ಕಿ ಅತ್ತು ಕುಸಿದು ಕೂತರು. ಬಳಿಕ ಅಂತ್ಯಕ್ರಿಯೆಯ ವಿಧಿವಿಧಾನ ನಡೆಸಲು ತಯಾರಿ ನಡೆಸಿದರು.

ಬೆಂಗಳೂರು ಕಾರಾಗೃಹ ಇಲಾಖೆಯ ಪೊಲೀಸರ ಸರ್ಪಗಾವಲಿನಲ್ಲಿ ಇಂದು ಉಡುಪಿಗೆ ತಲುಪಿದ್ದು, ಉಡುಪಿಯಲ್ಲಿಯೂ ಸ್ಥಳೀಯ ಪೊಲೀಸರು ಹೆಚ್ಚುವರಿ ಭದ್ರತೆಗೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ಮಂಗಳೂರು: ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶೀಯರ ಪತ್ತೆ – vishwanews24

Leave a Reply