ಉಡುಪಿ : ತ್ವರಿತ ಚಿಕಿತ್ಸೆಯಿಂದ ಶ್ರವಣ ಸಮಸ್ಯೆ ಪರಿಹಾರ: ಡಾ. ಮುರಳೀಧರ ಪಾಟೀಲ್ -Vishwanews24
ಉಡುಪಿ : ತ್ವರಿತ ಚಿಕಿತ್ಸೆಯಿಂದ ಶ್ರವಣ ಸಮಸ್ಯೆ ಪರಿಹಾರ: ಡಾ. ಮುರಳೀಧರ ಪಾಟೀಲ್ -Vishwanews24
ಉಡುಪಿ : ಶ್ರವಣ ಸಮಸ್ಯೆಯ ಬಗ್ಗೆ ಪ್ರಾಥಮಿಕ ಹಂತದಲ್ಲಿಯೇ ತಿಳಿದು, ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವುದರಿಂದ ಶ್ರವಣ ದೋಷದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾಸ್ಪತ್ರೆಯ ಕಿವಿ ಮೂಗು ಗಂಟಲು ತಜ್ಞ ಡಾ. ಮುರಳೀಧರ ಪಾಟೀಲ್ ಹೇಳಿದರು.
ಅವರು ಬುಧವಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ರಾಷ್ಟಿçÃಯ ಆರೋಗ್ಯ ಅಭಿಯಾನ ಸಹಯೋಗದಲ್ಲಿ, ರಾಷ್ಟಿçÃಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಲ್ಲಿ, ವಿಶ್ವ ಶ್ರವಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರವಣ ಸಮಸ್ಯೆಯನ್ನು ಬೇಗ ಗುರುತಿಸಿಕೊಂಡು ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ನಿರ್ಲಕ್ಷ ವಹಿಸಿದ್ದಲ್ಲಿ ಶಾಶ್ವತ ಕಿವುಡುತನ ಬರಲಿದೆ. ಕಿವುಡುತನದಿಂದ ವ್ಯಕ್ತಿಗೆ ಸಂವಹನ ಸಮಸ್ಯೆ ಉಂಟಾಗಿ ಆತ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವುದರ ಜೊತೆಗೆ ತನ್ನ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಮಕ್ಕಳಲ್ಲಿ ಹುಟ್ಟಿದ ಕೂಡಲೇ ಕಿವುಡುತನ ಕುರಿತು ವೈದ್ಯರು ಪರೀಕ್ಷಿಸಬೇಕು. ಮಕ್ಕಳಲ್ಲಿ ಕಿವುಡುತನ ಬಂದರೆ ಮಕ್ಕಳಿಗೆ ಮಾತನಾಡಲು ಸಹ ಕಷ್ಟವಾಗಲಿದೆ ಆದ್ದರಿಂದ ಪೋಷಕರು ಎಚ್ಚರಿಕೆ ವಹಿಸಬೇಕು ಎಂದರು.
ರಸ್ತೆಯಲ್ಲಿನ ಶಬ್ದ ಮಾಲಿನ್ಯ, ಕಾರ್ಖಾನೆಗಳಲ್ಲಿನ ಶಬ್ದ, ಹೆಚ್ಚು ಶಬ್ದ ಮಾಡುವ ಪಟಾಕಿಗಳ ಸಿಡಿತ, ಜೋರಾಗಿ ಸಂಗೀತ ಕೇಳುವುದು, ಸಮಾರಂಭಗಳಲ್ಲಿ ಡಿಜೆಗಳ ಬಳಕೆ, ಮುಂತಾದವುಗಳಿ0ದ ನಿಧಾನವಾಗಿ ಶ್ರವಣ ಸಮಸ್ಯೆ ಕಂಡುಬರಲಿದೆ. ತಕ್ಷಣ ಕಂಡುಬರುವ ಶ್ರವಣ ಸಮಸ್ಯೆಗಳಿಗೆ ತ್ವರಿತವಾಗಿ ಚಿಕಿತ್ಸೆ ಪಡೆದರೆ ಶೇ.90 ರಷ್ಟು ಗುಣಪಡಿಸಲು ಸಾಧ್ಯ. ಮೊಬೈಲ್ನಲ್ಲಿ ಹಿಯರ್ ಫೋನ್ ಮೂಲಕ ಹೆಚ್ಚು ಹೊತ್ತು ಮಾತನಾಡುವುದು, ಸಂಗೀತ ಕೇಳುವುದು ಸಹ ಅಪಾಯ. ಮೊಬೈಲ್ನಲ್ಲಿನ ಸಾಮಾನ್ಯ ಸ್ಪೀಕರ್ನಿಂದ ಕೇಳಿಸಿಕೊಳ್ಳಿ. ಇತ್ತೀಚೆಗೆ ಆನ್ಲೈನ್ ತರಗತಿ ಸಮಯದಲ್ಲಿ ಮಕ್ಕಳು ಹಿಯರ್ ಫೋನ್ ಹಾಕಿಕೊಳ್ಳುತ್ತಿದ್ದು, ಆನ್ಲೈನ್ ತರಗತಿಗಳನ್ನು ಕೇಳಿ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಸಂಶೋಧನೆ ನಡೆಯುತ್ತಿದೆ. ಟ್ರಾಫಿಕ್ನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ಮತ್ತು ಕಾರ್ಖಾನೆಗಳಲ್ಲಿನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣ ಸಮಸ್ಯೆಗೆ ಒಳಗಾಗಲಿದ್ದು, ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳುವುದು, ಮಪ್ಲರ್ ಬಳಕೆ ಸೇರಿದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಡಾ.ಮುರಳೀಧರ್ ಪಾಟೀಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಅಧಿಕಾರಿ ಡಾ. ಶ್ರೀರಾಮರಾವ್, ಭಾರತದಲ್ಲಿನ 100 ರಲ್ಲಿ 6 ಜನರಿಗೆ ಶ್ರವಣ ಸಮಸ್ಯೆ ಇದೆ. ನವಜಾತ 100 ಶಿಶುಗಳಲ್ಲಿ 2 ಶಿಶುಗಳಿಗೆ ಕಿವುಡು ಸಮಸ್ಯೆ ಇದೆ. ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ನೀಡುವ ಎಲ್ಲಾ ರೀತಿಯ ಲಸಿಕೆಗಳನ್ನು ಪಡೆಯಬೇಕು. ಶ್ರವಣ ಸಮಸ್ಯೆಯಿಂದ ಸ್ಪಷ್ಟವಾಗಿ ಮಾತನಾಡಲು ಆಗದೇ ಪದೇ ಪದೆ ಉಚ್ಛಾರ ಮಾಡಬೇಕಾಗುತ್ತದೆ. ಶ್ರವಣ ಸಮಸ್ಯೆ ಕುರಿತಂತೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಶ್ರವಣ ಸಮಸ್ಯೆ ಇರುವವರಿಗೆ ರೆಡ್ಕ್ರಾಸ್ ಸಹಯೋಗದಲ್ಲಿ ಉಚಿತ ಶ್ರವಣ ಸಾಧನ ವಿತರಿಸಲು ಕ್ರಮ ಕೈಗೊಂಡಿದ್ದು, ಅಗತ್ಯವಿರುವವರು ಹೆಸರು ನೊಂದಾಯಿಸುವ0ತೆ ತಿಳಿಸಿದರು.
ಡಿಹೆಚ್ಓ ಡಾ.ಸುದೀರ್ ಚಂದ್ರ ಸೂಡಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶ್ರವಣ ದೋಷ ಕುರಿತು ಅರಿವು ಮೂಡಿಸುವ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.ಶ್ರವಣ ದಿನದ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ಉಚಿತ ಶ್ರವಣ ಪರೀಕ್ಷಾ ಶಿಬಿರ ನಡೆಸಲಾಯಿತು.ಆಡಿಯೋಮೆಟ್ರಿಕ್ ಸಹಾಯಕಿ ಸಮೀಕ್ಷಾ ಡಿ ರಾವ್ ಸ್ವಾಗತಿಸಿದರು, ಆಡಿಯಾಲಜಿಸ್ಟ್ ಪ್ರತೀಕ್ಷಾ ಬಿ ವಂದಿಸಿದರು.
