ಉಡುಪಿ : ದೇಶದಲ್ಲಿ ಅಗತ್ಯವಸ್ತುಗಳ ಇಷ್ಟೊಂದು ಬೆಲೆ ಏರಿಕೆ ನಡುವೆಯೂ ಬಿಜೆಪಿ ಗೆದ್ದಿದೆ ; ಇದು ಅಧಿಕಾರ ದುರುಪಯೋಗ ಮಾಡಿಕೊಂಡು ಪಾಲಿಕೆ ಚುನಾವಣೆಯಲ್ಲಿ ಗೆಲುವು : ಡಾ|ಜಿ ಪರಮೇಶ್ವರ್ -Vishwanews24
ಉಡುಪಿ : ದೇಶದಲ್ಲಿ ಅಗತ್ಯವಸ್ತುಗಳ ಇಷ್ಟೊಂದು ಬೆಲೆ ಏರಿಕೆ ನಡುವೆಯೂ ಬಿಜೆಪಿ ಗೆದ್ದಿದೆ ..
ಇದು ಅಧಿಕಾರ ದುರುಪಯೋಗ ಮಾಡಿಕೊಂಡು ಪಾಲಿಕೆ ಚುನಾವಣೆಯಲ್ಲಿ ಗೆಲುವು : ಡಾ|ಜಿ ಪರಮೇಶ್ವರ್ -Vishwanews24
ಉಡುಪಿ: ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ್ ಡಾ. ಜಿ ಪರಮೇಶ್ವರ್ ಆರೋಪಿಸಿದರು.
ಅವರು ಮಂಗಳವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ದೇಶದಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ ಇಷ್ಟೊಂದು ಬೆಲೆ ಏರಿಕೆ ನಡುವೆಯೂ ಬಿಜೆಪಿ ಗೆದ್ದಿದೆ. ಇದು ಅಧಿಕಾರದ ದುರುಪಯೋಗದ ಗೆಲುವು ಈ ಫಲಿತಾಂಶದಿಂದ ಕಾಂಗ್ರೆಸ್ಸಿಗೆ ನಿರಾಸೆಯಾಗಿಲ್ಲ. ಮುಂದೆ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಡಿಕೆಶಿ- ಸಿದ್ದರಾಮಯ್ಯ ಚುನಾವಣೆಯ ಪ್ರಚಾರದಲ್ಲಿ ಹೆಚ್ಚು ಭಾಗವಹಿಸಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಇದು ಚರ್ಚಿಸಬೇಕಾದ ದೊಡ್ಡ ವಿಚಾರ ಅಲ್ಲ. ಇಂತಹ ಚುನಾವಣೆಗಳು ಸ್ಥಳೀಯ ನಾಯಕರ ನೇತೃತ್ವದಲ್ಲಿ ನಡೆಯುತ್ತದೆ. ನನ್ನ ಅವಶ್ಯಕತೆ ಇದ್ದಲ್ಲಿ ನಾನು ಕೆಲಸ ಮಾಡುತ್ತೇನೆ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ.
ಕಾಂಗ್ರೆಸ್ ನಲ್ಲಿ ಯಾವ ಗುಂಪುಗಾರಿಕೆಯೂ ಇಲ್ಲ ಇಂತಹ ಸುದ್ದಿಯನ್ನ ಯಾರೋ ಸೃಷ್ಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಿಗೂ ಪಕ್ಷದ ಜವಾಬ್ದಾರಿಯಿದ್ದು, ಗುಂಪುಗಾರಿಕೆ ಮಾಡುವ ಅವಕಾಶ ಕಾಂಗ್ರೆಸ್ ನಲ್ಲಿ ಇಲ್ಲ ಎಂದರು.
ಜಾತಿಗಣತಿಗೆ ಸುಮಾರು 150 ಕೋಟಿ ರೂಪಾಯಿ ಖರ್ಚಾಗಿದ್ದು, ಸರ್ಕಾರದ ಹಣ ಖರ್ಚು ಮಾಡಿ ವರದಿ ಸಿದ್ದಪಡಿಸಿದ್ದಾರೆ ಆ ವರದಿ ಹೊರಗಡೆ ತರಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ. ನಮ್ಮ ಸರ್ಕಾರ ಇದ್ದಾಗ ವರದಿ ಸಂಪೂರ್ಣ ಆಗಿರಲಿಲ್ಲ ಆದರೆ ಕಾಂತರಾಜ್ ಅವರು ಈಗ ವರದಿಯನ್ನು ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಕೈಯಲ್ಲಿರುವ ವರದಿಯನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಲಿ, ವರದಿಯಲ್ಲಿ ನ್ಯೂನ್ಯತೆ ಇದ್ದರೆ ಸರಿಪಡಿಸುವ ತೀರ್ಮಾನ ಕೈಗೊಳ್ಳಲಿ. ವರದಿ ಬಹಿರಂಗ ಮಾಡುವುದರಿಂದ ಸರಕಾರಕ್ಕೆ ಮುಜುಗರ ಏನಿದೆ? ಯಾವುದೇ ಸಮುದಾಯ ಹೆಚ್ಚಿರುವುದು ಕಡಿಮೆ ಇರುವುದು ಸ್ವಾಭಾವಿಕ ರೀಸರ್ವೆ ಮಾಡುವ, ಈ ವರದಿಯನ್ನು ಒಪ್ಪಿಕೊಳ್ಳುವ ಅಧಿಕಾರದ ಸರಕಾರಕ್ಕಿದೆ ಎಂದರು.
ಇಂದು ಸಂಜೆ ಏಳು ಗಂಟೆಗೆ ನಮ್ಮ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಅಧಿವೇಶನ ಹಿನ್ನೆಲೆಯಲ್ಲಿ ಚರ್ಚೆ ಮಾಡಲಿದ್ದು, ಸರ್ಕಾರವನ್ನು ಯಾವ ರೀತಿ ಪ್ರಶ್ನೆ ಮಾಡಬೇಕು ಸರ್ಕಾರದ ವೈಫಲ್ಯಗಳನ್ನು ರಾಜ್ಯಕ್ಕೆ ಮುಟ್ಟಿಸುವ ಕಾರ್ಯತಂತ್ರ ಮಾಡುತ್ತೇವೆ. ಕೋವಿಡ್ ಚಿಕಿತ್ಸೆ ವಿಚಾರದ ಭ್ರಷ್ಟಾಚಾರವಾಗಿದ್ದು ರಾಜ್ಯ ಸರಕಾರದ ವೈಫಲ್ಯದ ಬಗ್ಗೆ ಇಂದಿನ ಮಾತುಕತೆ ಆಗಲಿದೆ. ರಾಜ್ಯದಲ್ಲಿ ಯೋಜನೆಗಳು ಸಂಪೂರ್ಣ ಸ್ಥಗಿತ ಆಗಿದ್ದು ಯಾವುದೇ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬರುತ್ತಿಲ್ಲ ಎಂದರು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಈ ವೇಳೆ ಉಪಸ್ಥಿತರಿದ್ದರು.
