ಉಡುಪಿ : ನಗರದಲ್ಲಿ ಸಾವರ್ಕರ್ ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸುವುದು ಉತ್ತಮ : ಶಾಸಕ ರಘುಪತಿ ಭಟ್ – Vishwanews24
ಉಡುಪಿ : ನಗರದಲ್ಲಿ ಸಾವರ್ಕರ್ ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸುವುದು
ಉತ್ತಮ : ಶಾಸಕ ರಘುಪತಿ ಭಟ್
ಉಡುಪಿ: ನಗರದಲ್ಲಿ ಸಾವರ್ಕರ್ ಪ್ರತಿಮೆ ಮಾಡುವುದು ಅಷ್ಟೊಂದು ಸಮಂಜಸ ಅಲ್ಲ ಮುಂದಿನ ದಿನಗಳಲ್ಲಿ ಸಾವರ್ಕರ್ ಪ್ರತಿಮೆಗೆ ಅವಮಾನ ವಾದರೆ ಕಷ್ಟ ಬದಲಾಗಿ ಸಾವರ್ಕರ್ ಸರ್ಕಲ್ ನಿರ್ಮಿಸುವುದು ಉತ್ತಮ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.
ಉಡುಪಿ : ಆಗಸ್ಟ್ 24 – ಶುಶ್ರೂಷಕರ ಹುದ್ದೆಗೆ ನೇರ ಸಂದರ್ಶನ – Vishwanews24
ಅವರು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸಲು ನಗರ ಸಭೆಗೆ ಪತ್ರ ಬರೆದಿದ್ದೇನೆ. ಜನನಿಬಿಡ ಪ್ರದೇಶವಾದ ಹಳೆ ತಾಲೂಕ ಆಫೀಸ್ ಬಳಿಯ ಸರ್ಕಲ್ ಗೆ ಸಾವರ್ಕರ್ ಹೆಸರು ಇಡುವ ಬಗ್ಗೆ ಈ ಬಗ್ಗೆ ನಗರ ಸಭೆಯ ಅಧಿವೇಶನದಲ್ಲಿ ಠರಾವು ಇಡುತ್ತೇನೆ. ಈ ಬಗ್ಗೆ ಈಗಾಗಲೇ ನಗರಸಭೆಗೆ ಪತ್ರ ಬರೆದಿದ್ದು, ಮೂರ್ತಿ ನಿರ್ಮಿಸುವ ಬಗ್ಗೆ ಚರ್ಚೆ ಮಾಡಬೇಕು. ಖಂಡಿತವಾಗಿ ಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣವಾಗುತ್ತೆ. ಉಡುಪಿಯಲ್ಲಿ ವೀರ ಸಾವರ್ಕರ್ ಜೊತೆಗೆ ಅಂಬೇಡ್ಕರ್ ಸರ್ಕಲ್ ಕೂಡ ಮಾಡುತ್ತೇವೆ ಎಂದರು.
ಉಡುಪಿ : ಸಬ್‌ಇನ್ಸ್ಪೆಕ್ಟರ್ ಹುದ್ದೆ : ಅರ್ಜಿ ಆಹ್ವಾನ – Vishwanews24
ಇತ್ತೀಚೆಗೆ ಹಿಂದೂ ಮುಖಂಡ ಯಶ ಪಾಲ ಸುವರ್ಣ ಪುತ್ತಳಿ ಸ್ಥಾಪಿಸುವುದಾಗಿ ಹೇಳಿದ್ದರು ಇದಕ್ಕಾಗಿ ಪುತ್ತಳಿ ಸ್ಥಾಪಿಸುವಂತೆ ಉಡುಪಿ ನಗರಸಭೆಗೆ ಮನವಿ ಮಾಡಿದ್ದರು. ಹಿಂದೂ ಮಹಾಸಭಾ , ಹಿಂದೂ ಜಾಗರಣ ವೇದಿಕೆ ಕೂಡ ನಗರಸಭೆಗೆ ಮನವಿ ಮಾಡಿತ್ತು.
