Featured

ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ ಆಗ್ರಹ – vishwanews24

ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ CWC ಗೆ ಎಪಿಸಿಆರ್ ನಿಂದ ದೂರು

ಉಡುಪಿ: ಉಡುಪಿ ಜಿಲ್ಲೆಯ ಹೂಡೆ ಗ್ರಾಮದಲ್ಲಿ ನವಜಾತ ಶಿಶುವನ್ನು ಬೀದಿಗೆ ಎಸೆದು, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿರುವ ದಾರುಣ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ‘ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್’ (ಎಪಿಸಿಆರ್) ಉಡುಪಿ ಜಿಲ್ಲಾ ಘಟಕವು ಮಕ್ಕಳ ಕಲ್ಯಾಣ ಸಮಿತಿಗೆ (CWC) ಲಿಖಿತ ದೂರು ಸಲ್ಲಿಸಿದೆ.

​ಘಟನೆಯ ಹಿನ್ನೆಲೆ:
​ಕಳೆದ ಸೆಪ್ಟೆಂಬರ್ 7ರಂದು ಉಡುಪಿ ಜಿಲ್ಲೆಯ ಹೂಡೆ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ನವಜಾತ ಶಿಶುವನ್ನು ಬೀದಿ ಬದಿಯಲ್ಲಿ ಎಸೆದು ಪರಾರಿಯಾಗಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

​ಪೊಲೀಸ್ ದೂರು ಹಾಗೂ ತನಿಖೆ:
​ಈ ಅಮಾನವೀಯ ಕೃತ್ಯದ ಕುರಿತು ಸ್ಥಳೀಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕ್ರೈಮ್ ಸಂಖ್ಯೆ 98/2026, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 93 ಮತ್ತು 105ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದರೂ, ಇದುವರೆಗೆ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

​”ಪ್ರತಿಯೊಂದು ಮಗುವಿನ ಬದುಕುವ ಹಕ್ಕು ಅತ್ಯಮೌಲ್ಯವಾಗಿದೆ. ನವಜಾತ ಶಿಶುವಿನ ಜೀವವನ್ನು ಬಲಿಪಡೆದ ಇಂತಹ ಅಮಾನವೀಯ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ನವಜಾತ ಶಿಶುವಿನ ಜೀವಿಸುವ ಹಕ್ಕನ್ನು ಕಸಿದುಕೊಂಡ ಪ್ರತಿಯೊಬ್ಬ ತಪ್ಪಿತಸ್ಥನನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು”.

​ಮಕ್ಕಳ ಕಲ್ಯಾಣ ಸಮಿತಿಯು ಈ ಪ್ರಕರಣದಲ್ಲಿ ತಕ್ಷಣವೇ ಮುತುವರ್ಜಿ ವಹಿಸಿ, ತನಿಖೆಯನ್ನು ಚುರುಕುಗೊಳಿಸುವಂತೆ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು ದೂರಿನಲ್ಲಿ ವಿನಂತಿಸಲಾಗಿದೆ.

Vishwa News 24

Recent Posts

ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ – vishwanews24

ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.…

9 minutes ago

ರೈತರ ವಿಮೆ ಹಣ ಬ್ಯಾಂಕಿಗೆ ಪಾವತಿ ಮಾಡದ ಸೊಸೈಟಿ ಕಾರ್ಯದರ್ಶಿ ವಜಾ: ಸಿಎಂ ಡಿ.ಕೆ.ಶಿ ಸೂಚನೆ – vishwanews24

ರೈತರ ವಿಮೆ ಹಣ ಬ್ಯಾಂಕಿಗೆ ಪಾವತಿ ಮಾಡದ ಸೊಸೈಟಿ ಕಾರ್ಯದರ್ಶಿ ವಜಾಗೊಳಿಸಲು ಸಿಎಂ ಸೂಚನೆ ಬೆಂಗಳೂರು: ಕಲಬುರಗಿ ಜೇವರ್ಗಿ ತಾಲ್ಲೂಕಿನ…

26 minutes ago

ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಎಕ್ಸ್​ಪೈರಿ ಔಷಧಗಳು ವಶಕ್ಕೆ: ಸಚಿವ ಯುಟಿ ಖಾದರ್ – vishwanews24

ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಎಕ್ಸ್​ಪೈರಿ ಔಷಧಗಳು ವಶಕ್ಕೆ.. ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ…

1 hour ago

108 ಆ್ಯಂಬುಲೆನ್ಸ್​ ವಾಹನ ಸಿಬ್ಬಂದಿಯಿಂದ ರಾಜೀನಾಮೆ ಎಚ್ಚರಿಕೆ: ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ಹೊಣೆ : ಅಶೋಕ್​​ – vishwanews24

108 ಆ್ಯಂಬುಲೆನ್ಸ್​ ವಾಹನ ಸಿಬ್ಬಂದಿಯಿಂದ ರಾಜೀನಾಮೆ ಎಚ್ಚರಿಕೆ: ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ಹೊಣೆ : ಅಶೋಕ್​​ ಬೆಂಗಳೂರು: ವಿವಿಧ ಬೇಡಿಕೆಗಳಿಗೆ…

1 hour ago

ವಿಟ್ಲ : ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮೂವರ ಬಂಧನ- vishwanews24

ವಿಟ್ಲ : ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮೂವರ ಬಂಧನ ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…

3 hours ago

ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಿಢೀರ್ ದಾಳಿ: 9 ಕೈದಿಗಳಿಂದ 10 ಮೊಬೈಲ್ ವಶ  – vishwanews24

ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಿಢೀರ್ ದಾಳಿ: 9 ಕೈದಿಗಳಿಂದ 10 ಮೊಬೈಲ್ ವಶ  ಮಂಗಳೂರು: ಮಂಗಳೂರಿನ ಜಿಲ್ಲಾ…

3 hours ago