ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ವಾರ ಆಹಾರ ಇಲಾಖೆ ನಡೆಸಿದ ದಾಳಿಗಳಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆರೋಗ್ಯ ಇಲಾಖೆ ಸಚಿವ ಯುಟಿ ಖಾದರ್ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಕಾಮರ್ಸ್ ಮೂಲಕ ಔಷಧ ಮಾರಾಟದ ಮೇಲೆ ನಡೆದ ದಾಳಿಯ ವೇಳೆ, ಡಾರ್ಕ್ ಸ್ಟೋರ್‌ಗಳಲ್ಲಿ 45 ಲಕ್ಷ ರೂ. ಮೌಲ್ಯದ ಎಕ್ಸ್ಪೈರಿ ಔಷಧ ಸಂಗ್ರಹ ಪತ್ತೆಯಾಗಿದ್ದು, ಹೊಸಕೋಟೆಯಲ್ಲಿ ಈ ಔಷಧಗಳಿಗೆ ಮರು ಲೇಬಲಿಂಗ್ ಮಾಡಲಾಗುತ್ತಿತ್ತು. ಅಧಿಕಾರಿಗಳು ಈ ಔಷಧಗಳನ್ನು ಸೀಜ್ ಮಾಡಿದ್ದಾರೆ ಎಂದರು.
ಸಚಿವರುಪೆಪ್ ಟೈಡ್ ಪಾರ್ಟಿ ಬಗ್ಗೆಯೂ ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಬಂದ ನಂತರ, ಇಲಾಖೆಯು ತನಿಖೆ ನಡೆಸಿತು. ಸಂಘಟಕರು ತಾವು ಎಲೈಟ್ ವರ್ಗಕ್ಕೆ ಹೊಸ ಪೌಷ್ಟಿಕಾಂಶ ಮತ್ತು ಫಾರ್ಮಾಸ್ಯುಟಿಕಲ್ ಐಟಂಗಳನ್ನು ಪರಿಚಯಿಸುತ್ತಿರುವುದಾಗಿ ತಿಳಿಸಿದರು. ಈ ಐಟಂಗಳು ಅಮೆಜಾನ್‌ನ ಡಾರ್ಕ್ ಸ್ಟೋರ್‌ಗಳಿಂದ ಬಂದಿವೆ ಎಂದು ಅವರು ಒಪ್ಪಿಕೊಂಡರು. ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಬದ್ಧವಾಗಿದೆ ಎಂದು ಖಾದರ್ ಹೇಳಿದರು.
ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.…
ರೈತರ ವಿಮೆ ಹಣ ಬ್ಯಾಂಕಿಗೆ ಪಾವತಿ ಮಾಡದ ಸೊಸೈಟಿ ಕಾರ್ಯದರ್ಶಿ ವಜಾಗೊಳಿಸಲು ಸಿಎಂ ಸೂಚನೆ ಬೆಂಗಳೂರು: ಕಲಬುರಗಿ ಜೇವರ್ಗಿ ತಾಲ್ಲೂಕಿನ…
ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ CWC ಗೆ ಎಪಿಸಿಆರ್ ನಿಂದ ದೂರು ಉಡುಪಿ: ಉಡುಪಿ…
108 ಆ್ಯಂಬುಲೆನ್ಸ್ ವಾಹನ ಸಿಬ್ಬಂದಿಯಿಂದ ರಾಜೀನಾಮೆ ಎಚ್ಚರಿಕೆ: ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ಹೊಣೆ : ಅಶೋಕ್ ಬೆಂಗಳೂರು: ವಿವಿಧ ಬೇಡಿಕೆಗಳಿಗೆ…
ವಿಟ್ಲ : ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮೂವರ ಬಂಧನ ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…
ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಿಢೀರ್ ದಾಳಿ: 9 ಕೈದಿಗಳಿಂದ 10 ಮೊಬೈಲ್ ವಶ ಮಂಗಳೂರು: ಮಂಗಳೂರಿನ ಜಿಲ್ಲಾ…