ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 108 ಆ್ಯಂಬುಲೆನ್ಸ್ ವಾಹನ ಸಿಬ್ಬಂದಿಯಿಂದ ಸೇವೆ ಬಂದ್ ಎಚ್ಚರಿಕೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 108 ‘ಆರೋಗ್ಯ ಕವಚ’ವೇ ಸಂಕಷ್ಟದಲ್ಲಿದೆ. 3,500ಕ್ಕೂ ಹೆಚ್ಚು 108 ಸಿಬ್ಬಂದಿ ಸೆಪ್ಟೆಂಬರ್ 20ರಿಂದ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಸಿಬ್ಬಂದಿ ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರದ ಮೌನವಾಗಿದೆ ಎಂದವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ:
ಸಿಬ್ಬಂದಿಯ ಸಮಸ್ಯೆಗಳನ್ನು ಬಗೆಹರಿಸುವ ಬದಲು, ಮುಷ್ಕರ ಮಾಡಿದರೆ ಕಠಿಣ ಕ್ರಮ, ಟೆಂಡರ್ ರದ್ದು ಎಂದು ಬೆದರಿಸುವುದು ನಿಮ್ಮ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಗೆ ಸಾಕ್ಷಿ.ಶೇ.45ರ ಹೆಚ್ಚುವರಿ ವೇತನ ಕಡಿತ, 12 ಗಂಟೆಗಳ ಕೆಲಸದ ಆರೋಪ, ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿಯ ಕುಟುಂಬಗಳಿಗೆ 50 ಲಕ್ಷ ಪರಿಹಾರದ ಬೇಡಿಕೆ ಸಂಬಂಧ ಸರ್ಕಾರದ ಉತ್ತರವೇನು? ಪುಟಗಟ್ಟಲೆ ಜಾಹೀರಾತು ಕೊಡೋದಕ್ಕೆ ಹಣವಿದೆ, ಸಾಧನಾ ಸಮಾವೇಶಗಳಿಗೆ ಹಣವಿದೆ. ಆದರೆ ಜನರ ಜೀವ ಉಳಿಸುವ 108 ಸಿಬ್ಬಂದಿಗೆ ನ್ಯಾಯ ಕೊಡಲು ಹಣವಿಲ್ಲವೇ? ಸೆಪ್ಟೆಂಬರ್ 20ರ ನಂತರ 108 ಸೇವೆಗೆ ಯಾವುದೇ ವ್ಯತ್ಯಯ ಉಂಟಾದರೆ, ಅದಕ್ಕೆ ನೇರ ಹೊಣೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರೇ ಆಗುತ್ತಾರೆ. ಹೀಗಾಗಿ ಬೆದರಿಕೆ ಬೇಡ, ಮಾತುಕತೆ ನಡೆಸಿ. 108 ಸಿಬ್ಬಂದಿಯ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣ ಈಡೇರಿಸಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ಮತ್ತೊಂದೆಡೆ ಆ್ಯಂಬುಲೆನ್ಸ್ ಚಾಲಕರಿಂದ ಮುಷ್ಕರಕ್ಕೆ ಕರೆ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ಆ್ಯಂಬುಲೆನ್ಸ್ ಸಿಬ್ಬಂದಿಗೂ ಆರೋಗ್ಯ ಇಲಾಖೆಗೂ ನೇರ ಸಂಪರ್ಕವಿಲ್ಲ ಎಂದು ಪುನರುಚ್ಛರಿಸಿದ್ದಾರೆ. ಟೆಂಡರ್ ಪಡೆದ ಕಂಪನಿ ಚಾಲಕರನ್ನು ನಿಯೋಜನೆ ಮಾಡಿದ್ದು, ಅವರ ಸಂಪೂರ್ಣ ಜವಾಬ್ದಾರಿ ಕಂಪನಿಗೆ ಸೇರುತ್ತೆ. ಆ್ಯಂಬುಲೆನ್ಸ್ ಸಿಬ್ಬಂದಿ ಪ್ರತಿಭಟಿಸಿ ಜನರಿಗೆ ಸಮಸ್ಯೆ ಆಯ್ತು ಅಂದ್ರೆ ಮುಲಾಜಿಲ್ಲದೇ ಅವರು ಮತ್ತು ಕಂಪನಿ ಮೇಲೆ ಕ್ರಮ ಆಗುತ್ತದೆ. 108 ಆ್ಯಂಬುಲೆನ್ಸ್ ತುರ್ತು ಸೇವೆ ಬಹಳ ಮುಖ್ಯ. ಅಧಿವೇಶನದಲ್ಲಿ 100 ಆ್ಯಂಬುಲೆನ್ಸ್‌ಗೆ ಅನುಮತಿ ಸಿಕ್ಕಿದೆ. ಗುತ್ತಿಗೆ ಆಧಾರದಲ್ಲಿ 250 ಆ್ಯಂಬುಲೆನ್ಸ್ಗಳ ಪಡೆಯುತ್ತೇವೆ. ನಗರ ಭಾಗದಲ್ಲಿ 15 ನಿಮಿಷಕ್ಕೆ ಮತ್ತು ಗ್ರಾಮೀಣದಲ್ಲಿ 20 ನಿಮಿಷಕ್ಕೆ ಆ್ಯಂಬುಲೆನ್ಸ್ ತಲುಪಬೇಕು ಎಂದವರು ತಿಳಿಸಿದ್ದಾರೆ.
ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಎಕ್ಸ್ಪೈರಿ ಔಷಧಗಳು ವಶಕ್ಕೆ.. ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ…
ವಿಟ್ಲ : ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮೂವರ ಬಂಧನ ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…
ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಿಢೀರ್ ದಾಳಿ: 9 ಕೈದಿಗಳಿಂದ 10 ಮೊಬೈಲ್ ವಶ ಮಂಗಳೂರು: ಮಂಗಳೂರಿನ ಜಿಲ್ಲಾ…
ಉಡುಪಿ: ಬಾರ್ಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ಉಡುಪಿ: ತುಳುನಾಡಿನ ಚಾರಿತ್ರಿಕ ರಾಜಧಾನಿ ಬಾರ್ಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ…
ಮಲ್ಪೆ: ರಸ್ತೆ ಬದಿ ಪತ್ತೆಯಾಗಿದ್ದ ನವಜಾತ ಶಿಶು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು ಮಲ್ಪೆ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ…
ಉಡುಪಿ: ಆಸ್ಟ್ರೋ ಮೋಹನ್‌ಗೆ ಅಮೆರಿಕದ ಪ್ರತಿಷ್ಠಿತ ‘ಇಪಿಎಸ್‌ಎ’ ಗೌರವ ಮೂರು ದಶಕಗಳ ಛಾಯಾಪತ್ರಿಕೋದ್ಯಮ, ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳಲ್ಲಿನ ನಿರಂತರ ಸಾಧನೆಗೆ…