ಉಡುಪಿ : ನೀವು ಅಧಿಕಾರದಲ್ಲಿದ್ದಾಗ ನಿಮ್ಮ ಕರ್ತವ್ಯ ಪ್ರಜ್ಞೆ ಎಲ್ಲಿತ್ತು ? ನಿಮ್ಮಿಂದ ಪಾಠ ಕಲಿಯಬೇಕಾದ್ದು ಏನೂ ಇಲ್ಲ : ಕಾಂಗ್ರೆಸ್ ಗೆ ಸಿಎಂ – Vishwanews24
ನಾನು ಮಾತನಾಡುವುದಿಲ್ಲ,ನನ್ನ ಕೆಲಸವೇ ಎಲ್ಲವನ್ನೂ ಹೇಳುತ್ತೆ..
ನಮಗೆ ವಿಪಕ್ಷಗಳಿಂದ ಕಲಿಯಬೇಕಾದದ್ದು ಏನೂ ಇಲ್ಲ..
ಯಾವ ಸಂದರ್ಭದಲ್ಲಿ ಏನು ನಿರ್ಧಾರ, ಏನು ಕ್ರಮ ಕೈಗೊಳ್ಳಬೇಕು ನಮಗೆ ಗೊತ್ತಿದೆ..
ನಮ್ಮ ರಾಜ್ಯದ ಶಾಂತಿ-ಸುವ್ಯವಸ್ಥೆ ನಮ್ಮ ರಾಜ್ಯದ ಪ್ರಗತಿ ನಮಗೆ ಗೊತ್ತಿದೆ..
ಉಡುಪಿ: ರಾಜ್ಯದ ಪುಸಕ್ತ ಬೆಳವಣಿಗೆಗಳ ವಿಚಾರವಾಗಿ ಸಿಎಂ ಮೌನಿ, ನಾಲಗೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆಗೆ ಸಿಎಂ ತೀಕ್ಷವಾಗಿ ತಿರುಗೇಟು ನೀಡಿದ್ದಾರೆ.
ಉಡುಪಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ,ನಾವು ಮಾತನಾಡುವುದಿಲ್ಲ ನಮ್ಮ ಆಕ್ಷನ್ ಮಾತನಾಡುತ್ತದೆ.ನಮಗೆ ವಿಪಕ್ಷಗಳಿಂದ ಕಲಿಯಬೇಕಾದದ್ದು ಏನೂ ಇಲ್ಲ.ಯಾವ ಸಂದರ್ಭದಲ್ಲಿ ಏನು ನಿರ್ಧಾರ, ಏನು ಕ್ರಮ ಕೈಗೊಳ್ಳಬೇಕು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಕ್ರೇಜಿಸ್ಟಾರ್ ರವಿಚಂದ್ರನ್ – Vishwanews24
ಕಾಂಗ್ರೆಸ್ ಸರಕಾರ ಇದ್ದಾಗ ಹಲವಾರು ಕೋಲೆಗಳಿಗೆ ಸಂಬಂಧಿಸಿದ ಕೇಜು ವಿದ್ ಡ್ರಾ ಮಾಡಿದರು.ಆರೋಪವಿರುವ ಸಂಸ್ಥೆಗಳನ್ನು ಜನಗಳನ್ನು ನೇರವಾಗಿ ಸರ್ಕಾರದ ಮಟ್ಟದಲ್ಲಿ ಕೈಬಿಟ್ಟಿದ್ದಾರೆ. ಹಲವಾರು ಜನರ ಕೇಸುಗಳನ್ನು ಇವರು ಕೈಬಿಟ್ಟಿದ್ದಾರೆ. ಈಗ ನಮಗೆ ಹೇಳುತ್ತಾರೆ. ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಿರುದ್ದ ಬಸವರಾಜ್ ಬೊಮ್ಮಾಯಿ ವಾಗ್ದಾಳಿ. ನಡೆಸಿದರು.
ನೀವು ಅಧಿಕಾರದಲ್ಲಿದ್ದಾಗ ನಿಮ್ಮ ಕರ್ತವ್ಯಪ್ರಜ್ಞೆ ಎಲ್ಲಿತ್ತು ? – ನಿಮ್ಮಿಂದ ಪಾಠ ಕಲಿಯಬೇಕಾದ್ದು ಏನೂ ಇಲ್ಲ.ನಮ್ಮ ರಾಜ್ಯದ ಶಾಂತಿ-ಸುವ್ಯವಸ್ಥೆ ನಮ್ಮ ರಾಜ್ಯದ ಪ್ರಗತಿ ನಮಗೆ ಗೊತ್ತಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ಯಾರೆ.
