ಉಡುಪಿ : ಪಡುಕೆರೆ ಬೀಚ್ನಲ್ಲಿ ಬಿಕಿನಿ ಫೋಟೋಶೂಟ್ ಗೆ ಪೊಲೀಸರ ಅಡ್ಡಿ ; ಸೋಶಿಯಲ್ ಮೀಡಿಯಾದಲ್ಲಿ ಮಾಡೆಲ್ ಬೇಸರ – vishwanews24
ಉಡುಪಿ : ಬೀಚ್ನಲ್ಲಿ ಬಿಕಿನಿ ಧರಿಸುವುದು ಯಾವುದೇ ಅಪರಾಧವಲ್ಲ..
ನೈತಿಕ ಪೊಲೀಸ್ಗಿರಿ ನಡೆಸಲು ಸ್ಥಳೀಯರು ಯಾರು..?
ಬೀಚ್ ಸಾರ್ವಜನಿಕ ಪ್ರದೇಶ ಅಲ್ಲಿ ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು ?
ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಪೊಲೀಸರಿಗೆ ಮಾಡೆಲ್ ಪ್ರಶ್ನೆ
ಮಹಿಳೆ ವಿರುದ್ಧ ಹಿಂದೂ ಸಂಘಟನೆಗಳು ಗರಂ..
ಉಡುಪಿ: ಉಡುಪಿಯ ಪಡುಕೆರೆ ಬೀಚ್ನಲ್ಲಿ ಯುವತಿಯ ಬಿಕಿನಿ ಫೋಟೋಶೂಟ್ಗೆ ಪೊಲೀಸರು ಅಡ್ಡಗಾಲು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ಮಾಡೆಲ್ವೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಯುವತಿಯ ಇನ್ಸ್ಟಾಗ್ರಾಂ ಪ್ರೊಫೈಲ್ ಮಾಹಿತಿ ಪ್ರಕಾರ ಆಕೆ ಡಿಜಿಟಲ್ ಕ್ರಿಯೇಟರ್ ಆಗಿದ್ದಾರೆ. ಆಕೆ ರೂಪದರ್ಶಿಯೂ ಆಗಿದ್ದಾರೆ ಎನ್ನಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಫೋಟೋಶೂಟ್ ಮಾಡಿದ ಫೋಟೋಗಳ ಸಹಿತ ಪಡುಕೆರೆ ಬೀಚ್ನಲ್ಲಾದ ಕಹಿ ಅನುಭವವನ್ನು ಮಾಡೆಲ್ ಹಂಚಿಕೊಂಡಿದ್ದಾರೆ. ಬೀಚ್ನಲ್ಲಿ ನನ್ನ ಪತಿ ಬಿಕಿನಿ ಫೋಟೊಶೂಟ್ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬಿಕಿನಿ ಹಾಕಿಕೊಂಡು ಫೋಟೊಶೂಟ್ ಮಾಡಿಸಲು ಯಾರು ಪರ್ಮಿಷನ್ ಕೊಟ್ಟಿದ್ದು ಯಾರು? ಬಟ್ಟೆ ಬದಲಿಸಿ ಎಂದು ಸೂಚಿಸಿದ್ದರಂತೆ. ಇಲ್ಲದೇ ಹೋದರೆ ಸ್ಥಳೀಯರು ನಿಮ್ಮ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಹೇಳಿದ್ದರಂತೆ.
ಪುತ್ತೂರು: ಪುತ್ತಿಲ ಆಡಿಯೋ ವೈರಲ್ ಪ್ರಕರಣ – ಮಹಿಳೆಗೆ ಬೆದರಿಕೆ ಕರೆ ; ದೂರು ದಾಖಲು – vishwanews24
ಆಗ ಮಾಡೆಲ್ನ ಪತಿ ಪ್ರತಿಕ್ರಿಯಿಸಿ ಬೀಚ್ನಲ್ಲಿ ಬಿಕಿನಿ ಧರಿಸುವುದು ಯಾವುದೇ ಅಪರಾಧವಲ್ಲ. ಸಾರ್ವಜನಿಕ ಸ್ಥಳದಲ್ಲಿ ಫೋಟ್ಶೂಟ್ ಮಾಡಲು ಯಾವುದೇ ಲೈಸೆನ್ಸ್ ಪಡೆಯುವ ಅಗತ್ಯವಿಲ್ಲ ಎಂದಿದ್ದಾರೆ. ನೈತಿಕ ಪೊಲೀಸ್ಗಿರಿ ನಡೆಸಲು ಸ್ಥಳೀಯರು ಯಾರು ಎಂದು ಮಾಡೆಲ್ ಪ್ರಶ್ನೆ ಮಾಡಿದ್ದಾರೆ. ಬೀಚ್ ಸಾರ್ವಜನಿಕ ಪ್ರದೇಶ ಅಲ್ಲಿ ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಪೊಲೀಸರಿಗೆ ಮಾಡೆಲ್ ಪ್ರಶ್ನೆ ಮಾಡಿದ್ದಾಳೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಪರ-ವಿರೋಧಗಳು ವ್ಯಕ್ತವಾಗಿವೆ. ಫ್ಯಾಷನ್ ವಲಯದಲ್ಲಿ ಪೊಲೀಸರ ನಡೆಗೆ ವಿರೋಧಗಳು ವ್ಯಕ್ತವಾಗಿವೆ.
ಮಹಿಳೆ ವಿರುದ್ಧ ಹಿಂದೂ ಸಂಘಟನೆಗಳು ಗರಂ
ಉಡುಪಿಯ ಪಡುಕೆರೆ ಬೀಚ್ನಲ್ಲಿ ಬಿಕಿನಿ ಫೋಟೋಶೂಟ್ ವಿಚಾರವಾಗಿ ಹಿಂದು ಸಂಘಟನೆಗಳು ಗರಂ ಆಗಿವೆ. ಬಿಕಿನಿ ಫೋಟೋ ವೈರಲ್ ಬೆನ್ನಲ್ಲೇ ಬಿಕಿನಿ ಫೋಟೋಶೂಟ್ಗೆ ಉಡುಪಿಯಲ್ಲಿ ಅವಕಾಶವಿಲ್ಲ. ಅಸಭ್ಯ ವರ್ತನೆಗೆ ತುಳುನಾಡಲ್ಲಿ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಪುತ್ತೂರು : ಮನೆಯಲ್ಲಿ ವೇಶ್ಯಾವಾಟಿಕೆ ಆರೋಪ ; ಇಬ್ಬರು ಮಹಿಳೆಯರು ಪೊಲೀಸ್ ವಶಕ್ಕೆ – vishwanews24
