ಉಡುಪಿ: ಪರ್ಯಾಯ ಮೆರವಣಿಗೆಗೆ ಮುಖ್ಯಮಂತ್ರಿಗಳು ಅನುಮತಿ ನೀಡಬೇಕು: ಶಾಸಕ ರಘುಪತಿ ಭಟ್ ಮನವಿ – Vishwanews24
ಉಡುಪಿ: ಪರ್ಯಾಯ ಮೆರವಣಿಗೆಗೆ ಮುಖ್ಯಮಂತ್ರಿಗಳು ಅನುಮತಿ ನೀಡಬೇಕು: ಶಾಸಕ ರಘುಪತಿ ಭಟ್ ಮನವಿ – Vishwanews24
ಉಡುಪಿ: ಇದೇ ತಿಂಗಳ ಹದಿನೆಂಟರಂದು ಮುಂಜಾನೆ ನಡೆಯಲಿರುವ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಸ್ವಾಮಿಗಳ ಪರ್ಯಾಯದ ಮೆರವಣಿಗೆಗೆ ಮುಖ್ಯಮಂತ್ರಿಗಳು ಅನುಮತಿ ನೀಡಬೇಕು.ಈ ಸಂಬಂಧ ಮುಖ್ಯಮಂತ್ರಿಗಳಲ್ಲಿ ಅನುಮತಿ ಕೇಳಿದ್ದೇವೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿಸ ಅವರು ,.ಕೋವಿಡ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಕೇವಲ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಲಿದೆ. ಸಂಪ್ರದಾಯ ದಂತೆ ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ ಮಾಡಲು ಅನುಮತಿ ನೀಡಬೇಕು.ಉಳಿದಂತೆ ಪರ್ಯಾಯ ಮಹೋತ್ಸವವನ್ನು ಸರಳವಾಗಿ ಕೋವಿಡ್ ನಿಯಮದಂತೆ ಮಾಡಲು ಸ್ವಾಗತ ಸಮಿತಿ ನಿರ್ಧಾರ ಮಾಡಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಕೊರೊನಾ ಪಾಸಿಟೀವ್ – Vishwanews24
ಇವತ್ತು ಸಂಜೆ ಪುರಪ್ರವೇಶ ಹಿನ್ನೆಲೆಯಲ್ಲಿ ಸ್ವಾಮಿಗಳನ್ನು ತೆರೆದ ವಾಹನದಲ್ಲಿ ಶ್ರೀಕೃಷ್ಣಮಠಕ್ಕೆ ಗೌರವ ಪೂರ್ವಕವಾಗಿ ಕರೆತರಲಾಗುವುದು. ಈ ವೇಳೆ ವೈಭವದ ಮೆರವಣಿಗೆ ಆಯೋಜನೆಯಾಗಿತ್ತು. ಆದರೆ ನಿಯಮಾವಳಿಗಳ ಹಿನ್ನೆಲೆಯಲ್ಲಿ ಕಲಾತಂಡಗಳು ಹಾಗೂ ಇತರ ಟ್ಯಾಬ್ಲೋ ಗಳನ್ನು ರದ್ದುಗೊಳಿಸಲಾಗಿದೆ. ಸ್ಥಳೀಯ ಗಣ್ಯರನ್ನು ಒಳಗೊಂಡಂತೆ 200 ಜನಕ್ಕೆ ಸೀಮಿತವಾಗಿ ಪುರಪ್ರವೇಶ ಮೆರವಣಿಗೆ ನಡೆಯಲಿದೆ. ನೈಟ್ ಕರ್ಪ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾತ್ರಿ ಒಂಭತ್ತು ಗಂಟೆಗೆ ಮುಂಚಿತವಾಗಿ ರಥಬೀದಿಯಲ್ಲಿ, ಕೃಷ್ಣಾಪುರ ಶ್ರೀಗಳಿಗೆ ಪೌರಸಮ್ಮಾನ ಏರ್ಪಡಲಿದೆ. ಈ ವೇಳೆ ಯಾವುದೇ ಸಾರ್ವಜನಿಕರಿಂದ ಸನ್ಮಾನಕ್ಕೆ ಅವಕಾಶವಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ : ಇಂದಿನಿಂದ ಜಿಲ್ಲೆಯ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ – Vishwanews24
