ಉಡುಪಿ: ಬಸ್ನಲ್ಲಿ ಕಳೆದುಕೊಂಡ ನಾಲ್ಕುವರೆ ಲಕ್ಷ ಮೌಲ್ಯದ ವಜ್ರದ ಕರಿಮಣಿಯನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ ಹಾಗೂ ನಿರ್ವಾಹಕ – Vishwanews24
ಉಡುಪಿ: ಬಸ್ನಲ್ಲಿ ಕಳೆದುಕೊಂಡ ನಾಲ್ಕುವರೆ ಲಕ್ಷ ಮೌಲ್ಯದ ವಜ್ರದ ಕರಿಮಣಿಯನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ ಹಾಗೂ ನಿರ್ವಾಹಕ
ಉಡುಪಿ: ಬಸ್ನಲ್ಲಿ ಕಳೆದುಕೊಂಡ ನಾಲ್ಕುವರೆ ಲಕ್ಷ ಮೌಲ್ಯದ ವಜ್ರದ ಕರಿಮಣಿಯೊಂದನ್ನು ಮರಳಿಸುವ ಮೂಲಕ ಬಸ್ ಚಾಲಕ ಪುರಂದರ ಹಾಗೂ ನಿರ್ವಾಹಕ ಆಸಿಫ್ ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಮಣಿಪಾಲದಿಂದ ಮಂಗಳೂರಿಗೆ ತೆರಳುವ ರೇಷ್ಮಾ ಹೆಸರಿನ ಖಾಸಗಿ ಬಸ್ಸಿನಲ್ಲಿ ಸುಮಾರು ನಾಲ್ಕುವರೆ ಲಕ್ಷ ಮೌಲ್ಯದ ವಜ್ರದ ಕರಿಮಣಿಯೊಂದು ಪತ್ತೆಯಾಗಿದ್ದು, ಇದೀಗ ಅದರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಇನ್ನು ಬಸ್ ನಲ್ಲಿ ಕಳೆದುಕೊಂಡ ವಸ್ತುಗಳನ್ನು ಮರಳಿಸುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿದ್ದು, ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಉಳ್ಳಾಲ:ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ – Vishwanews24
