ಉಡುಪಿ: ಬಾಡಿಗೆ ಮನೆಯ ಠೇವಣಿ ಹಣವನ್ನು ಮರಳಿ ನೀಡಿಲ್ಲ ಎಂಬ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ಎರಚಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಆರೋಪಿ ಸುರೇಶ್ ಆಚಾರ್ಯ(48) ಅಕ್ಕಸಾಲಿಗನಾಗಿದ್ದು, ಮಾರಕಾಯುಧ ಸಮೇತ ಆಸಿಡ್ ಹಿಡಿದು ಅಂಗಡಿಗೆ ನುಗ್ಗಿ ಮಾಲಕ ನವೀನ್ ಕುಮಾರ್ ಅವರ ಮೇಲೆ ಎರಚಿದ್ದಾನೆ. ಘಟನೆಯಲ್ಲಿ ಇಂದ್ರಾಳಿ ಬುಡ್ಡಾರು ನಿವಾಸಿ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬಾಡಿಗೆ ಮನೆಯ ಠೇವಣಿ ಹಣವನ್ನು ಹಿಂದಿರುಗಿಸುವ ವಿಚಾರದಲ್ಲಿ ಉಂಟಾದ ವಿವಾದ ದಾಳಿಗೆ ಕಾರಣ ಎಂದು ಹೇಳಲಾಗಿದೆ. ಪೊಲೀಸರು ಆರೋಪಿ ಸುರೇಶ್ ಆಚಾರ್ಯನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನವೀನ್ ಅವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆರೋಪಿ ಸುರೇಶ್ ಆಚಾರ್ಯ, ಮನೆ ಖಾಲಿ ಮಾಡುವ ವೇಳೆ ತಾನು ನೀಡಿದ್ದ 20 ಸಾವಿರ ರೂ. ಡೆಪಾಸಿಟ್ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದ. ಆದರೆ, ಸುಸ್ಥಿತಿಯಲ್ಲಿದ್ದ ಬಾಡಿಗೆ ಮನೆಯನ್ನು ಹಾಳು ಮಾಡಿದ್ದ ಎಂಬ ಕಾರಣಕ್ಕೆ ನವೀನ್ ಡೆಪಾಸಿಟ್ ಮೊತ್ತವನ್ನು ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ. ಈ ವಿಚಾರವಾಗಿ ಈ ಹಿಂದೆಯೂ ಇಬ್ಬರ ನಡುವೆ ಚರ್ಚೆ ನಡೆದಿದ್ದು, ನಿನ್ನೆ ಮತ್ತೆ ನವೀನ್ ಅವರ ಅಂಗಡಿಗೆ ತೆರಳಿದ್ದ ಆರೋಪಿ ಹಣದ ವಿಚಾರವಾಗಿ ಮಾತುಕತೆ ನಡೆಸಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಸುರೇಶ್ ಆಚಾರ್ಯ, ತನ್ನ ಸ್ಕೂಟಿಯಲ್ಲಿ ತಂದಿದ್ದ ತಲವಾರು ಹಾಗೂ ಆಸಿಡ್ ಹೊರತೆಗೆದು ದಾಳಿ ನಡೆಸಿ, ಕೃತ್ಯದ ಬಳಿಕ ಅದೇ ಸ್ಕೂಟಿಯಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕಾಸರಗೋಡು : ಲಾಡ್ಜ್‌ನಲ್ಲಿ ಎಂಡಿಎಂಎ ಪತ್ತೆ: ಇಬ್ಬರ ಬಂಧನ ಕಾಸರಗೋಡು: ಲಾಡ್ಜ್ ನಲ್ಲಿ ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಯುವತಿ ಮತ್ತು…
ಕೊಂಕಣ ರೈಲ್ವೆ ವಿಲೀನ: ಮಹಾರಾಷ್ಟ್ರ ಸಿಎಂ ಭೇಟಿಯಾದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ: ಕೊಂಕಣ ರೈಲ್ವೆಯನ್ನು ಭಾರತೀಯ…
ಕಾರ್ಕಳ: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ : ನ. 1ರಂದು ಅಟ್ಟಳಿಗೆ ಮುಹೂರ್ತ ಸ್ವಾಮಿಯ ಸನ್ನಿಧಿಯಲ್ಲಿ ಬೆಳಗ್ಗೆ 7.30ರಿಂದ ಪಾದಾಭಿಷೇಕ..…
ಇಂದಿನಿಂದ 13 ದಿನ ಹಾಸನಾಂಬೆ ಜಾತ್ರೆ: ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ…
ಉಡುಪಿ: ಸಿಎಂ ಡಿಕೆಶಿ ಅವರನ್ನು ಭೇಟಿಯಾದ ಆಭರಣ ಎಂಡಿ ಡಾ| ಪ್ರತಾಪ್ ಮಧುಕರ್ ಕಾಮತ್ ಆಭರಣ ಸಂಸ್ಥಾಪಕರ ಜನ್ಮ ವರ್ಷಾಚರಣೆ…
ಅಗ್ರಿಗೋಲ್ಡ್ ವಂಚನೆ ಪ್ರಕರಣ: ಉಡುಪಿಯಲ್ಲಿ ಎಸ್‌ಪಿ ಕಚೇರಿಯಲ್ಲಿ 600ಕ್ಕೂ ಅಧಿಕ ಸಂತ್ರಸ್ತರು ಸಂತ್ರಸ್ತರ ಬಾಂಡ್ ಪರಿಶೀಲನೆಗೆ ಉಡುಪಿ ಎಸ್‌ಪಿ ಕಚೇರಿಯಲ್ಲಿ…