Featured

ಉಡುಪಿ:  ಸಿಎಂ ಡಿಕೆಶಿ ಅವರನ್ನು ಭೇಟಿಯಾದ ಆಭರಣ ಎಂಡಿ ಡಾ| ಪ್ರತಾಪ್ ಮಧುಕರ್ ಕಾಮತ್ – vishwanews24

ಉಡುಪಿ:  ಸಿಎಂ ಡಿಕೆಶಿ ಅವರನ್ನು ಭೇಟಿಯಾದ ಆಭರಣ ಎಂಡಿ ಡಾ| ಪ್ರತಾಪ್ ಮಧುಕರ್ ಕಾಮತ್

ಆಭರಣ ಸಂಸ್ಥಾಪಕರ ಜನ್ಮ ವರ್ಷಾಚರಣೆ ಸ್ಮರಣಾರ್ಥ ಚಿನ್ನದ ನಾಣ್ಯ ಅನಾವರಣ ..

ಉಡುಪಿ: ರಾಜ್ಯದ ಪ್ರತಿಷ್ಠಿತ ಪಾರಂಪರಿಕ ಚಿನ್ನಾಭರಣ ಸಂಸ್ಥೆಗಳಲ್ಲಿ ಒಂದಾದ “ಆಭರಣ’ದ ಸಂಸ್ಥಾಪಕರಾದ ಬುರ್ಡೆ ಸದಾನಂದ ಕಾಮತ್ ಅವರ 125ನೇ ಜನ್ಮ ವರ್ಷಾಚರಣೆಯ ಸ್ಮರಣಾರ್ಥ ವಿಶೇಷವಾಗಿ ರೂಪಿಸಲಾದ ನಾಣ್ಯವನ್ನು ಆಭರಣದ ವ್ಯವಸ್ಥಾಪಕ ನಿರ್ದೇಶಕ ಡಾ| ಪ್ರತಾಪ್ ಮಧುಕರ್ ಕಾಮತ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವ ನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ ನಾಣ್ಯ ಪ್ರದರ್ಶಿಸಿದರು..

ಈ ಸಂದರ್ಭ ಸೌಹಾರ್ದಯುತವಾಗಿ ನಡೆದ ಮಾತುಕತೆಯಲ್ಲಿ ಮುಖ್ಯಮಂತ್ರಿ ಅವರು ಆಭರಣದ ಕುಟುಂಬದೊಂದಿಗಿನ ತಮ್ಮ ದೀರ್ಘಕಾಲದ ಅವಿನಾಭಾವ ಸಂಬಂಧ ಸ್ಮರಿಸಿದರು. ಸ್ಮರಣಾರ್ಥ ನಾಣ್ಯದ ಸುಂದರ ವಿನ್ಯಾಸ ಹಾಗೂ ಸೂಕ್ಷ್ಮ ಕಲಾಕೌಶಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಡಾ| ಪ್ರತಾಪ್ ಮಧುಕರ್ ಕಾಮತ್ ಅವರ ಮುಂದಿನ ಎಲ್ಲ ಯೋಜನೆಗಳಿಗೆ ಶುಭ ಹಾರೈಸಿದರು.

‘ಆಭರಣ’ ಸಂಸ್ಥಾಪಕರು ದಿ| ಬುರ್ಡೆ ಸದಾನಂದ ಕಾಮತ್
ಆಭರಣ ಸಂಸ್ಥೆಯ ಸಂಸ್ಥಾಪಕರಾದ ದಿ| ಬುರ್ಡೆ ಸದಾನಂದ ಕಾಮತ್ ಅವರ 125ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಇತ್ತೀಚೆಗೆ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿರುವ ತನ್ನ ಮಳಿಗೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ 4 ಗ್ರಾಂ ತೂಕದ ಚಿನ್ನದ ನಾಣ್ಯವನ್ನು ಅನಾವರಣಗೊಳಲಾಗಿತ್ತು.

1901ರಲ್ಲಿ ಜನಿಸಿದ ಬುರ್ಡೆ ಸದಾನಂದ ಕಾಮತ್‌ ಅವರು 1935ರಲ್ಲಿ ಉಡುಪಿಯಲ್ಲಿ “ನಿಯೋ ಜುವೆಲರಿ ಮಾರ್ಟ್’ ಎಂಬ ಹೆಸರಿನಲ್ಲಿ ತಮ್ಮ ಮೊದಲ ಚಿನ್ನಾಭರಣ ಮಳಿಗೆ ಸ್ಥಾಪಿಸಿದ್ದರು. ಇದರೊಂದಿಗೆ ಒಂಬತ್ತು ದಶಕಗಳಿಗೂ ಮೀರಿದ ಕುಟುಂಬದ ಚಿನ್ನಾಭರಣ ಉದ್ಯಮದ ಪರಂಪರೆಗೆ ಅಡಿಪಾಯ ಹಾಕಿದರು. ಬಳಿಕ ಅವರ ಪುತ್ರ ಮಧುಕರ್ ಸದಾನಂದ ಕಾಮತ್ ಅವರು “ಆಭರಣ’ ಹೆಸರಿನಲ್ಲಿ ಉದ್ಯಮವನ್ನು ವಿಸ್ತರಿಸಿ, 1983ರಲ್ಲಿ ಬೆಂಗಳೂರಿನಲ್ಲಿ ಸಂಸ್ಥೆಯ ಕಾರ್ಯಾಚರಣೆ ಆರಂಭಿಸಿದರು. ಪ್ರಸ್ತುತ ಆಭರಣ ಬೆಂಗಳೂರಿನಲ್ಲಿ ನಾಲ್ಕು ಮಳಿಗೆಗಳನ್ನು ಹೊಂದಿದ್ದು, ತಾಜ್ ವೆಸ್ಟ್ ಎಂಡ್‌ನಲ್ಲಿರುವ ರೋಲಿಕ್ಸ್ ಬೂಟಿಕ್ ಕೂಡ ಇದರ ಭಾಗವಾಗಿದೆ.

Vishwa News 24

Recent Posts

ಕಾರ್ಕಳ: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ : ನ. 1ರಂದು ಅಟ್ಟಳಿಗೆ ಮುಹೂರ್ತ – vishwanews24 https://wp.me/p9KQap-v49

ಕಾರ್ಕಳ: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ : ನ. 1ರಂದು ಅಟ್ಟಳಿಗೆ ಮುಹೂರ್ತ ಸ್ವಾಮಿಯ ಸನ್ನಿಧಿಯಲ್ಲಿ ಬೆಳಗ್ಗೆ 7.30ರಿಂದ ಪಾದಾಭಿಷೇಕ..…

2 minutes ago

ಇಂದಿನಿಂದ 13 ದಿನ ಹಾಸನಾಂಬೆ ಜಾತ್ರೆ: ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ – vishwanews24

ಇಂದಿನಿಂದ 13 ದಿನ ಹಾಸನಾಂಬೆ ಜಾತ್ರೆ: ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ…

16 minutes ago

ಉಡುಪಿ: ಬಾಡಿಗೆ ಮನೆಯ ಹಣದ ವಿವಾದ : ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ ; ಆರೋಪಿ ಬಂಧನ – vishwanews24

ಉಡುಪಿ: ಬಾಡಿಗೆ ಮನೆಯ ಹಣದ ವಿವಾದ : ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ ; ಆರೋಪಿ ಬಂಧನ ಉಡುಪಿ:…

44 minutes ago

ಅಗ್ರಿಗೋಲ್ಡ್ ಸಂತ್ರಸ್ತರ ಬಾಂಡ್ ಪರಿಶೀಲನೆಗೆ ಉಡುಪಿ ಎಸ್‌ಪಿ ಕಚೇರಿಯಲ್ಲಿ ದಿನ ನಿಗದಿ – vishwanews24

ಅಗ್ರಿಗೋಲ್ಡ್ ವಂಚನೆ ಪ್ರಕರಣ: ಉಡುಪಿಯಲ್ಲಿ ಎಸ್‌ಪಿ ಕಚೇರಿಯಲ್ಲಿ 600ಕ್ಕೂ ಅಧಿಕ ಸಂತ್ರಸ್ತರು  ಸಂತ್ರಸ್ತರ ಬಾಂಡ್ ಪರಿಶೀಲನೆಗೆ ಉಡುಪಿ ಎಸ್‌ಪಿ ಕಚೇರಿಯಲ್ಲಿ…

53 minutes ago

ಮಂಗಳೂರು : 9ನೇ ತರಗತಿ ಬಾಲಕಿ ಅಪಹರಣ ಪ್ರಕರಣ ; ಬಾಗಲಕೋಟೆ ಮೂಲದ ಯುವಕ ಬಂಧನ – vishwanews24

ಮಂಗಳೂರು : 9ನೇ ತರಗತಿ ಬಾಲಕಿ ಅಪಹರಣ ಪ್ರಕರಣ ; ಬಾಗಲಕೋಟೆ ಮೂಲದ ಯುವಕ ಬಂಧನ ಮಂಗಳೂರು: ಶಾಲೆಗೆ ತೆರಳುತ್ತಿದ್ದ…

1 hour ago

ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ ‘ಅರ್ನಬ್’ ಚಂಡಮಾರುತ …-vishwanews24

ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ ‘ಅರ್ನಬ್’ ಚಂಡಮಾರುತ ... ಪ್ರತಿ ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಆಂಧ್ರಪ್ರದೇಶ, ಒಡಿಶಾದ…

24 hours ago