ಉಡುಪಿ : ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಾತಿ ಜ್ವಾಲೆಯನ್ನು ಹುಟ್ಟು ಹಾಕಿ ಉಡುಪಿ- ಮಂಗಳೂರನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿದರು : ಸಿದ್ದರಾಮಯ್ಯ ವಾಗ್ದಾಳಿ -Vishwanews24
ಉಡುಪಿ : ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಾತಿ ಜ್ವಾಲೆಯನ್ನು ಹುಟ್ಟು ಹಾಕಿ ಉಡುಪಿ- ಮಂಗಳೂರನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿದರು : ಸಿದ್ದರಾಮಯ್ಯ ವಾಗ್ದಾಳಿ -Vishwanews24
ಕೆಟ್ಟ ಭ್ರಷ್ಟ ಸರಕಾರವನ್ನು ತೆಗೆದು ಹಾಕಿ ಕಾಂಗ್ರೆಸ್ಗೆ ಮತ್ತೊಮ್ಮೆ ಅವಕಾಶ ಕೊಡಿ..
ಬಿಜೆಪಿ ಬಂದ ಮೇಲೆ ಮಧ್ಯಮ ವರ್ಗ, ಬಡವರ ಬಾಳು ದುಸ್ತರವಾಗಿದೆ..
ಉಡುಪಿ,: “ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಾತಿ ಜ್ವಾಲೆಯನ್ನು ಹುಟ್ಟು ಹಾಕಿದರು. ಉಡುಪಿ- ಮಂಗಳೂರನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿದರು” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಉಡುಪಿಯಲ್ಲಿ ಆರು ದಿನದ ಜನದ್ವನಿ ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡುತ್ತೇವೆ. ಈಗ ಕೊಡುತ್ತಿರುವ 7 ಕೆ.ಜಿಯಲ್ಲಿ ಎರಡು ಕೆ.ಜಿ ಕಡಿತ ಮಾಡಿದ್ದಾರೆ ಬಿಜೆಪಿ ಸರಕಾರ. ಹಾಗಾಗಿ ಕೆಟ್ಟ ಭ್ರಷ್ಟ ಸರಕಾರವನ್ನು ತೆಗೆದು ಹಾಕಿ ಕಾಂಗ್ರೆಸ್ಗೆ ಮತ್ತೊಮ್ಮೆ ಅವಕಾಶ ಕೊಡಿ” ಎಂದು ಹೇಳಿದರು.
“ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಾತಿ ಜ್ವಾಲೆಯನ್ನು ಹುಟ್ಟು ಹಾಕಿದರು. ಉಡುಪಿ- ಮಂಗಳೂರನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿದರು. ಮನುಷ್ಯ ಮನುಷ್ಯನನ್ನು ದ್ವೇಷಿಸಬಾರದು. ಪ್ರತಿಯೊಬ್ಬರನ್ನು ಪ್ರೀತಿಸಬೇಕು. ಅದು ಪ್ರಾಥಮಿಕ ಕರ್ತವ್ಯ. ಬಿಜೆಪಿಯವರು ಮಾನವರೇ ಅಲ್ಲ. ವಿಶ್ವಮಾನವರಾಗಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದರು.
ನನ್ನ ಹೆಸರಲ್ಲೇ ರಾಮ ಇದೆ. ಎಲ್ಲರೂ ಹಿಂದುಗಳು, ಭಾರತೀಯರು. ನಾವು ಮಹಾತ್ಮ ಗಾಂಧಿಯ ಹಿಂದುತ್ವ ಪಾಲನೆ ಮಾಡುತ್ತೇವೆ. ಬಿಜೆಪಿಯವರು ಸಾವರ್ಕರ್ ಹಿಂದುತ್ವ ಪಾಲನೆ ಮಾಡುತ್ತಾರೆ. ಗಾಂಧೀಜಿ ಅವರನ್ನು ಕೊಂದವರನ್ನು ಆರಾಧಿಸುತ್ತಾರೆ. ರಕ್ತಪಾತ ಮಾಡಿಸಿ ಮತ್ತೆ ಹಿಂದು ಪರವಾಗಿದ್ದೇವೆ ಅಂತ ಬಿಜೆಪಿ ಹೇಳುತ್ತಾರೆ” ಎಂದರು.
“ನಮ್ಮ ಸಂವಿಧಾನದಲ್ಲಿ ನಮ್ಮ ಧರ್ಮ ಬಗ್ಗೆ ನಿಷ್ಠೆ ಇರಬೇಕು. ಪರಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು. ಬಿಜೆಪಿ ಬಂದ ಮೇಲೆ ಮಧ್ಯಮ ವರ್ಗ, ಬಡವರ ಬಾಳು ದುಸ್ತರವಾಗಿದೆ” ಎಂದು ಕಿಡಿಕಾರಿದರು.
