ಉಡುಪಿ: ಬ್ಯಾಡ್ಮಿಂಟನ್‌ ತಾರೆ ಆಯುಷ್ ಶೆಟ್ಟಿಗೆ ಮುಖ್ಯಮಂತ್ರಿಯಿಂದ ಗೌರವಾರ್ಪಣೆ – vishwanews24

Featured, ಉಡುಪಿ

ಉಡುಪಿ: ಬ್ಯಾಡ್ಮಿಂಟನ್‌ ತಾರೆ ಕಾರ್ಕಳದ ಆಯುಷ್ ಶೆಟ್ಟಿಗೆ ಮುಖ್ಯಮಂತ್ರಿಯಿಂದ ಗೌರವಾರ್ಪಣೆ

ಉಡುಪಿ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಕಾರ್ಕಳದ ಆಯುಷ್ ಶೆಟ್ಟಿ ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಕಚೇರಿಯಲ್ಲಿ ಅಭಿನಂದಿಸಿ ಶಾಲು ಹಾಕಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿಜಯಕುಮಾ‌ ಸೊರಕೆ, ಮಾಜಿ ಸಂಸದ ಜಯಪುಕಾಶ್ ಹೆಗ್ಡೆ, ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಆಯುಶ್ ಶೆಟ್ಟಿಯವರ ತಂದೆ ರಾಮ ಪುಕಾಶ್ ಶೆಟ್ಟಿ, ತಾಯಿ ಶಾಲ್ಮಲಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:

ಎಸ್‌ ಎಸ್‌ ಎಲ್‌ ಸಿ ಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬೇಡ, ಅಂಕವನ್ನೇ ಕೊಡಿ : ಹೈಕೋರ್ಟ್ – vishwanews24

ಆಯುಶ್ ಶೆಟ್ಟಿಯವರು ಚೀನಾದ ನಿಂಗೋದಲ್ಲಿ ನಡೆದ ಪಂದ್ಯಾಟದಲ್ಲಿ ವಿಶ್ವದ ನಂ.1 ಆಟಗಾರ ಕುನ್ಹಾವುತ್ ವಿಟೆಲ್ಸರ್ನ್ ಅವರನ್ನು ಭರ್ಜರಿಯಾಗಿ ಸೋಲಿಸಿ ಫೈನಲ್ ಪುವೇಶಗೈದು 61 ವರ್ಷದ ಬಳಿಕ ಭಾರತಕ್ಕೆ ಬೆಳ್ಳಿ ಪದಕದ ಸಾಧನೆ ಮಾಡಿದ್ದರು.

Leave a Reply