ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್ ಅಲರ್ಟ್ ಘೋಷಣೆ – vishwanews24
ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್ ಅಲರ್ಟ್ ಘೋಷಣೆ
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಉಡುಪಿ: ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಜುಲೈ 2 ಮತ್ತು 3ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಕರಾವಳಿಯ ಹಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ – vishwanews24
ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
